IPL 2019, KKR vs SRH: ಕೋಲ್ಕತ್ತಾದ ಸಂಭಾವ್ಯ XI ಆಟಗಾರರು

ಕೋಲ್ಕತ್ತಾ, ಮಾರ್ಚ್ 23: ಐಪಿಎಲ್ ದ್ವಿತೀಯ ಪಂದ್ಯಕ್ಕಾಗಿ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಸಜ್ಜಾಗಿವೆ. ಭಾನುವಾರ (ಮಾರ್ಚ್ 24) ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಇತ್ತಂಡಗಳು ಕಣಕ್ಕಿಳಿಯುತ್ತಿವೆ.
ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ್ತ ಮತ್ತು ಒಂದು ಬಾರಿ ಟ್ರೋಫಿ ಗೆದ್ದಿರುವ ಸನ್ ರೈಸರ್ಸ್ ಎರಡೂ ತಂಡಗಳಲ್ಲಿ ಬಲಿಷ್ಟ ಆಟಗಾರರಿದ್ದಾರೆ. ಕೆಕೆಆರ್‌ನಲ್ಲಿ ಕಾರ್ಲೋಸ್ ಬ್ರಾತ್‌ವೇಟ್, ಆ್ಯಂಡ್ರೆ ರಸೆಲ್, ಸುನಿಲ್ ನರೇನ್ ನಂತವರಿದ್ದರೆ, ಹೈದರಾಬಾದ್‌ನಲ್ಲಿ ವಿಜಯ್ ಶಂಕರ್, ಶಹಬಾಝ್ ನದೀಮ್ ನಂತ ಪ್ರತಿಭಾನ್ವಿತರಿದ್ದಾರೆ.
ಭಾನುವಾರ ಮುಖಾಮುಖಿಯಾಗುತ್ತಿರುವ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ವಿರುದ್ಧದ ಪಂದ್ಯಕ್ಕಾಗಿ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ಪರ ಮೈದಾನಕ್ಕಿಳಿಯುವ ಸಂಭ್ಯಾವ್ಯ 11 ಆಟಗಾರರ ಪಟ್ಟಿ ಇಲ್ಲಿದೆ. ಈ ಪಂದ್ಯ 4 pmಗೆ ಆರಂಭಗೊಳ್ಳಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ 11 ಆಟಗಾರರು: ಕ್ರಿಸ್ ಲಿನ್, ಸುನಿಲ್ ನರೇನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್, ಆ್ಡ್ರೆ ರಸೆಲ್, ಶುಭ್‌ಮಾನ್ ಗಿಲ್, ಕುಲದೀಪ್ ಯಾದವ್, ಪೀಯೂಷ್ ಚಾವ್ಲಾ, ಲಾಕೀ ಫರ್ಗುಸನ್, ಪ್ರಸಿದ್ಧ್ ಕೃಷ್ಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications