Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಪಿಎಲ್: ಶಿವಮೊಗ್ಗ ಲಯನ್ಸ್ ವಿರುದ್ಧ ಹುಬ್ಳಿ ಟೈಗರ್ಸ್ 25 ರನ್ ಜಯ

Hubli Tigers vs Shivamogga Lions, 4th Match report

ಹುಬ್ಬಳ್ಳಿ, ಆಗಸ್ಟ್ 19: ಹುಬ್ಬಳ್ಳಿಯ ಸ್ಟೇಟ್ ಕ್ರಿಕೆಟ್ ಗ್ರೌಂಡ್ ನಲ್ಲಿ ಕೆಪಿಎಲ್ 2018ರ ನಾಲ್ಕನೇ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಮುಖಾಮುಖಿಯಲ್ಲಿ ಹುಬ್ಳಿ ಟೈಗರ್ಸ್ 25 ರನ್ ಜಯ ಸಾಧಿಸಿದೆ. ಪ್ರವೀಣ್ ಡೂಬೆ 43 (32), ನಾಯಕ ವಿನಯ್ ಕುಮಾರ್ 35 (13) ರನ್ ಕೊಡುಗೆ ತಂಡದ ಗೆಲುವಿಗೆ ಕಾರಣವಾಯ್ತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಹುಬ್ಳಿ ಟೈಗರ್ಸ್ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 160 ರನ್ ಪೇರಿಸಿತ್ತು. ಇದರಲ್ಲಿ ಅಭಿಷೇಕ್ ರೆಡ್ಡಿ 13, ಸುನಿಲ್ ಕುಮಾರ್ 23, ನಿತಿನ್ ಬಿಲ್ಲೆ 15 ರನ್ ಸೇರಿತ್ತು.

ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ನಿಂದ ಉತ್ತಮ ಬ್ಯಾಟಿಂಗ್ ಕಾಣಲಿಲ್ಲ. ರೊಂಗ್ಸೆನ್ ಜೊನಾಥನ್ 29, ಲಿಯಾನ್ ಖಾನ್ 16, ಅನಿರುದ್ಧ್ ಜೋಶಿ 15, ಪೃಥ್ವಿ ಶೆಖಾವತ್ 25 ರನ್ ನೆರವಿನಿಂದ 20 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 135 ರನ್ ಪೇರಿಸಲಷ್ಟೇ ಶಕ್ತವಾಯಿತು.

ಮೂರನೇ ಓವರ್ ಮುಕ್ತಾಯಕ್ಕೆ ಹುಬ್ಳಿ 1 ವಿಕೆಟ್ ಕಳೆದು 18 ರನ್ ಪೇರಿಸಿತ್ತು. ಅಭಿಷೇಕ್ 13 (8) ರನ್ನಿಗೆ ವಿಕೆಟ್ ಒಟ್ಟಿಸಿದ್ದರು. ಸುಜಿತ್ ಮತ್ತು ಸುನಿಲ್ ಕ್ರೀಸ್ ನಲ್ಲಿದ್ದರು.

ವಿನಯ್ ಕುಮಾರ್ ಮುಂದಾಳತ್ವದ ಹುಬ್ಳಿ ಟೈಗರ್ಸ್ ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರಿನಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಬಿಜಾಪುರ್ ಬುಲ್ಸ್ ಎದುರು ಗೆಲುವು ಸಾಧಿಸಿತ್ತು. ಶಿವಮೊಗ್ಗಕ್ಕಿದು ಮೊದಲ ಪಂದ್ಯ. ಈ ಪಂದ್ಯದಲ್ಲೂ ವಿನಯ್ ಬಳಗ ಪಾರಮ್ಯ ಮೆರೆಯಿತು.

ಹುಬ್ಳಿ ಟೈಗರ್ಸ್: ಅಭಿಷೇಕ್ ರೆಡ್ಡಿ, ಎಎಮ್ ಕಿರಣ್, ಸುಜಿತ್ ಎನ್ ಗೌಡ, ಸುನಿಲ್ ಕುಮಾರ್ ಜೈನ್, ವಿನಯ್ ಕುಮಾರ್ (ಸಿ), ಪ್ರವೀಣ್ ದುಬೇ, ನಿತಿನ್ ಬಿಲ್ಲೆ (ವಿಕೆ), ಕ್ರಾಂತಿ ಕುಮಾರ್, ಮಹೇಶ್ ಪಟೇಲ್, ಅನಿಲ್ ಐ ಜಿ, ದರ್ಶನ್ ಎಂಬಿ.

ಶಿವಮೊಗ್ಗ ಲಯನ್ಸ್: ರೋಹಿತ್ ಕೆ, ಶರತ್ ಬಿಆರ್ (ವಿ.ಕೆ), ಲಿಯಾನ್ ಖಾನ್, ರೊಂಗ್ಸೆನ್ ಜೊನಾಥನ್, ಅನಿರುದ್ಧ ಜೋಶಿ (ಸಿ), ಪೃಥ್ವಿ ಶೇಖಾವತ್, ಕಿಶೋರ್ ಕಾಮತ್, ಅದೋಕ್ಷ್ ಹೆಗ್ಡೆ, ಆದಿತ್ಯ ಸೋಮಣ್ಣ, ಅಬಿಲಾಸ್ ಶೆಟ್ಟಿ, ಕೆ ಹೊಯ್ಸಳ.

Story first published: Wednesday, August 22, 2018, 14:06 [IST]
Other articles published on Aug 22, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+