ಐಪಿಎಲ್ ದಾಖಲೆ ಸಮಗಟ್ಟಿದ ಕೆಪಿಎಲ್ ಆಟಗಾರ ಸುಚಿತ್
ಮೈಸೂರು, ಸೆ. 15: ಎಡಗೈ ಬ್ಯಾಟ್ಸ್ ಮನ್ ಜೆ ಸುಚಿತ್ ಅವರು ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನಲ್ಲಿ ಅತ್ಯಂತ ತ್ವರಿತ ಗತಿಯಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ, ಮೈಸೂರು ವಾರಿಯರ್ಸ್ ತಂಡಕ್ಕೆ ಈ ತ್ವರಿತಗತಿ ಅರ್ಧಶತಕ ಪ್ರಯೋಜನಕ್ಕೆ ಬರಲಿಲ್ಲ. ಬಿಜಾಪುರ್ ಬುಲ್ಸ್ ತಂಡ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಿತು.
ಮೈಸೂರಿನ ಬ್ಯಾಟ್ಸ್ ಮನ್ ಜೆ ಸುಚಿತ್ ಅವರು 15 ಎಸೆತಗಳಲ್ಲಿ 54ರನ್ ಚೆಚ್ಚಿದರು. ಸುಚಿತ್ ಆಟದಲ್ಲಿ 3 ಬೌಂಡರಿ, 6 ಭರ್ಜರಿ ಸಿಕ್ಸರ್ ಗಳಿತ್ತು. ಇಂಡಿಯನ್ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಾ ಯೂಸುಫ್ ಪಠಾಣ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 15 ಎಸೆತಗಳಲ್ಲಿ 50 ರನ್ ಚೆಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 167ರನ್ ಗಳಿಸಿತ್ತು. ವಾರಿಯರ್ಸ್ ಪರ ಸಿಎಂ ಗೌತಮ್ 58ರನ್ ಹಾಗೂ ಸುಚಿತ್ ಅಜೇಯ 54ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು.

168ರನ್ ಚೇಸ್ ಮಾಡಿದ ಬಿಜಾಪುರ ಬುಲ್ಸ್ ತಂಡಕ್ಕೆ ರಾಜು ಭಟ್ಕಳ 40ರನ್ (21ಎಸೆತ) ಹಾಗೂ ರಾಬಿನ್ ಉತ್ತಪ್ಪ ಅಜೇಯ 49 ರನ್ (34ಎಸೆತ) ಜೊತೆಯಾಟದ ನೆರವು ಸಿಕ್ಕಿತು. ಅಂತಿಮವಾಗಿ ಬುಲ್ಸ್ ತಂಡ 19.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 171ರನ್ ಗಳಿಸಿ ಗೆಲುವಿನ ನಗೆ ಬೀರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications