Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಪಿಎಲ್: ಬೆಳಗಾವಿ ಪ್ಯಾಂಥರ್ಸ್‌ಗೆ 22 ರನ್ ಗೆಲುವು

kpl 2018 Belagavi Panthers vs Bellary Tuskers 11th match

ಮೈಸೂರು, ಆಗಸ್ಟ್ 25: ಮೈಸೂರಿನಲ್ಲಿ ನಡೆದ ಕೆಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲಿ ಸ್ಟುವರ್ಟ್ ಬಿನ್ನಿ ನಾಯಕತ್ವದ ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್ ಎದುರು 22 ರನ್‌ಗಳ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಬಳ್ಳಾರಿ ತಂಡದ ನಾಯಕ ಸಿ.ಎಂ. ಗೌತಮ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮೊದಲ ಎಸೆತದಲ್ಲಿಯೇ ಬೆಳಗಾವಿಯ ಆಟಗಾರ ದಿಕ್ಷಾಂಶು ನೇಗಿ ರನೌಟ್ ಆಗಿ ನಿರಾಶೆ ಅನುಭವಿಸಿದರು.

23 ರನ್ ಆಗುವಷ್ಟರಲ್ಲಿ ರಕ್ಷಿತ್ ಕೂಡ ವಿಕೆಟ್ ಒಪ್ಪಿಸಿದರು. ಸ್ಟಾಲಿನ್ ಹೂವರ್ ಮತ್ತು ಅವಿನಾಶ್ ಡಿ. ಬಿರುಸಿನ ಬ್ಯಾಟಿಂಗ್ ನೆರವಿನಿಂದ ತಂಡ ಚೇತರಿಕೆ ಕಂಡಿತು. ಸ್ಟುವರ್ಟ್ ಬಿನ್ನಿ ನಿಧಾನಗತಿಯ ಆಟಕ್ಕೆ ಮೊರೆಹೋದರು. ಅಂತಿಮವಾಗಿ ಬೆಳಗಾವಿ 7 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿತು.

ಸಾಧಾರಣ ಗುರಿ ಬೆನ್ನತ್ತಿದ ಬಳ್ಳಾರಿ ತಂಡಕ್ಕೆ ಕಾರ್ತಿಕ್ ಸಿ.ಎ. 31 (11) ಬಿರುಸಿನ ಆರಂಭ ಒದಗಿಸಿದರು. ಆದರೆ ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದರಿಂದ ಗುರಿ ತಲುಪುವುದು ಸಾಧ್ಯವಾಗಲಿಲ್ಲ.

18.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 135 ರನ್ ಗಳಿಸಲಷ್ಟೇ ಬಳ್ಳಾರಿ ತಂಡ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್
ಬೆಳಗಾವಿ ಪ್ಯಾಂಥರ್ಸ್: 157/7 (20) ಸ್ಟಾಲಿನ್ ಹೂವರ್ 38, ಸ್ಟುವರ್ಟ್ ಬಿನ್ನಿ 31, ಅವಿನಾಶ್ ಡಿ. 25, ಪ್ರದೀಪ್ ಟಿ. 28/2, ರಿತೇಶ್ ಭಟ್ಕಳ್ 19/2

ಬಳ್ಳಾರಿ ಟಸ್ಕರ್ಸ್: 135/10 (18.5) ಕಾರ್ತಿಕ್ ಸಿ.ಎ. 31, ಸಿ.ಎಂ. ಗೌತಮ್ 24, ದೇವದತ್ ಪಡಿಕ್ಕಲ್ 23, ಅವಿನಾಶ್ ಡಿ. 20/3 ಸ್ಟುವರ್ಟ್ ಬಿನ್ನಿ 27/2, ಮೊಹಮ್ಮದ್ ನಿಸಾರ್ 23/2.

ಫಲಿತಾಂಶ: ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಜಯ
ಪಂದ್ಯಶ್ರೇಷ್ಠ: ಸ್ಟುವರ್ಟ್ ಬಿನ್ನಿ

Story first published: Saturday, August 25, 2018, 18:28 [IST]
Other articles published on Aug 25, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+