For Quick Alerts
ALLOW NOTIFICATIONS  
For Daily Alerts
 

IPL 2019: ಕೊಹ್ಲಿ ಸ್ಫೋಟಕ ಶತಕ, ಕೋಲ್ಕತ್ತಾ ವಿರುದ್ಧ ಬೆಂಗಳೂರಿಗೆ ಜಯ

Kolkata vs Bangalore, 35th Match - Live Cricket Score

ಕೋಲ್ಕತ್ತಾ, ಏಪ್ರಿಲ್ 19: ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 19) ನಡೆದ ಐಪಿಎಲ್ 35ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ರನ್ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಶತಕ ಮತ್ತು ಮೊಯೀನ್ ಅಲಿ ಅರ್ಧ ಶತಕದ ನೆರವಿನಿಂದ ಆರ್‌ಸಿಬಿ ಐಪಿಎಲ್‌ನ 2ನೇ ಗೆಲುವು ದಾಖಲಿಸಿತು. ಕೆಕೆಆರ್ ಪರ ಆ್ಯಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಆರ್‌ಸಿಬಿಗೆ ಭೀತಿಯೊಡ್ಡಿದರಾದರೂ ಅಂತಿಮವಾಗಿ ಕೊಹ್ಲಿ ಪಡೆ ಗೆಲುವಿನ ನಗು ಬೀರಿತು.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರಿಗೆ ಪಾರ್ಥಿವ್ ಪಟೇಲ್ 11, ಕೊಹ್ಲಿ 100 (58 ಎಸೆತ), ಅಲಿ 66 (28), ಮಾರ್ಕಸ್ ಸ್ಟೊಯಿನಿಸ್ 17, ಅಕ್ಷದೀಪ್ ನಾಥ್ 13 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 213 ರನ್ ಬಾರಿಸಿತ್ತು.

ಐಪಿಎಲ್ 2019: ಬೆಂಗಳೂರು vs ಕೋಲ್ಕತ್ತಾ ಪಂದ್ಯದ ಸ್ಕೋರ್‌ಕಾರ್ಡ್

1
45911

ಆರ್‌ಸಿಬಿ ನೀಡಿದ್ದ ಗರಿಷ್ಠ ರನ್‌ ಗುರಿ ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಭೀತಿಯನ್ನನುಭವಿಸಿತು. ಕ್ರಿಸ್ ಲಿನ್ 1, ಸುನಿಲ್ ನರೇನ್ 18, ಶುಭ್‌ಮಾನ್‌ ಗಿಲ್ 9, ರಾಬಿನ್ ಉತ್ತಪ್ಪ 9 ರನ್ ಗಳಿಸಿ ಔಟ್ ಆದರು. ಆದರೆ ಕೆಕೆಆರ್ ಪರ ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಆರ್‌ಸಿಬಿಗೆ ಬೆದರಿಕೆಯೊಡ್ಡಿದರು.

ರಾಣಾ ಅಜೇಯ 85 ರನ್ (46 ಎಸೆತ), ರಸೆಲ್ 65 (25) ರನ್ ಸಿಡಿಸಿದ್ದರಿಂದ ಕೆಕೆಆರ್ ಗೆಲ್ಲುವುದನ್ನು ನಿರೀಕ್ಷಿಸಲಾಗಿತ್ತು. ಕೆಕೆಆರ್ ಗೆಲುವಿನ ಸಮೀಪ ಬಂದಿದ್ದರಿಂದ ಪಂದ್ಯ ರೋಚಕ ಹಂತಕ್ಕೆ ತಿರುಗಿತ್ತು. ಆದರೆ ಕೊನೇ ಓವರ್‌ನಲ್ಲಿ ಆರ್‌ಸಿಬಿ ಎದುರಾಳಿಯ ರನ್‌ ಕದಿಯುವಿಕೆಗೆ ಕೊಂಚ ಕಡಿವಾಣ ಹಾಕಿದ್ದು, ಗೆಲುವಿನ ನೆಲೆಯಲ್ಲಿ ನೆರವಿಗೆ ಬಂತು.

ಕೋಲ್ಕತ್ತಾ 20 ಓವರ್‌ಗೆ 5 ವಿಕೆಟ್‌ ನಷ್ಟದಲ್ಲಿ 203 ರನ್ ಬಾರಿಸಿ ಶರಣಾಯಿತು. ಕೆಕೆಆರ್ ಇನ್ನಿಂಗ್ಸ್‌ ವೇಳೆ ಆರ್‌ಸಿಬಿಯ ವೇಗಿ, ಪ್ರಮುಖ ಆಕರ್ಷಣೆಯಾಗಿದ್ದ ಡೇಲ್ ಸ್ಟೇನ್ 40 ರನ್‌ಗೆ 2 ವಿಕೆಟ್ ಪಡೆದರು. ಐಪಿಎಲ್ 5ನೇ ಶತಕ ಬಾರಿಸಿದ ರನ್ ಮೆಷೀನ್ ಕೊಹ್ಲಿ ಪಂದ್ಯಶ್ರೇಷ್ಠರೆನಿಸಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಕ್ರಿಸ್ ಲಿನ್, ಸುನಿಲ್ ನರೇನ್, ನಿತೀಶ್ ರಾಣಾ, ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್ (ಸಿ /ಸಿ), ಆಂಡ್ರೆ ರಸ್ಸೆಲ್, ಶುಭ್‌ಮಾನ್ ಗಿಲ್, ಪಿಯೂಶ್ ಚಾವ್ಲಾ, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಹ್ಯಾರಿ ಗರ್ನಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಪಾರ್ಥಿವ್ ಪಟೇಲ್ (ವಿ), ವಿರಾಟ್ ಕೊಹ್ಲಿ (ಸಿ), ಮೊಯೆನ್ ಅಲಿ, ಮಾರ್ಕಸ್ ಸ್ಟೊಯಿನಿಸ್, ಹೆನ್ರಿಕ್ ಕ್ಲೇಸೆನ್, ಅಕ್ಷದೀಪ್ ನಾಥ್, ಪವನ್ ನೇಗಿ, ಡೇಲ್ ಸ್ಟೇಯ್ನ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯುಜುವೇಂದ್ರ ಚಾಹಲ್.

Story first published: Saturday, April 20, 2019, 0:15 [IST]
Other articles published on Apr 20, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+