Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಪಿಎಲ್ : ಬೆಂಗಳೂರು ಪಂದ್ಯಗಳಿಗೆ ಟಿಕೆಟ್ ಬೇಕಾ ಟಿಕೆಟ್

ಬೆಂಗಳೂರು, ಸೆ.2 : ಮೈಸೂರಿನಲ್ಲಿ ಶುಭಾರಂಭ ಮಾಡಿದ ಕರ್ನಾಟಕ ಪ್ರಿಮಿಯರ್ ಲೀಗ್ ಟಿ20 ಟೂರ್ನಿ ಇನ್ನೇನು ಬೆಂಗಳೂರಿಗೆ ಕಾಲಿಡಲಿದೆ. ಸೆ.5 ರಿಂದ ಬೆಂಗಳೂರಿನಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಇದಕ್ಕಾಗಿ ಮಂಗಳವಾರ(ಸೆ.2)ರಿಂದ ಕೆಎಸ್ ಸಿಎ ಟಿಕೆಟ್ ನೀಡುತ್ತಿದೆ.

ಕಾರ್ಬನ್ ಸ್ಮಾರ್ಟ್ ಕೆಪಿಲ್ ನ ಬೆಂಗಳೂರು ಪಂದ್ಯಗಳ ಟಿಕೆಟ್ ಸೆ.2 ರಿಂದ ನೀಡಲಾಗುತ್ತಿದೆ. ಅಭಿಮಾನಿಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್ ಗಳಲ್ಲಿ ಟಿಕೆಟ್ ಪಡೆದುಕೊಳ್ಳಬಹುದು ಎಂದು ಕೆಎಸ್ ಸಿಎ ಪ್ರಕಟಿಸಿದೆ. ಮಂಗಳವಾರ ಯುವರಾಜ್ ಸಿಂಗ್ vs ಉಸೇನ್ ಬೋಲ್ಡ್ ತಂಡಗಳ ನಡುವಿನ ಪ್ರದರ್ಶನ ಪಂದ್ಯ ಕೂಡಾ ನಡೆಯಲಿದ್ದು, ಉಚಿತ ಪ್ರವೇಶ ಒದಗಿಸಲಾಗಿದೆ. [ಯುವರಾಜ್ vs ಬೋಲ್ಟ್ ಮ್ಯಾಚ್]

ವೇಳಾಪಟ್ಟಿ || ಕೆಪಿಎಲ್ ಎಬಿಸಿಡಿ

KPL: Ticket sales for Bangalore matches from today (September 2)

ಎಲ್ಲಿ ಸಿಗುತ್ತೆ ಟಿಕೆಟ್?: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ.2ರಂದು 2 ಗಂಟೆ ನಂತರ ಗೇಟ್ ನಂ.7 ಹಾಗೂ ಗೇಟ್ ನಂ.8 ರಲ್ಲಿ ಟಿಕೆಟ್ ವಿತರಿಸಲಾಗುತ್ತಿದೆ. ಟಿಕೆಟ್ ಬೆಲೆ 25 ರು ಹಾಗೂ 45 ರು. ಅಲ್ಲದೆ, Ticketgenie.in ವೆಬ್ ತಾಣಕ್ಕೆ ಭೇಟಿ ನೀಡಿ ಆನ್ ಲೈನ್ ಮೂಲಕ ಕೂಡಾ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. [ಕಿಚ್ಚನ ಹುಡ್ಗರಿಗೆ ಹೀನಾಯ ಸೋಲು]

ಆ.28ರಂದು ಒಡೆಯರ್ ಕೆಪಿಎಲ್ ಟೂರ್ನಿ ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಆರಂಭವಾಗಿದ್ದು, ಸೆ.5 ರಿಂದ ಸೆ.7ರ ತನಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಅಂತಿಮ ಹಂತದ ಪಂದ್ಯಗಳು ಹುಬ್ಬಳ್ಳಿಯಲ್ಲಿ ಸೆ.9 ಹಾಗೂ ಸೆ.12ರಂದು ನಡೆಯಲಿದೆ. [ಬೆಂಗಳೂರು ಪಂದ್ಯಗಳಿಗೆ ಟಿಕೆಟ್ ಬೇಕಾ]

ಸೆಲೆಬ್ರಿಟಿಗಳ ತಂಡ ರಾಕ್ ಸ್ಟಾರ್ಸ್ ಜೊತೆಗೆ ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಮೈಸೂರು ವಾರಿಯರ್ಸ್, ಹುಬ್ಳಿ ಟೈಗರ್ಸ್, ಬಳ್ಳಾರಿ ಟಸ್ಕರ್ಸ್ ತಂಡಗಳು ಕಣದಲ್ಲಿವೆ.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+