ಬಿಗ್ ಇನ್ನಿಂಗ್ಸ್ ಆಡಲು ವಿಫಲಗೊಂಡಿರುವ ವಿರಾಟ್‌ಗೆ, ಉತ್ತಮ ಸಲಹೆ ನೀಡಿದ ಬ್ಯಾಟಿಂಗ್ ಕೋಚ್

ವಿಶ್ವ ಕ್ರಿಕೆಟ್‌ನ ಅತ್ತುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬನಾದ ವಿರಾಟ್ ಕೊಹ್ಲಿ ಬ್ಯಾಟ್ ಕಳೆದ ಎರಡು ವರ್ಷಗಳಿಂದ ಮಂಕಾಗಿದೆ. ಕೊಹ್ಲಿಯ 71ನೇ ಅಂತರಾಷ್ಟ್ರೀಯ ಶತಕ ನೋಡಲು ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಮೂರಂಕಿ ಗಡಿ ದಾಟಲು ವಿರಾಟ್ ಕೊಹ್ಲಿಗೆ ಕಳೆದೆರಡು ವರ್ಷಗಳಿಂದ ಸಾಧ್ಯವಾಗಿಲ್ಲ ಅಂದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ.
ಶತಕದ ಮೇಲೆ ಶತಕ ಸಿಡಿಸುತ್ತಿದ್ದ ಹಳೆಯ ಕೊಹ್ಲಿಯನ್ನ ನೋಡಿ ಬಹಳ ಸಮಯವೇ ಆಗಿ ಹೋಗಿದೆ. ವಿರಾಟ್ ಕೊಹ್ಲಿಗೆ ಬಿಗ್ ಇನ್ನಿಂಗ್ಸ್ ಏಕೆ ಕಲೆಹಾಕಲು ಸಾಧ್ಯವಾಗಿಲ್ಲ ಎಂಬುದು ಅನೇಕ ಬಾರಿ ಚರ್ಚೆಗೆ ಒಳಗಾಗಿದೆ. ಆದ್ರೆ ಈಗ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಕೊಹ್ಲಿಗೆ ಉತ್ತಮ ಸಲಹೆ ನೀಡಿದ್ದಾರೆ.

ಕವರ್ ಡ್ರೈವ್ ಶಾಟ್ ಬಿಡಬಾರದು ಎಂದ ರಾಥೋರ್
ಡಿಸೆಂಬರ್ 29ರಂದು ಬುಧವಾರ ವಿರಾಟ್ ಕೊಹ್ಲಿ ಮತ್ತೊಮ್ಮೆ ಕವರ್ ಡ್ರೈವ್ ಶಾಟ್ ಹೊಡೆಯಲು ವಿಫಲರಾಗಿ ವಿಕೆಟ್ ಒಪ್ಪಿಸಿದ್ರು. ಆದ್ರೆ ವಿರಾಟ್ ಪದೇ ಪದೇ ಔಟಾದ್ರೂ ಕೂಡ ತಮ್ಮ ಫೇವರಿಟ್ ಶಾಟ್‌ಗಳಲ್ಲಿ ಒಂದಾದ ಕವರ್ ಡ್ರೈವ್ ಶಾಟ್ ನಿಲ್ಲಿಸಬಾರದು ಎಂದು ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.
ವಿರಾಟ್ ಆಫ್‌ಸ್ಟಂಪ್ ಕಡೆಗೆ ಬಂದ ಚೆಂಡನ್ನ ಹೊಡೆಯಲು ಪ್ರಯತ್ನಿಸಿ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು. ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ನಲ್ಲೂ ವಿರಾಟ್ ಕೊಹ್ಲಿ ಇದೇ ರೀತಿಯಲ್ಲಿ ಔಟಾಗಿದ್ದನ್ನ ಗಮನಿಸಬಹುದು.

ಕಳೆದ ಕೆಲವು ತಿಂಗಳಲ್ಲಿ ಒಂದೇ ರೀತಿಯಲ್ಲಿ ಔಟಾಗುತ್ತಿರುವ ಕೊಹ್ಲಿ
33 ವರ್ಷದ ವಿರಾಟ್ ಕೊಹ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಹೆಚ್ಚು ಔಟಾಗಿದ್ದನ್ನ ಕಾಣಬಹುದು. ಹೀಗಾಗಿ ಕೆಲವು ಕ್ರಿಕೆಟ್ ತಜ್ಞರು ಮತ್ತು ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ಕವರ್ ಡ್ರ್ರೈವ್ ಶಾಟ್ ಹೊಡೆಯುವದನ್ನ ನಿಲ್ಲಿಸಬೇಕು. ಹಾಗಿದ್ರೆ ಮಾತ್ರ ಹೆಚ್ಚು ರನ್ ಕಲೆಹಾಕಲು ಸಾಧ್ಯ ಎನ್ನಲಾಗಿದೆ.
ಸಚಿನ್ ತೆಂಡೂಲ್ಕರ್ ಒಮ್ಮೆ ಇದೇ ರೀತಿಯಲ್ಲಿ ಮಾಡಿದಾಗ ಸಿಡ್ನಿಯಲ್ಲಿ 241ರನ್‌ಗಳ ಅಮೋಘ ಆಟ ಪ್ರದರ್ಶಿಸಿದ್ರು.

ಕೊಹ್ಲಿ ಕವರ್ ಡ್ರೈವ್ ಹೊಡೆಯುವುದನ್ನ ಮುಂದುವರಿಸಲಿ: ರಾಥೋರ್
ಆದ್ರೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಪ್ರಕಾರ ವಿರಾಟ್ ಕೊಹ್ಲಿ ಕವರ್ ಡ್ರೈವ್ ಶಾಟ್ ಹೊಡೆಯುವುದನ್ನ ಮುಂದುವರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ವಿರಾಟ್ ಯಾರ ಮಾತನ್ನೂ ಕೇಳದೆ ತಮ್ಮ ಸ್ವಾಭಾವಿಕ ಆಟ ಆಡಬೇಕು ಎಂದಿದ್ದಾರೆ.
"ಕವರ್ ಡ್ರೈವ್ ಅವರಿಗೆ (ಕೊಹ್ಲಿ) ಸಾಕಷ್ಟು ರನ್‌ಗಳನ್ನು ತಂದುಕೊಡುವ ಹೊಡೆತಗಳಾಗಿವೆ ಮತ್ತು ಇದು ಅವರ ಸ್ಕೋರಿಂಗ್ ಶಾಟ್ ಆಗಿದೆ. ಅವರು ಆ ಹೊಡೆತವನ್ನು ಆಡಬೇಕಾಗಿದೆ ಮತ್ತು ಯಾವಾಗಲೂ ನಿಮ್ಮ ಬಲವು ನಿಮ್ಮ ದೌರ್ಬಲ್ಯವಾಗಿ ಹೊರಹೊಮ್ಮುತ್ತದೆ ಎಂದು ನಾನು ಭಾವಿಸುತ್ತೇನೆ'' ಎಂದು ವಿಕ್ರಮ್ ರಾಥೋರ್ ಹೇಳಿದ್ದಾರೆ.
"ನೀವು ಒಂದು ನಿರ್ದಿಷ್ಟ ಶಾಟ್ ಅನ್ನು ಆಡದಿದ್ದರೆ, ನೀವು ಎಂದಿಗೂ ಆ ಶಾಟ್‌ನಿಂದ ಹೊರಬರುವುದಿಲ್ಲ. ನೀವು ಎಂದಿಗೂ ರನ್ ಗಳಿಸುವುದಿಲ್ಲ. ಈಗ ಆ ಶಾಟ್ ಯಾವಾಗ ಆಡಬೇಕು ಎಂಬುದಕ್ಕೆ ನಿರಂತರ ಚರ್ಚೆಗಳು ನಡೆಯುತ್ತಿವೆ,'' ಎಂದು ಬುಧವಾರ ದಿನದಾಟ ಮುಗಿದ ಬಳಿಕ ಹೇಳಿದರು.

ಭಾರತದ ಬ್ಯಾಟ್ಸ್‌ಮನ್‌ಗಳು ತಮ್ಮ ತಂತ್ರವನ್ನ ಬಳಸಬೇಕಿದೆ!
ವಿರಾಟ್ ಕೊಹ್ಲಿ ಸೇರಿದಂತೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ತಂತ್ರವನ್ನು ಸ್ವಲ್ಪ ಬಿಗಿಗೊಳಿಸಬೇಕಾಗಿದೆ ಎಂದು ವಿಕ್ರಮ್ ರಾಥೋರ್ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಭಾರತದ ನಾಯಕ ತನ್ನ ಕವರ್ ಡ್ರೈವ್ ಆಡಲು ಉತ್ತಮ ಎಸೆತಗಳನ್ನು ಆರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ನಾಲ್ಕನೇ ದಿನದಾಟದಂತ್ಯಕ್ಕೆ ಭಾರತದ ಗೆಲುವಿಗೆ 6 ವಿಕೆಟ್‌ಗಳ ಅವಶ್ಯಕತೆಯಿತ್ತು. ದಕ್ಷಿಣ ಆಫ್ರಿಕಾ ಗೆಲುವಿಗೆ 211ರನ್‌ಗಳು ಬೇಕಾಗಿತ್ತು. ಐದನೇ ದಿನ ಊಟದ ವಿರಾಮಕ್ಕೆ ದಕ್ಷಿಣ ಆಫ್ರಿಕಾ 182 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದು ಗೆಲುವಿಗೆ 123ರನ್‌ಗಳು ಬೇಕಿದೆ. ಭಾರತದ ಗೆಲುವಿಗೆ 3 ವಿಕೆಟ್ ಬಾಕಿ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications