ಕೆಪಿಎಲ್‌ಗೆ ಮಳೆ ಕಾಟ: ಏಳನೇ ಪಂದ್ಯ ಕೂಡ ರದ್ದು

ಹುಬ್ಬಳ್ಳಿ, ಆಗಸ್ಟ್ 22: ಕರ್ನಾಟಕ ಪ್ರೀಮಿಯರ್ ಲೀಗ್‌ನ ಹುಬ್ಬಳ್ಳಿ ಟೈಗರ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ನಡುವಣ ಪಂದ್ಯ ಮಳೆಯಿಂದ ರದ್ದಾಗಿದೆ.
ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಗೆ ಮಳೆ ಅಡ್ಡಿಪಡಿಸಿದ್ದು, ಸೋಮವಾರ ನಡೆಯಬೇಕಿದ್ದ ಬೆಳಗಾವಿ ಪ್ಯಾಂಥರ್ಸ್ ಮತ್ತು ಬಿಜಾಪುರ ಬುಲ್ಸ್ ಪಂದ್ಯ ಕೂಡ ರದ್ದುಗೊಂಡಿತ್ತು.
ಬೆಳಿಗ್ಗೆಯಿಂದ ಸುರಿದ ಮಳೆಯಿಂದ ಮೈದಾನ ತೇವಗೊಂಡಿತ್ತು. ಮಳೆ ನಿಂತ ಬಳಿಕವೂ ಆಟ ಆರಂಭವಾಗುವ ಲಕ್ಷಣ ಕಂಡುಬರಲಿಲ್ಲ. ಅಂಪೈರ್‌ಗಳು ಹಲವು ಬಾರಿ ಮೈದಾನಕ್ಕಿಳಿದು ಪರಿಶೀಲನೆ ನಡೆಸಿದರು.
ಬೌಂಡರಿಯಿಂದ ಸುಮಾರು 30 ಮೀಟರ್‌ವರೆಗಿನ ಭಾಗದಲ್ಲಿ ಸಾಕಷ್ಟು ನೀರು ನಿಂತಿತ್ತು. ಅದನ್ನು ತೆರವುಗೊಳಿಸಿ ಒಣಗಿಸಲು ಹರಸಾಹಸಪಡಬೇಕಾಯಿತು.
ಸಣ್ಣ ಪ್ರಮಾಣದಲ್ಲಿ ಬಿಸಿಲು ಮೂಡಿದರೂ, ಮೈದಾನ ಒಣಗಲು ಸಾಲಲಿಲ್ಲ. ಹೀಗಾಗಿ ಟಾಸ್ ಕೂಡ ನಡೆಯಲಿಲ್ಲ. ಕೊನೆಗೆ ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಲಾಯಿತು. ಹುಬ್ಬಳ್ಳಿ ಮತ್ತು ಬಳ್ಳಾರಿ ತಂಡಗಳಿಗೆ ತಲಾ ಒಂದು ಅಂಕ ಹಂಚಲಾಯಿತು.
ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಬಿಜಾಪುರ ಬುಲ್ಸ್ ನಡುವಣ ಎಂಟನೇ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಬೇಕಿದ್ದು, ಅದಕ್ಕಾಗಿ ಮೈದಾನವನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications