ಐಪಿಎಲ್ 2021: ಕಮ್ಮಿನ್ಸ್, ರಸ್ಸೆಲ್ ಸಾಹಸ ವ್ಯರ್ಥ, ಚೆನ್ನೈಗೆ ಶರಣಾದ ಕೊಲ್ಕತ್ತಾ

ಮುಂಬೈನ ವಾಂಖೆಡೆ ಕ್ರೀಡಾಂಗಣ ಮತ್ತೊಂದು ಅತ್ಯಂತ ರೋಚಕ ಕಾದಾಟಕ್ಕೆ ಸಾಕ್ಷಿಯಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹೈಸ್ಕೋರಿಂಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಂತಿಮ ಓವರ್‌ನಲ್ಲಿ ಗೆಲುವುಸ ಸಾಧಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಯಿತು. ಅಗ್ರ ಕ್ರಮಾಂಕದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನೂ ತಲುಪದೆ ಫೆವಿಲಿಯನ್ ಸೇರಿಕೊಳ್ಳಲು ಆರಂಭಿಸಿದರು. ಹೀಗಾಗಿ ಕೊಲ್ಕತ್ತಾ ಹೀನಾಯ ಸೋಲಿನತ್ತ ಮುಖಮಾಡಿತ್ತು.

ಕೆಳ ಕ್ರಮಾಂಕದ ಭರ್ಜರಿ ಆಟ
ಆದರೆ ಕೆಳ ಕ್ರಮಾಂಕದ ಆಟಗಾರರು ಚೆನ್ನೈ ಸೂಪರ್ ಕಿಂಗ್ಸ್‌ಗೆ ಊಹಿಸಲು ಆಗದ ರೀತಿಯಲ್ಲಿ ತಿರುಗೇಟು ನೀಡಿದರು. ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್ ಹಾಗೂ ಪ್ಯಾಟ್ ಕಮ್ಮಿನ್ಸ್ ನೀಡಿದ ಅಮೋಘ ಆಟ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನ ಸನಿಹಕ್ಕೆ ತಲುಪಿಸಿತ್ತು. ಆದರೆ ಕೆಕೆಆರ್ ವಿಕೆಟ್ ಉಳಿಸಿಕೊಳ್ಳದ ಕಾರಣ ಸೋಲು ಕಾಣಬೇಕಾಯಿತು.

ರಸ್ಸೆಲ್ ಅಬ್ಬರ
ಒಂದು ಹಂತದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 31 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ದಿನೇಶ್ ಕಾರ್ತಿಕ್ ಹಾಗೂ ರಸ್ಸೆಲ್ ಜೋಡಿ ಅಬ್ಬರದ ಆಟವನ್ನು ಪ್ರದರ್ಶಿಸಿ ತಂಡದ ಮೊತ್ತವನ್ನು ಒಂದು ಹಂತಕ್ಕೆ ಏರಿಸುವಲ್ಲಿ ಸಫಲರಾದರು. ಸಿಕ್ಸರ್‌ಗಳ ಸುರಿಮಳೆಗೈದ ರಸೆಲ್ 22 ಎಸೆತಗಳಲ್ಲಿ 54 ರನ್ ಬಾರಿಸಿದರು. ಆರು ಸಿಕ್ಸರ್ ಹಾಗೂ ಮೂರು ಬೌಂಡರಿ ಸಿಡಿಸಿ ಮಿಂಚಿದರು. ಬಳಿಕ ಸ್ಯಾಮ್ ಕರ್ರನ್‌ಗೆ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.

ಚೆನ್ನೈ್ಗೆ ಪ್ಯಾಟ್ ಕಮ್ಮಿನ್ಸ್ ಶಾಕ್
ನಂತರ ದಿನೇಶ್ ಕಾರ್ತಿಕ್‌ಗೆ ಪ್ಯಾಟ್ ಕಮ್ಮಿನ್ಸ್ ಸಾಥ್ ನೀಡಿದರು. ಈ ವೇಳೆ 40 ರನ್‌ಗಳಿಸಿದ್ದ ದಿನೇಶ್ ಕಾರ್ತಿಕ್ ಔಟ್ ಆದರು. ಆದರೆ ಮತ್ತೊಂದು ತುದಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಅಕ್ಷರಶಃ ಏಕಾಂಗಿಯಾಗಿ ಹೋರಾಡಿದರು. ಸಿಕ್ಸರ್ ಬೌಂಡರಿಗಳ ಸುರಿಮಳೆಗೈದರು. 34 ಎಸೆತಗಳನ್ನು ಎದುರಿಸಿದ ಪ್ಯಾಟ್ ಕಮ್ಮಿನ್ಸ್ ಆರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸಿಡಿಸಿದರು. ಆದರೆ ಇನ್ನೊಂದು ತುದಿಯಲ್ಲಿ ವಿಕೆಟ್ ಕಳೆದುಕೊಂಡ ಕಾರಣ 202 ರನ್‌ಗಳಿಗೆ ಕೆಕೆಆರ್ ಆಲೌಟ್ ಆಯಿತು.

ಮಿಂಚಿದ ಸಿಎಸ್‌ಕೆ ಆರಂಭಿಕರು
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರರ ಶತಕದ ಜೊತೆಯಾಟದ ಕಾರಣ ಬೃಹತ್ ಮೊತ್ತವನ್ನು ಪೇರಿಸಿತು. ಫಾಪ್ ಡು ಪ್ಲೆಸಿಸ್ ಅಜೇಯ 95 ರನ್‌ಗಳು ಚೆನ್ನೈ ಇನ್ನಿಂಗ್ಸ್‌ನ ಹೈಲೈಟ್ಸ್ ಆಗಿತ್ತು. ಋತುರಾಜ್ ಗಾಯಕ್ವಾಡ್ ಕೂಡ ಅರ್ಧ ಶತಕದ ಕೊಡುಗೆಯನ್ನು ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications