ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಉತ್ತಪ್ಪ-ರಾಣಾ-ರಸೆಲ್ ಅಬ್ಬರ, ಪಂಜಾಬ್‌ ಮಣಿಸಿದ ಕೋಲ್ಕತ್ತಾ

Kolkata vs Punjab, 6th Match - Live Cricket Score

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬುಧವಾರ (ಮಾರ್ಚ್ 27) ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್‌ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ 28 ರನ್ ಜಯ ಸಾಧಿಸಿದೆ. ಕೋಲ್ಕತ್ತ ಪರ ರಾಬಿನ್ ಉತ್ತಪ್ಪ, ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಅಬ್ಬರದ ಬ್ಯಾಟಿಂಗ್‌ ನಡೆಸಿ ತಂಡದ ಗೆಲುವನ್ನು ಬರೆದರು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45762

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾಗೆ ಕ್ರಿಸ್‌ಲಿನ್ 10, ಸುನಿಲ್ ನರೇನ್ 24, ನಿತೀಶ್ ರಾಣಾ 63 (34 ಎಸೆತ), ರಾಬಿನ್ ಉತ್ತಪ್ಪ ಅಜೇಯ 67 (50 ಎಸೆತ), ಆ್ಯಂಡ್ರೆ ರಸೆಲ್ 48 ರನ್ (17 ಎಸೆತ) ಸೇರಿಸಿದರು. ಕೆಕೆಆರ್ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಮಾಡಿತು. ಈಬಾರಿಯ ಐಪಿಎಲ್‌ನಲ್ಲಿ ತಂಡ ಬಾರಿಸಿದ ಅತ್ಯಧಿಕ ರನ್ (ಸದ್ಯಕ್ಕೆ) ಇದು. ಇದು ಬಿಟ್ಟರೆ ಡೆಲ್ಲಿ 213 ರನ್‌ನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

219 ರನ್ ಗುರಿ ಬೆನ್ನಟ್ಟಿದ ಕಿಂಗ್ಸ್‌ XI ಪಂಜಾಬ್‌ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಳ್ಳತೊಡಗಿತು. ಕೆಎಲ್ ರಾಹುಲ್ 1, ಕ್ರಿಸ್‌ ಗೇಲ್ 20, ಸರ್ಫರಾಜ್ ಖಾನ್ 13, ಮನ್‌ದೀಪ್ ಸಿಂಗ್ ಅಜೇಯ 33 ರನ್ ಸೇರಿಸಿದರು. ಆದರೆ ಮಯಾಂಕ್ ಅಗರ್ವಾಲ್ 58, ಡೇವಿಡ್ ಮಿಲ್ಲರ್ ಅಜೇಯ 59 ರನ್ ಬಾರಿಸಿ ತಂಡದ ಗೆಲುವಿಗೆ ಶ್ರಮಿಸಿದರು.

ಇತ್ತ ಕೆಕೆಆರ್ ಬೌಲರ್‌ಗಳು ದಾಳಿಗೆ ವಿಕೆಟ್ ಉರುಳುತ್ತಾ ಸಾಗಿದ್ದರಿಂದ ನಿಗದಿತ ಓವರ್‌ನಲ್ಲಿ ಗುರಿ ಮುಟ್ಟಲು ಪಂಜಾಬ್ ತಂಡದಿಂದ ಸಾಧ್ಯವಾಗಲಿಲ್ಲ. ಕೆXIಪಿ ತಂಡ 20 ಓವರ್‌ಗೆ 4 ವಿಕೆಟ್ ಕಳೆದು 190 ರನ್ ಬಾರಿಸಲಷ್ಟೇ ಶತಕ್ತವಾಯಿತು. ಪಂದ್ಯದ ವೇಳೆ ಬೈಸ್ ರನ್‌ಗಾಗಿ ಕೊಂಚ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅಂತಿಮವಾಗಿ ಬೌಂಡರಿ ಲೈನ್ ದಾಟಿದ ಆ ಥ್ರೋವನ್ನು ಫೋರ್ ಎಂದು ತೀರ್ಪೀಯಲಾಯಿತು.

ಕಿಂಗ್ಸ್‌ ಇಲೆವೆನ್ ಪಂಜಾಬ್ ಇನ್ನಿಂಗ್ಸ್‌ ವೇಳೆ ಕೆಕೆಆರ್‌ನ ಆ್ಯಂಡ್ರೆ ರಸೆಲ್ 2 ವಿಕೆಟ್ ಪಡೆಯುವ ಮೂಲಕ ಆಲ್‌ ರೌಂಡರ್ ಆಗಿ ಮಿಂಚಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಸರ್ವಾಂಗಿಣ ಆಟ ಪ್ರದರ್ಶಿಸಿದ ಕೆಕೆಆರ್ ಸ್ಟಾರ್, ಜಮೈಕಾ ದೈತ್ಯ ಆ್ಯಂಡ್ರೆ ರಸೆಲ್ ಪಂದ್ಯಶ್ರೇಷ್ಠರೆನಿಸಿದರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಕ್ರಿಸ್ ಲಿನ್, ನಿತೀಶ್ ರಾಣಾ, ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್ (ಸಿ /ವಿಕೆ), ಶುಭ್‌ಮಾನ್ ಗಿಲ್, ಆಂಡ್ರೆ ರಸ್ಸೆಲ್, ಸುನಿಲ್ ನರೇನ್, ಪಿಯೂಶ್ ಚಾವ್ಲಾ, ಕುಲದೀಪ್ ಯಾದವ್, ಲಾಕೀ ಫರ್ಗುಸನ್, ಪ್ರಸಿದ್ಧ್ ಕೃಷ್ಣ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ: ಲೋಕೇಶ್ ರಾಹುಲ್ (ವಿಕೆ), ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ಹಾರ್ದಸ್ ವಿಲ್ಜೊಯೆನ್, ರವಿಚಂದ್ರನ್ ಅಶ್ವಿನ್ (ಸಿ), ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ಆಂಡ್ರ್ಯೂ ಟೈ.

Story first published: Thursday, March 28, 2019, 0:04 [IST]
Other articles published on Mar 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X