ಕೆಪಿಎಲ್ 2018: ಶಿವಮೊಗ್ಗ ಲಯನ್ಸ್ ವಿರುದ್ಧ ಬಳ್ಳಾರಿ ಟಸ್ಕರ್ಸ್ ಗೆ ಜಯ

ಮೈಸೂರು, ಸೆಪ್ಟೆಂಬರ್, 4: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ 21ನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಸಮಬಲ ಸಾಧಿಸಿವೆ. ಎರಡೂ ತಂಡಗಳು ತಲಾ 151 ರನ್ ಪೇರಿಸಿ ಪಂದ್ಯವನ್ನು ಟೈ ಮಾಡಿಕೊಂಡವು. ಸೂಪರ್ ಓವರ್ ನಲ್ಲಿ ಬಳ್ಳಾರಿ ಟಸ್ಕರ್ಸ್ ಮೇಲುಗೈ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಶಿವಮೊಗ್ಗ ನಾಯಕ ಅನಿರುದ್ಧ್ ಜೋಷಿ 47, ರಂಗ್ಸೇನ್ ಜೋನಾಥನ್ 45, ಅಧೋಕ್ಷ್ ಹೆಗ್ಡೆ 39 ರನ್ ನೆರವಿನೊಂದಿಗೆ 20 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು 151 ರನ್ ಪೇರಿಸಿ ಎದುರಾಳಿಗೆ 152 ರನ್ ಗುರಿ ನೀಡಿತ್ತು.
ಗುರಿ ಬೆನ್ನಟ್ಟಿದ ಬಳ್ಳಾರಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದು 151 ರನ್ ಪೇರಿಸಿ ಪಂದ್ಯವನ್ನು ಸಮಬಲಗೊಳಿಸಿತು. ಟಸ್ಕರ್ಸ್ ಪರ ಸಿಎ ಕಾರ್ತಿಕ್ 47, ಸಿಎಂ ಗೌತಮ್ 57, ಆದಿತ್ಯ ರೆಡ್ಡಿ 33 ರನ್ ಸೇರಿಸಿದ್ದರು. ಪಂದ್ಯ ಟೈ ಅನ್ನಿಸಿತಾದರೂ ಬಳ್ಳಾರಿಯೇ ವಿಜಯಿ ಎನಿಸಿತು.
ಬಳ್ಳಾರಿಯ ಸಿಎಂ ಗೌತಮ್ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿದರು. ಮಂಗಳವಾರ (ಸೆಪ್ಟೆಂಬರ್ 4) ಕೆಪಿಎಲ್ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications