ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ ಮಹಿಳಾ ಪಂದ್ಯ: ಬುಲ್ಸ್ ವಿರುದ್ಧ ಪ್ಯಾಂಥರ್ಸ್ ಗೆ 7 ವಿಕೆಟ್ ಜಯ

KPL 2018: Women’s Exhibition Match No 2. Report

ಮೈಸೂರು, ಸೆಪ್ಟೆಂಬರ್ 5: ಮೈಸೂರಿನ ಎಸ್ಡಿಎನ್ಆರ್ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಕೆಪಿಎಲ್ ದ್ವಿತೀಯ ಪ್ರದರ್ಶನ ಪಂದ್ಯದಲ್ಲಿ ಬಿಜಾಪುರ್ ಬುಲ್ಸ್ ವಿರುದ್ಧ ಬೆಳಗಾವಿ ಪ್ಯಾಂಥರ್ಸ್ 7 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಆರಂಭಿಕ ಆಟಗಾರ್ತಿ ವೃಂದಾ ದಿನೇಶ್ ಅಜೇಯ 37 ರನ್ ನೊಂದಿಗೆ ಪ್ಯಾಂಥರ್ಸ್ ಗೆಲುವಿಗೆ ಕಾರಣರಾದರು.

ಏಷ್ಯಾಕಪ್ ಗೂ ಮುನ್ನ ಕೊಹ್ಲಿ-ರೋಹಿತ್ ಟ್ವೀಟ್ ಆನ್ ಫಾಲೋ?ಏಷ್ಯಾಕಪ್ ಗೂ ಮುನ್ನ ಕೊಹ್ಲಿ-ರೋಹಿತ್ ಟ್ವೀಟ್ ಆನ್ ಫಾಲೋ?

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಬಿಜಾಪುರ್ ಬುಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದು 84 ರನ್ ಪೇರಿಸಿತ್ತು. 85 ರನ್ ಗುರಿ ಬೆನ್ನತ್ತಿದ ಬೆಳಗಾವಿ ಪ್ಯಾಂಥರ್ಸ್ ವೃಂದಾ (37) ಮತ್ತು ಪ್ರತ್ಯುಕ್ಷಾ ಅವರ 20 ರನ್ ನೆರವಿನೊಂದಿಗೆ 16.5 ಓವರ್ ನಲ್ಲಿ 3 ವಿಕೆಟ್ ಕಳೆದು 85 ರನ್ ಪೇರಿಸಿ ಗೆಲುವನ್ನಾಚರಿಸಿತು.

ಬಿಜಾಪುರ್ ಇನ್ನಿಂಗ್ಸ್ ವೇಳೆ ಪ್ಯಾಂಥರ್ಸ್ ನ ಸಹನಾ ಪವರ್ 18 ರನ್ನಿಗೆ 3 ವಿಕೆಟ್ ಕೆಡವಿದ್ದು ಎದುರಾಳಿಯ ರನ್ ಕದಿಯುವಿಕೆಗೆ ಬ್ರೇಕ್ ಹಾಕಿತು. ಅಂತಿಮವಾಗಿ ಪ್ಯಾಂಥರ್ಸ್ ಸುಲಭ ಜಯ ತನ್ನದಾಗಿಸಿತು. ಮೊದಲನೇ ಪ್ರದರ್ಶನ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಮಹಿಳಾ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ವನಿತೆಯರು ಗೆದ್ದಿದ್ದರು.

Story first published: Wednesday, September 5, 2018, 22:28 [IST]
Other articles published on Sep 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X