ಕೆಪಿಎಲ್ : ಬಿಜಾಪುರ ವಿರುದ್ಧ ಜಯ ದಾಖಲಿಸಿದ ಹುಬ್ಳಿ

ಬೆಂಗಳೂರು, ಆಗಸ್ಟ್ 14: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ (ಆಗಸ್ಟ್ 16) ಸಂಜೆ ಮಳೆಯ ಹಾವಳಿ ಇಲ್ಲದೆ ಕೆಪಿಎಲ್ ನ ಎರಡನೇ ಪಂದ್ಯ ಆರಂಭವಾಗಿದೆ. ಮೈಖೇಲ್ ನಲ್ಲಿ ಬಿಜಾಪುರ ಬುಲ್ಸ್ ಹಾಗೂ ಹುಬ್ಳಿ ಟೈಗರ್ಸ್ ಕದನದ ವರದಿ ಇಲ್ಲಿದೆ...129ರನ್ ಚೇಸ್ ಮಾಡಿದ ಹುಬ್ಳಿ ಟೈಗರ್ಸ್ 4ವಿಕೆಟ್ ಗಳಿಂದ ಜಯ ದಾಖಲಿಸಿದೆ.
ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ20 ಟೂರ್ನಮೆಂಟ್ ಆಗಸ್ಟ್ 15 ರಿಂದ ಸೆಪ್ಟೆಂಬರ್ 06 ರ ತನಕ ನಡೆಯಲಿದೆ.
ಬಿಜಾಪುರದ ಬುಲ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹುಬ್ಳಿ ಟೈಗರ್ಸ್ ನಾಯಕ ಆರ್ ವಿನಯ್ ಕುಮಾರ್ ಬೌಲಿಂಗ್ ಓಪನ್ ಮಾಡಿದರೆ, ಬಿಜಾಪುರ ಪರ ಭರತ್ ಚಿಪ್ಳಿ ಹಾಗೂ ಶಿಶಿರ್ ಭವಾನೆ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
ಹುಬ್ಳಿ ಟೈಗರ್ಸ್ ಚೇಸ್ : ಮೊದಲ ಓವರ್ ನಲ್ಲೇ 12ರನ್ ಗಳಿಸಿದ ಅಭಿಶೇಕ್ ಹಾಗೂ ಮೊಹಮ್ಮದ್ ತಾಹ. ತಾಹ 50 ಎಸೆತಗಳಲ್ಲಿ 60ರನ್ ಚೆಚ್ಚಿದರು. ಆದರೆ, ಮಧ್ಯಮ ಕ್ರಮಾಂಕದ ಕುಸಿತದಿಂದ ಆಘಾತದ ಕ್ಷಣಗಳನ್ನು ಎದುರಿಸಿತು. ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 131/6 ಸ್ಕೋರ್ ಮಾಡಿ ಜಯ ದಾಖಲಿಸಿತು.
ಬಿಜಾಪುರ್ ಬುಲ್ಸ್ ಇನ್ನಿಂಗ್ಸ್ : 10 ಓವರ್ ಗಳಲ್ಲಿ 57/4ರನ್ ಗಳಿಸಿದ್ದ ಬುಲ್ಸ್ ತಂಡವು 18ಓವರ್ ಗಳಲ್ಲಿ 100ರನ್ ಗಡಿ ದಾಟಿತು. ಅಂತಿಮವಾಗಿ 128/7 ಸ್ಕೋರ್ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications