ಚೆಕ್ ಬೌನ್ಸ್ ಪ್ರಕರಣದಲ್ಲಿ ಕ್ರಿಕೆಟರ್ ಮೊಹಮ್ಮದ್ ಶಮಿಗೆ ಸಮನ್ಸ್

ಕೋಲ್ಕತ್ತಾ, ನವೆಂಬರ್ 15: ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾ ಸರಣಿಗೆ ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ವಿಡಿಯೋಗಳನ್ನು ನೋಡಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಈ ನಡುವೆ ವೈಯಕ್ತಿಕ ಸಮಸ್ಯೆಗಳು ಮತ್ತೆ ಎದುರಾಗಿವೆ.
ಪತ್ನಿ ಹಸೀನಾ ಹಾಗೂ ಶಮಿ ನಡುವಿನ ವೈವಾಹಿಕ ಜೀವನ ವಿವಾದದ ನಡುವೆ ಆರ್ಥಿಕ ವ್ಯವಹಾರ ಕಲಹ ಮುಂದುವರೆದಿದೆ. ಶಮಿ ವಿರುದ್ಧದ ಚೆಕ್ ಬೌನ್ಸ್ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
ಶಮಿ ಪತ್ನಿ ಹಸೀನಾ, ಚೆಕ್ ಬೌನ್ಸ್ ಬಗ್ಗೆ ದೂರು ನೀಡಿದ್ದರು. ಜನವರಿ 15ರೊಳಗೆ ಶಮಿ ಕೋರ್ಟ್ ಮುಂದೆ ಹಾಜರಾಗದೆ ಹೋದಲ್ಲಿ ಶಮಿ ವಿರುದ್ಧ ವಾರೆಂಟ್ ಜಾರಿಯಾಗುವ ಸಾಧ್ಯತೆಯಿದೆ. ಶಮಿ ವಿರುದ್ಧ ವಿವಾಹೇತರ ಸಂಬಂಧ ಹಾಗೂ ದೌರ್ಜನ್ಯ ದೂರನ್ನು ಹಸೀನಾ ನೀಡಿದ್ದಾರೆ.
ಕೊಲ್ಕತ್ತಾದ ಸ್ಥಳೀಯ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು, ಜನವರಿ 15ರೊಳಗೆ ಕೋರ್ಟ್ ಮುಂದೆ ಹಾಜರಾಗುವಂತೆ ಶಮಿಗೆ ಆದೇಶಿಸಿದೆ.
ಶಮಿ ವಿರುದ್ಧ ಫೇಸ್ಬುಕ್ ನಲ್ಲಿ ಮೊದಲು ಆರೋಪ ಮಾಡಿದ್ದ ಹಸೀನಾ, ಕೆಲ ಸಾಕ್ಷಿಗಳನ್ನು ನೀಡಿದ್ದರು. ಶಮಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಹಸೀನಾ, ಪತಿ ವಿರುದ್ಧ ಕೋರ್ಟ್ ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಶಮಿ ಪತ್ನಿ ಈಗ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದು, ಶಮಿ ವಿರುದ್ಧ ತಮ್ಮ ಹೋರಾಟ ಮುಂದುವರೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications