For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಪರಾಗ್-ಆರ್ಚರ್ ಸಾಹಸ, ಕೆಕೆಆರ್ ವಿರುದ್ಧ ಆರ್‌ಆರ್‌ಗೆ ರೋಚಕ ಜಯ

Kolkata vs Rajasthan, 43rd Match - Live Cricket Score

ಕೋಲ್ಕತ್ತಾ, ಏಪ್ರಿಲ್ 25: ರಿಯಾನ್ ಪರಾಗ್-ಜೋಫ್ರಾ ಆರ್ಚರ್ ಸಾಹಸದಿಂದಾಗಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಗುರುವಾರ (ಏಪ್ರಿಲ್ 25) ನಡೆದ ಐಪಿಎಲ್ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್ ಜಯ ಗಳಿಸಿದೆ. ಇದರೊಂದಿಗೆ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಸ್ಫೋಟಕ ಅರ್ಧ ಶತಕ ವ್ಯರ್ಥವೆನಿಸಿತಲ್ಲದೆ, ಕೋಲ್ಕತ್ತಾ ಸತತ ಸೋಲಿನ ಮುಖಭಂಗಕ್ಕೀಡಾಗಿದೆ.

ಪಂದ್ಯದ ಸ್ಕೋರ್‌ಕಾರ್ಡ್ ಕೆಳಗಿದೆ

1
45919

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್ ಆರಂಭದಲ್ಲಿ ನಿಧಾನಗತಿಯ ರನ್ ಮಾಡಿತು. ಕ್ರಿಸ್ ಲಿನ್ 0, ಶುಭ್‌ಮಾನ್‌ ಗಿಲ್ 14, ನಿತೀಶ್ ರಾಣಾ 21, ಸುನಿಲ್ ನರೇನ್ 11, ಆ್ಯಂಡ್ರೆ ರಸೆಲ್ 14 ರನ್ ಸೇರಿಸಲಷ್ಟೇ ಶಕ್ತರಾದರು. ಆದರೆ ದಿನೇಶ್ ಕಾರ್ತಿಕ್ ರನ್‌ ಕೊಡುಗೆ ಗಣನೀಯವೆನಿಸಿತು.

ತಂಡದ ಪರ ಭರ್ಜರಿ ಬ್ಯಾಟ್ ಬೀಸಲಾರಂಭಿಸಿದ ಡಿಕೆ 50 ಎಸೆತಗಳಿಗೆ 97 ರನ್ ಸಿಡಿಸಿದರು. ಕೋಲ್ಕತ್ತಾ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 175 ರನ್ ಪೇರಿಸಿತು. ಕೆಕೆಆರ್ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ವರುಣ್ ಆ್ಯರನ್ 2 ವಿಕೆಟ್ ಕಡೆದು ಗಮನ ಸೆಳೆದರು.

ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್‌, ಅಜಿಂಕ್ಯ ರಹಾನೆ (34 ರನ್), ಸಂಜು ಸ್ಯಾಮ್ಸನ್ (22), ಸ್ಟೀವ್ ಸ್ಮಿತ್ (2), ಬೆನ್‌ಸ್ಟೋಕ್ಸ್ (11) ವಿಕೆಟ್‌ಗಳನ್ನು ಕಳೆದುಕೊಂಡು ಭೀತಿಗೊಳಗಾಯಿತು. ಆದರೆ ಆರ್‌ಆರ್‌ಗೆ ಪರಾಗ್ ಮತ್ತು ಆರ್ಚರ್ ಬೆಂಬಲ ದೊರೆಯಿತು.

31 ಎಸೆತಗಳಿಗೆ 47 ರನ್ ಸಿಡಿಸಿದ ಪರಾಗ್ ಆರ್‌ಆರ್ ಗೆಲುವಿಗಾಗಿ ಕೊಸರಾಡಿ ಕೊನೇ ಕ್ಷಣದಲ್ಲಿ ಔಟ್ ಆದರು. ಅಂತಿಮ ಓವರ್‌ಗೆ ರಾಜಸ್ಥಾನ್‌ ಗೆಲುವಿಗೆ 9 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತಕ್ಕೆ ಬೌಂಡರಿ ಬಾರಿಸಿದ ಆರ್ಚರ್, ದ್ವಿತೀಯ ಎಸೆತಕ್ಕೆ ಸಿಕ್ಸ್ ಚಚ್ಚಿ ತಂಡದ ಗೆಲುವು ಬರೆದರು.

ರಾಜಸ್ಥಾನ್ ರಾಯಲ್ಸ್ 19.2 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 177 ರನ್ ಒಟ್ಟು ಸೇರಿಸಿತು. ವರುಣ್ ಆ್ಯರನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಕ್ರಿಸ್ ಲಿನ್, ಸುನಿಲ್ ನಾರೇನ್, ಶುಭ್‌ಮಾನ್‌ ಗಿಲ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (W / ಸಿ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಕಾರ್ಲೋಸ್ ಬ್ರಾಥ್ವೈಟ್, ಪಿಯೂಶ್ ಚಾವ್ಲಾ, ಯಾರ ಪೃಥ್ವಿರಾಜ್, ಪ್ರಸಿದ್ಧ್ ಕೃಷ್ಣ.

ರಾಜಸ್ಥಾನ್ ರಾಯಲ್ಸ್ ತಂಡ: ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್ (ಸಿ), ಸ್ಟೀವನ್ ಸ್ಮಿತ್ (ಸಿ), ಬೆನ್ ಸ್ಟೋಕ್ಸ್, ರಿಯಾನ್ ಪರಾಗ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕತ್, ಒಶೇನ್ ಥಾಮಸ್, ವರುಣ್ ಆ್ಯರನ್.

Story first published: Friday, April 26, 2019, 0:26 [IST]
Other articles published on Apr 26, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+