Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WI vs BAN: ಟೆಸ್ಟ್ ಕ್ರಿಕೆಟ್‌ನಲ್ಲಿ ದಿಗ್ಗಜ ಗ್ಯಾರಿ ಸೋಬರ್ಸ್ ಹಿಂದಿಕ್ಕಿದ ವೆಸ್ಟ್ ಇಂಡೀಸ್ ನಾಯಕ

ಜಮೈಕಾದಲ್ಲಿ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ನಾಯಕ ಕ್ರೇಗ್ ಬ್ರಾಥ್‌ವೈಟ್ ಹೊಸ ದಾಖಲೆ ಬರೆದಿದ್ದಾರೆ. ಮಾಜಿ ದಿಗ್ಗಜ ಬ್ಯಾಟರ್ ಗ್ಯಾರಿ ಸೋಬರ್ಸ್ ಅವರ ಟೆಸ್ಟ್ ದಾಖಲೆಯನ್ನು ಕ್ರೇಗ್ ಬ್ರಾಥ್‌ವೈಟ್ ಮುರಿದ್ದಾರೆ. ವೆಸ್ಟ್ ಇಂಡೀಸ್ ಪರ ಸತತವಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಗ್ಯಾರಿ ಸೋಬರ್ಸ್ ಅವರ 52 ವರ್ಷಗಳ ಹಳೆಯ ದಾಖಲೆಯನ್ನು ಬ್ರಾಥ್‌ವೈಟ್ ಮುರಿಯವಲ್ಲಿ ಯಶಸ್ವಿಯಾಗಿದ್ದಾರೆ.

ವೆಸ್ಟ್ ಇಂಡೀಸ್‌ ಪರ ಬ್ರಾಥ್‌ವೈಟ್ ಸತತವಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ದಾಖಲೆಯನ್ನು ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಬ್ರಾಥ್‌ವೈಟ್ ತಮ್ಮ 86ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಗ್ಯಾರಿ ಸೋಬರ್ಸ್ ಅವರು 1955 ರಿಂದ 1972 ರವರೆಗೆ ಒಟ್ಟು 85 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೆ, ಡೆಸ್ಮಂಡ್ ಹೇನ್ಸ್, ಬ್ರಿಯಾನ್ ಚಾರ್ಲ್ಸ್ ಲಾರಾ, ರೋಹನ್ ಕನ್ಹೈ, ಸರ್ ವಿವ್ ರಿಚರ್ಡ್ಸ್, ಮತ್ತು ಕರ್ಟ್ನಿ ವಾಲ್ಷ್ ಅವರಂತಹ ಸ್ಟಾರ್ ಆಟಗಾರರು ಈ ಪಟ್ಟಿಯಲ್ಲಿದ್ದಾರೆ.

Kraigg Brathwaite surpasses legendary Garry Sobers in Test cricket

ವಿಂಡೀಸ್ ದೈತ್ಯರ ದಾಖಲೆ

ಕ್ರೈಗ್ ಬ್ರಾಥ್‌ವೈಟ್: 2014 ರಿಂದ 2024 ರವರೆಗೆ 86 ಟೆಸ್ಟ್‌ಗಳು
ಗ್ಯಾರಿ ಸೋಬರ್ಸ್: 1955 ರಿಂದ 1972 ರವರೆಗೆ 85 ಟೆಸ್ಟ್‌ಗಳು
ಡೆಸ್ಮಂಡ್ ಹೇನ್ಸ್: 1979 ರಿಂದ 1988 ರವರೆಗೆ 72 ಟೆಸ್ಟ್‌ಗಳು
ಬ್ರಿಯಾನ್ ಲಾರಾ: 1992 ರಿಂದ 1991 ರವರೆಗೆ 64 ಟೆಸ್ಟ್‌ಗಳು
ರಿಚರ್ಡ್ಸ್: 1980 ರಿಂದ 1988 ರವರೆಗೆ 61 ಟೆಸ್ಟ್‌ಗಳು
ಕರ್ಟ್ನಿ ವಾಲ್ಷ್: 1990 ರಿಂದ 1997 ರವರೆಗೆ 53 ಟೆಸ್ಟ್‌ಗಳು

ವಿಶ್ವ ದಾಖಲೆ

ಇಂಗ್ಲೆಂಡ್‌ನ ಮಾಜಿ ನಾಯಕ ಅಲೆಸ್ಟರ್ ಕುಕ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿಶ್ವ ದಾಖಲೆ ಹೊಂದಿದ್ದಾರೆ. ಅವರು 2006 ರಿಂದ 2018 ರವರೆಗೆ ಒಟ್ಟು 159 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಲನ್ ಬಾರ್ಡರ್ (153), ಮಾರ್ಕ್ ವಾ (153), ಸುನಿಲ್ ಗವಾಸ್ಕರ್ (106), ಬ್ರೆಂಡನ್ ಮೆಕಲಮ್ (101) ಮತ್ತು ನಾಥನ್ ಲಿಯಾನ್ (100) ಈ ಪಟ್ಟಿಯಲ್ಲಿರುವ ಸ್ಟಾರ್ ಆಟಗಾರರ ಹೆಸರು. ಈ ಸ್ಟಾರ್ ಆಟಗಾರರೆಲ್ಲ ಸತತ 100 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

Story first published: Sunday, December 1, 2024, 23:11 [IST]
Other articles published on Dec 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+