For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2023: ಕೊಹ್ಲಿ vs ನವೀನ್; ಭಾರತ vs ಪಾಕ್ ಪಂದ್ಯಕ್ಕಿಂತ ಕುತೂಹಲ ಕೆರಳಿಸಿದ ಭಾರತ vs ಅಫ್ಘಾನ್ ಪಂದ್ಯ

2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ನಡುವಿನ ನಿಕಟ ಪೈಪೋಟಿ ಮತ್ತೆ ಮರುಕಳಿಸಲಿದೆ ಎಂದು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ. ವಿಶ್ವಕಪ್‌ನಲ್ಲಿ ಕೆಲವು ರೋಚಕ ದ್ವಂದ್ವಗಳಿಗೆ ವೇದಿಕೆ ಕಲ್ಪಿಸಲಿದೆ.

ಈ ಘರ್ಷಣೆಯು "ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಿಂತ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ದೊಡ್ಡದಾಗಿದೆ' ಎಂದು ಭಾವಿಸುತ್ತಿದ್ದಾರೆ. ಏಕೆಂದರೆ ಈ ಇಬ್ಬರು ಬೆಂಕಿಯುಂಡೆಗಳ ನಡುವಿನ ಹಣಾಹಣಿಗಾಗಿ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

Kohli vs Naveen-ul-Haq; India vs Afghanistan Match Is More Interesting Than India vs Pakistan Match

2023ರ ಐಪಿಎಲ್ ಸಮಯದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ನವೀನ್-ಉಲ್-ಹಕ್ ಅವರು ಜಗಳ ಮಾಡಿಕೊಂಡಿರುವುದನ್ನು ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.

2023ರ ಐಪಿಎಲ್ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ನಡುವಿನ ವೈಷಮ್ಯವು ವಿಶ್ವಕಪ್ ಪಂದ್ಯದಲ್ಲಿ ಮುಂದುವರೆಯಲಿದೆಯೇ ಎಂಬುದು ಕ್ರಿಕೆಟ್ ಅಭಿಮಾನಿಗಳ ಅಂಬೋಣ. ಏಷ್ಯಾ ಕಪ್ ತಂಡದಿಂದ ನವೀನ್-ಉಲ್-ಹಕ್ ಅವರನ್ನು ಕೈಬಿಟ್ಟ ಕಾರಣ ಪಂದ್ಯಾವಳಿಯ ಸಮಯದಲ್ಲಿ ಶಾಂತವಾಗಿತ್ತು.

ಆದಾಗ್ಯೂ, ಅಫ್ಘಾನಿಸ್ತಾನ ತನ್ನ 15 ಸದಸ್ಯರ ವಿಶ್ವಕಪ್ ತಂಡವನ್ನು ಬುಧವಾರ, ಸೆಪ್ಟೆಂಬರ್ 13ರಂದು ಪ್ರಕಟಿಸಿದ್ದು, ನವೀನ್-ಉಲ್-ಹಕ್ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದೆ ಮತ್ತು ಈ ತೀವ್ರವಾದ ಕ್ರಿಕೆಟ್ ಪೈಪೋಟಿಗೆ ಜೀವ ತುಂಬಿದಂತಾಗಿದೆ.

Kohli vs Naveen-ul-Haq; India vs Afghanistan Match Is More Interesting Than India vs Pakistan Match

ವಿಶ್ವಕಪ್ ತಂಡದಲ್ಲಿ ನವೀನ್ ಅವರ ಹೆಸರು

ಅಫ್ಘಾನಿಸ್ತಾನ ತಂಡದ ಯುವ ವೇಗಿ ನವೀನ್-ಉಲ್-ಹಕ್ ಇತ್ತೀಚಿನ ದಿನಗಳಲ್ಲಿ ರೋಲರ್ ಕೋಸ್ಟರ್ ಪ್ರಯಾಣವನ್ನು ಹೊಂದಿದ್ದರು. ಏಷ್ಯಾ ಕಪ್‌ಗಾಗಿನ 17 ಸದಸ್ಯರ ತಂಡದಿಂದ ಆರಂಭದಲ್ಲಿ ಹೊರಗುಳಿದ ನವೀನ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದರು.

ಭಾರತ ತಂಡವಿರುವ ಗುಂಪಿನಲ್ಲಿ ಅಫ್ಘಾನಿಸ್ತಾನದ ಅನುಪಸ್ಥಿತಿಯು ನವೀನ್-ಉಲ್-ಹಕ್ ಮತ್ತು ವಿರಾಟ್ ಕೊಹ್ಲಿ ನಡುವಿನ ಮತ್ತೊಂದು ಮುಖಾಮುಖಿಗೆ ಸಾಕ್ಷಿಯಾಗದಂತೆ ಏಷ್ಯಾ ಕಪ್ ಪಂದ್ಯಾವಳಿ ತಪ್ಪಿಸಿದೆ.

ಅಫ್ಘಾನಿಸ್ತಾನ ತಮ್ಮ 2023ರ ವಿಶ್ವಕಪ್ ತಂಡವನ್ನು ಅನಾವರಣಗೊಳಿಸಿದಾಗ ನವೀನ್-ಉಲ್-ಹಕ್ ಅವರ ಹೆಸರು ಒಳಗೊಂಡಿತ್ತು. ಮಗದೊಮ್ಮೆ ಈ ಇಬ್ಬರು ಕ್ರಿಕೆಟ್ ದೈತ್ಯರ ನಡುವಿನ ವೈಷಮ್ಯದ ಪಂದ್ಯಕ್ಕೆ ವೇದಿಕೆ ಸಿದ್ಧಪಡಿಸಿದೆ.

2023ರ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ನವೀನ್-ಉಲ್-ಹಕ್ ನಡುವೆ ಜಗಳ ಆರಂಭವಾಯಿತು. ಅಲ್ಲಿ ಆರ್‌ಸಿಬಿ ಮಾಜಿ ನಾಯಕ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ವೇಗಿ ಮೈದಾನದಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿದ್ದರು.

ಈ ಜಗಳ ವಿಕೋಪಕ್ಕೆ ಹೋಗಿ ಇತರ ಆಟಗಾರರು ಮಧ್ಯಪ್ರವೇಶಿಸುವ ಹಂತಕ್ಕೆ ತಲುಪಿತು. ಪಂದ್ಯದ ನಂತರವೂ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಶೀತಲ ಸಮರ ಮುಂದುವರೆಸಿದ್ದರು. ನವೀನ್ ಅವರು ತಾವು ಸ್ಲೆಡ್ಜಿಂಗ್‌ನಿಂದ ದೂರವಿದ್ದಿದ್ದಾಗಿ ಮತ್ತು ತೆಗಳುವುದನ್ನು ಪ್ರಾರಂಭಿಸಿರಲಿಲ್ಲ ಎಂದು ಹೇಳಿಕೆ ನೀಡಿದರು.

ಐಪಿಎಲ್ ಘಟನೆಯು ಮರಕಳಿಸುವುದನ್ನು ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗುವಂತೆ ಮಾಡಿದೆ ಮತ್ತು 2023ರ ಐಸಿಸಿ ವಿಶ್ವಕಪ್ ಅವರ ಆಸೆಯನ್ನು ಈಡೇರಿಸಲಿದೆ.

ಅಫ್ಘಾನಿಸ್ತಾನ ತಂಡಕ್ಕೆ ನವೀನ್-ಉಲ್-ಹಕ್ ವಾಪಸ್

ಭಾರತದಲ್ಲಿ ನಡೆಯುವ ವಿಶ್ವಕಪ್‌ಗೆ ನವೀನ್-ಉಲ್-ಹಕ್ ಅವರು ಅಫ್ಘಾನಿಸ್ತಾನ ಏಕದಿನ ತಂಡಕ್ಕೆ ಮರಳಿರುವುದು ಅವರ ಕೌಶಲ್ಯ ಮತ್ತು ದೃಢತೆಗೆ ಸಾಕ್ಷಿಯಾಗಿದೆ. ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡದ ಹಿರಿಯ ಆಲ್‌ರೌಂಡರ್ ಗುಲ್ಬದಿನ್ ನೈಬ್ ಅವರ ಬದಲಾಗಿ ನವೀನ್-ಉಲ್-ಹಕ್ ಸೇರ್ಪಡೆಯಾಗಿದೆ.

ಗಾಯದಿಂದ ಹಿಂತಿರುಗಿದ ಅಜ್ಮತುಲ್ಲಾ ಒಮರ್ಜಾಯ್ ತಂಡಕ್ಕೆ ಬ್ಯಾಟಿಂಗ್ ಡೆಪ್ತ್ ತಂದುಕೊಟ್ಟಿದ್ದಾರೆ. ನವೀನ್-ಉಲ್-ಹಕ್ ಕೇವಲ ಏಳು ಏಕದಿನ ಪಂದ್ಯಗಳನ್ನು ಆಡಿದ್ದು, ಭಾರತೀಯ ಪಿಚ್‌ಗಳಲ್ಲಿ ಪಂದ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಅಚ್ಚರಿಯು ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.

2023ರ ಏಕದಿನ ವಿಶ್ವಕಪ್‌ಗೆ 15 ಸದಸ್ಯರ ಅಫ್ಘಾನಿಸ್ತಾನ ತಂಡ

ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಅಬ್ದುಲ್ ರೆಹಮಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಫಜಲ್‌ಹಕ್ ಫಾರೂಕಿ, ನವೀನ್-ಉಲ್-ಹಕ್.

ಮೀಸಲು ಆಟಗಾರರು: ಗುಲ್ಬದಿನ್ ನೈಬ್, ಶರ್ಫುದಿನ್ ಅಶ್ರಫ್, ಫರೀದ್ ಅಹ್ಮದ್ ಮಲಿಕ್.

Story first published: Wednesday, September 13, 2023, 18:55 [IST]
Other articles published on Sep 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+