ಕೆಪಿಎಲ್: ಮೈಸೂರು ವಾರಿಯರ್ಸ್ ವಿರುದ್ಧ ಹುಬ್ಳಿ ಟೈಗರ್ಸ್ ಗೆ ಜಯ

ಮೈಸೂರು, ಆಗಸ್ಟ್ 26: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಮೈಸೂರು ವಾರಿಯರ್ಸ್ ಮತ್ತು ಹುಬ್ಳಿ ಟೈಗರ್ಸ್ ನಡುವಿನ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ ತಂಡ 3ರನ್ ರೋಚಕ ಜಯ ಸಾಧಿಸಿದೆ.
ಕೆಪಿಎಲ್ 13ನೇ ಪಂದ್ಯದಲ್ಲಿನ ಇತ್ತಂಡಗಳ ಮುಖಾಮುಖಿಯಲ್ಲಿ ವಿನಯ್ ಕುಮಾರ್ ಬಳಗದ ಆರಂಭಿಕರಾದ ಮೊಹಮ್ಮದ್ ತಾಹ 68 (47) ರನ್ ನೊಂದಿಗೆ ತಂಡಕ್ಕೆ ಬಲ ತುಂಬಿದರು. ತಾಹ ಬಿಟ್ಟರೆ ಸುಜಿತ್ ಗೌಡ 31, ನಾಯಕ ವಿನಯ್ 30 ರನ್ ನೊಂದಿಗೆ ತಂಡದ ಗೆಲುವಿಗೆ ಕಾರಣರಾದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹುಬ್ಳಿ ಟೈಗರ್ಸ್ 20 ಓವರ್ ಗಳ ಮುಕ್ತಾಯಕ್ಕೆ 6 ವಿಕೆಟ್ ಕಳೆದು 182 ರನ್ ಪೇರಿಸಿ, ಎದುರಾಳಿಗೆ 183 ರನ್ ಟಾರ್ಗೆಟ್ ನೀಡಿತ್ತು. ಆದರೆ ಮೈಸೂರು ವಾರಿಯರ್ಸ್ ಗೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಪೇರಿಸಲಷ್ಟೇ ಸಾಧ್ಯವಾಯಿತು.
ಮೈಸೂರು ಇನ್ನಿಂಗ್ಸ್ ನಲ್ಲಿ ಹುಬ್ಳಿ ಟೈಗರ್ಸ್ ತಂಡದಿಂದ ಸೂರಜ್ ಶೇಶಾದ್ರಿ 3, ಮಹೇಶ್ ಪಟೇಲ್ 2 ವಿಕೆಟ್ ಉರುಳಿಸಿ ಕಾಡಿದರು. ಮೈಸೂರಿನಿಂದ ಅರ್ಜುನ್ ಹೊಯ್ಸಳ 31, ಶೋಯೇಬ್ ಮ್ಯಾನೇಜರ್ 58 ರನ್ ನೊಂದಿಗೆ ತಂಡಕ್ಕೆ ತಕ್ಕ ಮಟ್ಟಿನ ಬಲ ತುಂಬಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications