ಕೆಪಿಎಲ್ 2018: ಮೈಸೂರು ವಿರುದ್ಧ ಗೆದ್ದ ಉತ್ತಪ್ಪ ಪಡೆ ಫೈನಲ್ ಗೆ

ಮೈಸೂರು, ಸೆಪ್ಟೆಂಬರ್ 5: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ 20 ರನ್ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸ್ಪಟ್ಟ ಬೆಂಗಳೂರು 20 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 138 ರನ್ ಪೇರಿಸಿತ್ತು. ಮನೋಜ್ ಭಂಡಾಜೆ 34, ನಾಯಕ ರಾಬಿನ್ ಉತ್ತಪ್ಪ 23, ಕೆಬಿ ಪವನ್ 19 ರನ್ ಸೇರಿಸಿ ತಂಡಕ್ಕೆ ತಕ್ಕ ಮಟ್ಟಿನ ಬೆಂಬಲ ನೀಡಿದರು.
ಚೇಸಿಂಗ್ ಗೆ ಇಳಿದ ಮೈಸೂರು ಅರ್ಜುನ್ ಹೊಯ್ಸಳ ಅವರ ಆಕರ್ಷಕ ಅರ್ಧ ಶತಕ (52/42)ದ ಹೊರತಾಗಿಯೂ ಸೋಲನುಭವಿಸಿತು. 20 ಓವರ್ ಗಳಲ್ಲಿ ಮೈಸೂರು 9 ವಿಕೆಟ್ ಕಳೆದು 118 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಮೈಸೂರಿನ ಉಳಿದ ಬ್ಯಾಟ್ಸ್ಮನ್ ಗಳು 14 ರನ್ ಗೆರೆ ದಾಟಿಸದಿದ್ದುದು ಸೋಲಿಗೆ ಕಾರಣವಾಯ್ತು.
13 ರನ್ನಿಗೆ ಮೈಸೂರಿನ 3 ವಿಕೆಟ್ ಕಿತ್ತ ಬೆಂಗಳೂರು ಬೌಲರ್ ಶ್ರೇಯಸ್ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications