For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2017: ಕೆ ಗೌತಮ್, ಅಮಿತ್ ಭಾರಿ ಮೊತ್ತಕ್ಕೆ ಮಾರಾಟ

By Mahesh

ಬೆಂಗಳೂರು, ಆಗಸ್ಟ್ 06: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ)ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದಂದು ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕೆ ಗೌತಮ್ ಹಾಗೂ ಅಮಿತ್ ವರ್ಮಾ ಅವರು ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗಿದ್ದಾರೆ.

6ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ.

KPL 2017 Players Auction: Full list of cricketers sold who is costliest

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ, ಅಮಿತ್ ವರ್ಮಾ ಹಾಗೂ ಕೆ ಗೌತಮ್ ಅವರು ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗಿದ್ದಾರೆ.

ಕಳೆದ ವರ್ಷದವರೆಗೆ ಕೆಪಿಎಲ್ ನಲ್ಲಿ ಆಡಿದ್ದ ಉದ್ಯಮಿ ಅಶೋಕ್ ಖೇಣಿ ಒಡೆತನದ ರಾಕ್ ಸ್ಟಾರ್ ತಂಡವು ಈ ಬಾರಿಯ ಕೆಪಿಎಲ್ ನಿಂದ ಹೊರಗುಳಿಯಲಿದೆ. ಈ ಬಾರಿ ಕೆಪಿಎಲ್ ಗೆ ಹೊಸ ತಂಡ 'ಕಲ್ಯಾಣಿ ಬ್ಲಾಸ್ಟರ್ಸ್ ಬೆಂಗಳೂರು' ಹೆಸರಿನ ಹೊಸ ಫ್ರಾಂಚೈಸಿಯು ಕಾಲಿಡಲಿದೆ.

ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನ ಹರಾಜು ಪ್ರಕ್ರಿಯೆಯನ್ನು ಚಾರು ಶರ್ಮ ಅವರು ನಡೆಸಿಕೊಟ್ಟರು. ಒಟ್ಟಾರೆ ಮಾರಾಟವಾದ ಆಟಗಾರರ ಪಟ್ಟಿ ಇಲ್ಲಿದೆ. ಪ್ರತಿ ತಂಡಗಳು ನಾಲ್ಕು ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದು ಹಾಗೂ ಪ್ರತಿ ತಂಡದಲ್ಲಿ 18 ಮಂದಿ ಆಟಗಾರರಿರಬಹುದು.(ಎಲ್ಲಾ ಮೊತ್ತಗಳು ಭಾರತೀಯ ರುಪಾಯಿಗಳನ್ನು ಓದಿಕೊಳ್ಳಿ)

* 7.20 ಲಕ್ಷ ರುಗೆ ಬಳ್ಳಾರಿ ಟಸ್ಕರ್ಸ್ ಪಾಲಾದ ಅಮಿತ್ ವರ್ಮಾ.
* ಗೌತಮ್ ಕೆ(7.2 ಲಕ್ಷ ರು) ಕೊಟ್ಟು ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್.

* ಹುಬ್ಳಿ ಟೈಗರ್ಸ್ ಪಾಲಾದ ಮಾಯಾಂಕ್ ಅಗರವಾಲ್ (7 ಲಕ್ಷ ರು)
* ಬೆಂಗಳೂರು ಬ್ಲಾಸ್ಟರ್ಸ್ ಪಾಲಾದ ಆರ್ ಸಮರ್ಥ್ (5.9 ಲಕ್ಷರು)
* ಅನಿರುಧ್ ಜೋಶಿಯನ್ನು 5.8 ಲಕ್ಷ ರುಗೆ ಖರೀದಿಸಿದ ನಮ್ಮ ಶಿವಮೊಗ್ಗ
* ಪ್ರತೀಕ್ ಜೈನ್ ಗೆ 5.5 ಲಕ್ಷ ರು ನೀಡಿ ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್.

* ಆರ್‌. ಜೊನಾಥನ್ (5.1 ಲಕ್ಷ ರು) ನಮ್ಮ ಶಿವಮೊಗ್ಗಕ್ಕೆ ಮಾರಾಟ.
* ಮೈಸೂರು ವಾರಿಯರ್ಸ್ ಪಾಲಾದ ಸುನೀಲ್ ರಾಜು (5 ಲಕ್ಷ ರು)
* 5 ಲಕ್ಷ ರು ನೀಡಿ ಮೊಹಮ್ಮದ್ ತಾಹರನ್ನು ಖರೀದಿಸಿದ ಬಿಜಾಪುರ್ ಬುಲ್ಸ್

* ಪ್ರದೀಪ್ ಟಿರನ್ನು ಖರೀದಿಸಿದ ನಮ್ಮ ಶಿವಮೊಗ್ಗ (4.8 ಲಕ್ಷ ರು)
* ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಪವನ್ ದೇಶಪಾಂಡೆ ಸೇರ್ಪಡೆ (4.6 ಲಕ್ಷ ರು)
* ಮೈಸೂರು ವಾರಿಯರ್ಸ್ ಪಾಲಾದ ಕರುಣ್ ನಾಯರ್ (4 ಲಕ್ಷ ರು)
* ಹುಬ್ಳಿ ಟೈಗರ್ಸ್ ಪಾಲಾದ ವಿನಯ್ ಕುಮಾರ್ (3.6 ಲಕ್ಷರು)
* ಮೈಸೂರು ವಾರಿಯರ್ಸ್ ಪಾಲಾದ ಶ್ರೇಯಸ್ ಗೋಪಾಲ್ (3.4 ಲಕ್ಷ ರು)
* ಹುಬ್ಳಿ ಟೈಗರ್ಸ್ ಪಾಲಾದ ಪ್ರವೀಣ್ ದುಬೇ (3.1 ಲಕ್ಷ ರು)
* ಪ್ರಸಿಧ್ ಎಂ ಕೃಷ್ಣಗೆ 3 ಲಕ್ಷ ರು ಕೊಟ್ಟು ಖರೀದಿಸಿದ ಬೆಂಗಳೂರು ಬ್ಲಾಸ್ಟರ್ಸ್
* ಪವನ್ ಕೆಬಿ ಅವರನ್ನು 3 ಲಕ್ಷ ರುಪಾಯಿಗೆ ಖರೀದಿಸಿದ ಬಳ್ಳಾರಿ ಟಸ್ಕರ್ಸ್

* ಕುನಾಲ್ ಕಪೂರ್ (2.9 ಲಕ್ಷ ರು ) ಬಳ್ಳಾರಿ ಟಸ್ಕರ್ಸ್ ಪಾಲು(ಎರಡನೇ ಸುತ್ತಿನಲ್ಲಿ ಖರೀದಿ)
* ಮೀರ್ ಕುರಿಯನ್ ಅಬ್ಬಾಸ್ ರನ್ನು 2.6 ಲಕ್ಷ ರುಗೆ ಖರೀದಿಸಿದ ಬೆಳಗಾವಿ

KPL 2017 Players Auction: Full list of cricketers sold who is costliest

* ಮೈಸೂರು ವಾರಿಯರ್ಸ್ ಪಾಲಾದ ಜೆ ಸುಚಿತ್ (2.5 ಲಕ್ಷ ರು)
* ಬಿಜಾಪುರ್ ಬುಲ್ಸ್ ಪಾಲಾದ ಕೆ.ಸಿ ಕಾರ್ಯಪ್ಪ(2.5 ಲಕ್ಷ ರು)
* ಮಿತ್ರಕಾಂತ್ ಸಿಂಗ್ ಯಾದವ್ 2.5 ಲಕ್ಷ ರುಗೆ ಬೆಂಗಳೂರು ಬ್ಲಾಸ್ಟರ್ಸ್ ಪಾಲು
* ನಮ್ಮ ಶಿವಮೊಗ್ಗ ತಂಡ ಸೇರಿದ ಅಬ್ರಾರ್ ಖಾಜಿ (2.5 ಲಕ್ಷ ರು)
* ನಮ್ಮ ಶಿವಮೊಗ್ಗ ತಂಡದ ಪಾಲಾದ ಅಖಿಲ್ ಬಾಲಚಂದ್ರ(2.4 ಲಕ್ಷ ರು)
* ಅಭಿಷೇಕ್ ರೆಡ್ಡಿ (2 ಲಕ್ಷ ರು) ಯನ್ನು ಖರೀದಿಸಿದ ಹುಬ್ಳಿ ಟೈಗರ್ಸ್
* ಬೆಳಗಾವಿ ಪ್ಯಾಂಥರ್ಸ್ ತಂಡ ಸೇರಿದ ಮನೀಶ್ ಪಾಂಡೆ (1.6 ಲಕ್ಷ ರು)
* ಎಸ್ ಅರವಿಂದ್ ಗೆ 1.5 ಲಕ್ಷ ರು ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್.
* ಬೆಂಗಳೂರು ಬ್ಲಾಸ್ಟರ್ಸ್ ಪಾಲಾದ ಶಿಶಿರ್ ಭಾವನೆ (1.5 ಲಕ್ಷ ರು)

Binny

* ಬಿಜಾಪುರ್ ಬುಲ್ಸ್ ಗೆ 1.30 ಲಕ್ಷ ರು ಗೆ ರೋನಿತ್ ಮೋರೆ ಖರೀದಿ
* ಸ್ಟುವರ್ಟ್ ಬಿನ್ನಿಗೆ 1.1 ಲಕ್ಷ ರು ನೀಡಿ ಖರೀದಿಸಿದ ಬೆಳಗಾವಿ ಪ್ಯಾಂಥರ್ಸ್
* ಅಭಿಮನ್ಯು ಮಿಥುನ್ (1 ಲಕ್ಷ ರು ) ಖರೀದಿಸಿದ ಬಿಜಾಪುರ್ ಬುಲ್ಸ್
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+