
ಕೋಲ್ಕತ್ತಾ, ಏಪ್ರಿಲ್ 14: ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಭಾನುವಾರ (ಏಪ್ರಿಲ್ 14) ನಡೆದ ಐಪಿಎಲ್ 29ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಜಯ ಗಳಿಸಿದೆ. ಸುರೇಶ್ ರೈನಾ ಅವರ ಅರ್ಧಶತಕದ ಬೆಂಬಲದೊಂದಿಗೆ ಚೆನ್ನೈ 7ನೇ ಗೆಲುವು ದಾಖಲಿಸಿತು.
ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಆರಂಭಿಕ ಆಟಗಾರ ಕ್ರಿಸ್‌ಲಿನ್ ಸ್ಫೋಟಕ ಬ್ಯಾಟಿಂಗ್ ಬೆಂಬಲ ದೊರೆಯಿತು. ಸುನೀಲ್ ನರೇನ್ 2, ಕ್ರಿಸ್ ಲಿನ್ 82 (51), ರಾಬಿನ್ ಉತ್ತಪ್ಪ 0, ನಿತೀಶ್ ರಾಣಾ 21, ದಿನೇಶ್ ಕಾರ್ತಿಕ್ 18, ಆಂಡ್ರೆ ರಸ್ಸೆಲ್ 10, ಶುಭ್‌ಮಾನ್ ಗಿಲ್ 15, ಪಿಯೂಶ್ ಚಾವ್ಲಾ 4 ರನ್ ಸೇರಿಸಲಷ್ಟೇ ಶಕ್ತರಾದರು.
ಸ್ಕೋರ್‌ಕಾರ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಕೆಕೆಆರ್ 20 ಓವರ್‌ಗೆ 8 ವಿಕೆಟ್ ಕಳೆದು 161 ರನ್ ಬಾರಿಸಿತು. ಕೆಕೆಆರ್ ಇನ್ನಿಂಗ್ಸ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ನ ಇಮ್ರಾನ್ ತಾಹಿರ್ 27 ರನ್‌ಗೆ 4, ಶಾರ್ದೂಲ್ ಠಾಕೂರ್ 18 ರನ್‌ಗೆ 2 ವಿಕೆಟ್ ಪಡೆದು ಗಮನ ಸೆಳೆದರು. ಚೆನ್ನೈಯ ಫಾ ಡು ಪ್ಲೆಸಿಸ್ ಒಟ್ಟು 4 ಕ್ಯಾಚ್ ಪಡೆದಿದ್ದು ವಿಶೇಷವೆನಿಸಿತು.
ಚೇಸಿಂಗ್‌ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಶೇನ್ ವ್ಯಾಟ್ಸನ್ 6, ಫಾ ಡು ಪ್ಲೆಸಿಸ್ 24, ಅಂಬಾಟಿ ರಾಯುಡು 5, ಕೇದಾರ್ ಜಾಧವ್ 20 ರನ್ ಗಳಿಸಿ ಔಟ್ ಆದರು. ಆದರೆ ಸುರೇಶ್ ರೈನಾ ಅಜೇಯ 58 (42 ಎಸೆತ), ರವೀಂದ್ರ ಜಡೇಜಾ 31 (17) ರನ್ ಬಾರಿಸಿದ್ದರಿಂದ ಚೆನ್ನೈ 19.4ನೇ ಓವರ್‌ಗೆ 5 ವಿಕೆಟ್ ಕಳೆದು 162 ರನ್ ಗುರಿ ತಲುಪಿತು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಸುನೀಲ್ ನರೇನ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ಸಿ / ಸಿ), ಆಂಡ್ರೆ ರಸ್ಸೆಲ್, ಶುಭ್‌ಮಾನ್ ಗಿಲ್, ಪಿಯೂಶ್ ಚಾವ್ಲಾ, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಹ್ಯಾರಿ ಗರ್ನಿ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂಎಸ್ ಧೋನಿ (ಸಿ), ರವೀಂದ್ರ ಜಡೇಜಾ, ಮಿಚೆಲ್ ಸಂಟ್ನರ್, ದೀಪಕ್ ಚಾಹಾರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್.