For Quick Alerts
ALLOW NOTIFICATIONS  
For Daily Alerts
 

147 ವರ್ಷಗಳ ಟೆಸ್ಟ್‌ ಇತಿಹಾಸದಲ್ಲೇ ಇದೆ ಮೊದಲು: ವಿರಾಟ್ 58 ರನ್ ಬಾರಿಸುತ್ತಿದ್ದಂತೆ ದೊಡ್ಡ ಮೈಲಿಗಲ್ಲು

ಸೆಪ್ಟೆಂಬರ್ 19 ರಿಂದ ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್ ಪಂದ್ಯ ನಡೆಯಲಿದೆ. ಈ ಟೆಸ್ಟ್‌ ಪಂದ್ಯದಲ್ಲಿ ಗೆಲುವು ದಾಖಲಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನಲ್ಲಿ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳಲು ಭಾರತ ಪ್ಲ್ಯಾನ್ ಮಾಡಿದೆ. ಅಷ್ಟೇ ಅಲ್ಲದೆ ಚೆನ್ನೈ ಟೆಸ್ಟ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ಸೋಲಿಗಿಂತ ಹೆಚ್ಚು ಗೆಲುವು ಕಂಡ ತಂಡ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲಿದೆ.

ಚೆನ್ನೈ ಟೆಸ್ಟ್‌ನಲ್ಲಿ ಹಲವು ಸ್ಟಾರ್ ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ವೇಳೆ ಟೀಮ್ ಇಂಡಿಯಾದ ರನ್‌ ಮಶಿನ್ ವಿರಾಟ್ ಕೊಹ್ಲಿ ಮೇಲೂ ಎಲ್ಲರ ದೃಷ್ಟಿ ನೆಟ್ಟಿದೆ. ವಿರಾಟ್ ಬಾಂಗ್ಲಾ ವಿರುದ್ಧ ಅಮೋಘ ದಾಖಲೆಯನ್ನು ಹೊಂದಿದ್ದಾರೆ. ಈ ದಾಖಲೆಯನ್ನು ಮುಂದುವರೆಸಲು ವಿರಾಟ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಇನ್ನು, ಏಕದಿನ ಹಾಗೂ ಟೆಸ್ಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

Kohli Set to Break Tendulkar s Fastest 27 000 Runs Record in Bangladesh Test Series

ಸಚಿನ್‌ ದಾಖಲೆಯ ಮೇಲೆ ವಿರಾಟ್ ಕಣ್ಣು

ವಿರಾಟ್ ಕೊಹ್ಲಿ ಅವರನ್ನು ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಜೊತೆ ಹೋಲಿಕೆ ಮಾಡುತ್ತಾರೆ. ಸಚಿನ್‌ ಅವರ ಶತಕಗಳ ಶತಕದ ದಾಖಲೆಯ ಬೆನ್ನು ವಿರಾಟ್ ಕೊಹ್ಲಿ ಹತ್ತಿದ್ದಾರೆ. ವಿರಾಟ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 80 ಶತಕ ಬಾರಿಸಿದ್ದಾರೆ. 35 ವರ್ಷದ ವಿರಾಟ್‌ ಚೆನ್ನೈ ಟೆಸ್ಟ್‌ನಲ್ಲೂ ದಾಖಲೆಯೊಂದನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ.

ತೆಂಡೂಲ್ಕರ್ ಯಾವ ದಾಖಲೆಗೆ ಅಪಾಯ

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ 58 ರನ್‌ಗಳನ್ನು ಬಾರಿಸಿದ್ದೇ ಆದಲ್ಲಿ ಸಚಿನ್ ತೆಂಡೂಲ್ಕರ್ ಅವರ ಒಂದು ದಾಖಲೆಯನ್ನು ಅಳಿಸಿ ಹಾಕುತ್ತಾರೆ. ವಿರಾಟ್‌ 58 ರನ್‌ ಬಾರಿಸಿದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27 ಸಾವಿರ ರನ್‌ ಸಾಧನೆ ಮಾಡುತ್ತರೆ. ಅಲ್ಲದೆ ಸಚಿನ್‌ ತೆಂಡೂಲ್ಕರ್‌ 623 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಹಿರಿಮೆ ಹೊಂದಿದ್ದಾರೆ. ಕೊಹ್ಲಿ ಸದ್ಯ 591 ಇನಿಂಗ್ಸ್‌ ಆಡಿದ್ದು ಅವರಿಗೆ ಸಚಿನ್ ಅವರ ದಾಖಲೆಯನ್ನು ಅಳಿಸುವ ಸುವರ್ಣ ಅವಕಾಶ ಇದೆ. ವಿರಾಟ್ ಬತ್ತಳಿಕೆಯಲ್ಲಿ ಸದ್ಯ 26942 ರನ್‌ಗಳಿವೆ.

Kohli Set to Break Tendulkar s Fastest 27 000 Runs Record in Bangladesh Test Series

147 ವರ್ಷಗಳ ಟೆಸ್ಟ್‌ ಇತಿಹಾದಲ್ಲಿ 600ಕ್ಕೂ ಕಡಿಮೆ ಇನಿಂಗ್ಸ್‌ಗಳಲ್ಲಿ 27000 ರನ್‌ ಮುಟ್ಟುವ ಮೊದಲ ಆಟಗಾರ ಎಂಬ ಹಿರಿಮೆ ವಿರಾಟ್ ಪಾಲಾಗಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಬಿಟ್ಟರೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಹಾಗೂ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸಂಗಾಕ್ಕರ್ ಈ ಸಾಧನೆ ಮಾಡಿದ್ದಾರೆ.

ವಿರಾಟ್ ಸಾಧನೆ

ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ 113 ಟೆಸ್ಟ್‌ನ 191 ಇನಿಂಗ್ಸ್‌ಗಳಲ್ಲಿ 8848 ರನ್‌ ಸಿಡಿಸಿದ್ದಾರೆ. ಇದರಲ್ಲಿ 29 ಶತಕ ಹಾಗೂ 30 ಅರ್ಧಶತಕಗಳು ಸೇರಿವೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಆಡಿದ 295 ಪಂದ್ಯಗಳ 283 ಇನಿಂಗ್ಸ್‌ನಲ್ಲಿ 13906 ರನ್‌ ಬಾರಿಸಿದ್ದಾರೆ. ಈ ವೇಳೆ ವಿರಾಟ್‌ 50 ಶತಕ ಹಾಗೂ 72 ಅರ್ಧಶತಕಗಳು ಸೇರಿವೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ 125 ಪಂದ್ಯಗಳಲ್ಲಿ 4188 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 38 ಅರ್ಧಶತಕಗಳು ಸೇರಿವೆ.

Story first published: Saturday, September 14, 2024, 8:31 [IST]
Other articles published on Sep 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+