IPL 2019: ಟೂರ್ನಿಯ ಅವಿಸ್ಮರಣೀಯ ಪಂದ್ಯ ಮೆಲುಕು ಹಾಕಿದ ವಿರಾಟ್ ಕೊಹ್ಲಿ

ಬೆಂಗಳೂರು, ಮಾರ್ಚ್ 16: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾದ 2008ರಿಂದಲೂ ರಾಯಲ್ ಚಾಲೆಂಜರ್ಸ್ ತಂಡದ ಭಾಗವಾಗಿದ್ದಾರೆ. ಆರ್‌ಸಿಬಿ ನಾಯಕರಾಗಿರುವ ಕೊಹ್ಲಿ ಟೂರ್ನಿಯಲ್ಲಿ ತಂಡದ ಪರ ಆಡಿದ್ದಾಗಿನ ಅವಿಸ್ಮರಣೀಯ ಪಂದ್ಯವನ್ನು ಮೆಲುಕು ಹಾಕಿದ್ದಾರೆ.
ಕೊಹ್ಲಿಗೆ ಆರ್‌ಸಿಬಿ ನಾಯಕ ಜವಾಬ್ದಾರಿ ದೊರೆತಿದ್ದು 2013ರಲ್ಲಿ. ತಂಡದ ಬಲವಾಗಿ ನಿಲ್ಲುವ ವಿರಾಟ್ ಟೂರ್ನಿಯಲ್ಲಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದ ಪಂದ್ಯಗಳನ್ನೂ ನಾವು ನೋಡಿದ್ದೇವೆ. ಐಪಿಎಲ್ ನಲ್ಲಿ ಆರ್‌ಸಿಬಿ ಒಂದು ಸಾರಿಯೂ ಟ್ರೋಫಿ ಜಯಿಸಿಲ್ಲ. ಆದರೂ ಟೂರ್ನಿಯಲ್ಲಿ ಆರ್‌ಸಿಬಿ ಆಕರ್ಷಣೀಯ ತಂಡ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈ ಬಾರಿ ಟೂರ್ನಿ ಆರಂಭದಲ್ಲೇ ಆರ್‌ಸಿಬಿ ಪಂದ್ಯವನ್ನಾಡುತ್ತಿರುವುದರಿಂದ ಸುದ್ದಿಗಾರರು ಐಪಿಎಲ್ ಕುರಿತು ಪ್ರಶ್ನಿಸಿದಾಗ ಹಿಂದಿನ ಪಂದ್ಯವೊಂದನ್ನು ಕೊಹ್ಲಿ ನೆನಪಿಸಿಕೊಂಡರು.

ಟ್ರೋಫಿ ಗೆಲ್ಲದ ಮೂರು ತಂಡಗಳಲ್ಲಿ ಬೆಂಗಳೂರು
ಐಪಿಎಲ್ ಯಾವುದೇ ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲದ ಮೂರು ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಸೇರಿವೆ. ಆರ್‌ಸಿಬಿ ಈ ಬಾರಿ ತಂಡವನ್ನು ಬಲಿಷ್ಠಗೊಳಿಸಿಕೊಂಡಿದ್ದು ಟ್ರೋಫಿ ಬರವನ್ನು ಕೊನೆಗೊಳಿಸುವ ಯೋಜನೆ ಹಾಕಿಕೊಂಡಿದೆ.

ಕೊನೆಯ ಎಸೆತಕ್ಕೆ ಕೊಹ್ಲಿ ಔಟ್!
'ನಾನು ಸರಿಯಾಗಿ ನೆನಪಿಸಿಕೊಳ್ಳಬಲ್ಲೆ. ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಗಾಗಿ ನಾವು 2010ರಂದು ಡರ್ಬನ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿದಿದ್ದೆವು. ಈ ಪಂದ್ಯದಲ್ಲಿ ನಾನು 47 ರನ್ ಗಳಿಸಿದ್ದೆ. ಆದರೆ ಕೊನೇ ಎಸೆತಕ್ಕೆ ಔಟ್ ಆಗಿ ಪಂದ್ಯವನ್ನು ಸೋತಿದ್ದೆವು. ಆರ್‌ಸಿಬಿ ಜೆರ್ಸಿ ಧರಿಸಿದ್ದಾಗಿನ ಅವಿಸ್ಮರಣೀಯ ಪಂದ್ಯವದು' ಎಂದು ಕೊಹ್ಲಿ ಹೇಳಿದರು.

ಆರ್‌ಸಿಬಿಗೆ ಕೇವಲ 2 ರನ್ ಸೋಲು
2010 ಸೆಪ್ಟೆಂಬರ್ 19ರಂದು ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, 20 ಓವರ್‌ಗೆ 7 ವಿಕೆಟ್ ಕಳೆದು 165 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 163 ರನ್ ಬಾರಿಸಿ ಶರಣಾಗಿತ್ತು. ವೇಗಿ ಝಹೀರ್ ಖಾನ್ ಅವರ ಕೊನೆಯ ಎಸೆತಕ್ಕೆ ಕೊಹ್ಲಿ ಓಟ್ ಆಗಿದ್ದರು. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಧವನ್, ತೆಂಡೂಲ್ಕರ್, ಪೊಲಾರ್ಡ್, ಡುಮಿನಿ, ಭಜ್ಜಿ ಅವರಂತ ಆಟಗಾರರಿದ್ದರೆ, ಆರ್‌ಸಿಬಿಯಲ್ಲಿ ಜಾಕ್ಸ್ ಕ್ಯಾಲೀಸ್, ದ್ರಾವಿಡ್, ರಾಸ್ ಟೇಲರ್, ಕೆಮರಾನ್ ವೈಟ್‌ನಂತ ಘಟಾನುಘಟಿಗಳಿದ್ದರು.

ಚೆನ್ನೈ-ಬೆಂಗಳೂರು ಮುಖಾಮುಖಿ
ಮಾರ್ಚ್ 23ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಅರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಚೆನ್ನೈಯಲ್ಲಿ ಕಾದಾಡಲಿವೆ. ಪಂದ್ಯ 8 pmಗೆ ಶುರುವಾಗಲಿದೆ. ಬೆಂಗಳೂರು ತಂಡ 'ಈ ಸಲ ಕಪ್ ಬಿಡಲ್ವೋ ಬಿಡುತ್ತೋ' ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕಪ್ ನಮ್ಮದಾಗಲಿ, ಅಷ್ಟೆ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications