For Quick Alerts
ALLOW NOTIFICATIONS  
For Daily Alerts
 

ವೆಸ್ಟ್‌ ಇಂಡೀಸ್ ಟೆಸ್ಟ್‌ ನಾಯಕರಾಗಿ ಕ್ರೇಗ್ ಬ್ರಾಥ್‌ವೇಟ್ ಆಯ್ಕೆ

Kraigg Brathwaite replaces Jason Holder as West Indies Test captain

ಆ್ಯಂಟಿಗುವಾ: ವೆಸ್ಟ್‌ ಇಂಡೀಸ್ ಟೆಸ್ಟ್‌ ಕ್ರಿಕೆಟ್ ತಂಡಕ್ಕೆ ನೂತನ ನಾಯಕರಾಗಿ ಕ್ರೇಗ್ ಬ್ರಾಥ್‌ವೇಟ್ ಆಯ್ಕೆಯಾಗಿದ್ದಾರೆ. ಟೆಸ್ಟ್‌ ತಂಡಕ್ಕೆ ನಾಯಕರಾಗಿದ್ದ ಆಲ್ ರೌಂಡರ್ ಜೇಸನ್ ಹೋಲ್ಡರ್ ಸ್ಥಾನಕ್ಕೆ ಬ್ರಾಥ್‌ವೇಟ್ ಆಯ್ಕೆಯಾಗಿರುವುದಾಗಿ ವೆಸ್ಟ್‌ ಇಂಡೀಸ್ ಕ್ರಿಕೆಟ್ ಹೇಳಿದೆ.

ಈ ಮೊದಲು ಜೇಸನ್ ಹೋಲ್ಡರ್‌ ಜೊತೆಗೆ ಉಪನಾಯಕರಾಗಿದ್ದ ಕ್ರೇಗ್ ಬ್ರಾಥ್‌ವೇಟ್ ಒಟ್ಟು 7 ಪಂದ್ಯಗಳಲ್ಲಿ ಕೆರಿಬಿಯನ್ ತಂಡವನ್ನು ಮುನ್ನಡೆಸಿದ್ದರು. ಇತ್ತೀಚೆಗಷ್ಟೇ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ವಿಂಡೀಸ್, ಅಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-0ಯ ಜಯ ಗಳಿಸಿತ್ತು.

'ವೆಸ್ಟ್‌ ಇಂಡೀಸ್ ರಾಷ್ಟ್ರೀಯ ತಂಡಕ್ಕೆ ನಾಯಕತ್ವ ವಹಿಸೋದು ದೊಡ್ಡ ಹೆಮ್ಮೆಯ ಸಂಗತಿ. ತಂಡ ಮುನ್ನಡೆಸುವ ಅವಕಾಶ, ಜವಾಬ್ದಾರಿ ನೀಡಿದ್ದಕ್ಕೆ ನಾನು ಕ್ರಿಕೆಟ್ ಬೋರ್ಡ್ ಮತ್ತು ಆಯ್ಕೆದಾರರಿಗೆ ವಿನಮ್ರನಾಗಿದ್ದೇನೆ,' ಎಂದು ಬ್ರಾಥ್‌ವೇಟ್ ಪ್ರತಿಕ್ರಿಯಿಸಿದ್ದಾರೆ.

ಸದ್ಯ ವೆಸ್ಟ್ ಇಂಡೀಸ್‌ಗೆ ಪ್ರವಾಸ ಬಂದಿರುವ ಶ್ರೀಲಂಕಾ ತಂಡ 3 ಪಂದ್ಯಗಳ ಟಿ20ಐ ಸರಣಿ ಬಳಿಕ 3 ಪಂದ್ಯಗಳ ಏಕದಿನ ಸರಣಿ ಆಡುತ್ತಿದೆ. ಮಾರ್ಚ್ 21ರಿಂದ ಇತ್ತಂಡಗಳ ಮಧ್ಯೆ 2 ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ ಪರ ಆಡುವ ಜೇಸನ್ ಹೋಲ್ಡರ್ ಇತ್ತೀಚೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಂಥ ಪ್ರದರ್ಶನ ನೀಡುತ್ತಿರಲಿಲ್ಲ. ಸದ್ಯ ಹೋಲ್ಡರ್ ಲಂಕಾ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ.

Story first published: Friday, March 12, 2021, 17:17 [IST]
Other articles published on Mar 12, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+