ಹಾರ್ದಿಕ್ ಪಾಂಡ್ಯ ನಿಮ್ಮ ಕುಟುಂಬದವರಲ್ವಾ? ಬಿದ್ದು ಬಿದ್ದು ನಕ್ಕಿದ್ದೇಕೆ ಕುನಾಲ್ ಪಾಂಡ್ಯ?
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಹೋದರರ ಸವಾಲನ್ನು ಇತ್ತೀಚಿಗೆ ನೋಡಿದ್ದೇವೆ. ಕೃನಾಲ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕೆ ಇಳಿದರೆ, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಉಭಯ ಆಟಗಾರರ ನಡುವೆ ಜಿದ್ದು ಕಂಡು ಬಂದಿತ್ತು. ಅಲ್ಲದೆ ಈ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೆ ಕೃನಾಲ್ ಉತ್ತರ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಮಾಡಲು ಬಂದಾಗ, ಕೃನಾಲ್ ಬೌನ್ಸರ್ ಹಾಕಿ ಕಾಟ ನೀಡಿದರು. ಹಾರ್ದಿಕ್ ಈ ಎಸೆತವನ್ನು ಎದುರಿಸುವಲ್ಲಿ ವಿಫಲರಾದರು. ಬಳಿಕ ಹಾರ್ದಿಕ್ ಔಟ್ ಆದ ಬಳಿಕ ಕೃನಾಲ್ ಭರ್ಜರಿಯಾಗಿ ಸಂಭ್ರಮಿಸಿದರು. ಆಗ ಹಾರ್ದಿಕ್ ಕೃನಾಲ್ ಅವರನ್ನೇ ಓರೆಗಣ್ಣಿನಿಂದ ನೋಡುತ್ತಾ ಹೊರಟು ಹೋದರು. ಈ ಎಲ್ಲ ದೃಶ್ಯಗಳು ಅಭಿಮಾನಿಗಳಲ್ಲಿ ಉಭಯ ಆಟಗಾರರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸುವಂತೆ ಇತ್ತು. ಆದರೆ ಈ ಎಲ್ಲ ಊಹಾಪೋಹಗಳಿಗೆ ಕೃನಾಲ್ ತೆರೆ ಎಳೆದಿದ್ದಾರೆ.

ಮುಂಬೈ ಹಾಗೂ ಆರ್‌ಸಿಬಿ ನಡುವಣ ಪಂದ್ಯದ ಬಳಿಕ ಹಾರ್ದಿಕ್ ಹಾಗೂ ಕೃನಾಲ್ ಹ್ಯಾಂಡ್ ಶೇಕ್ ಮಾಡಿದ ದೃಶ್ಯಗಳು ಸಹ ಕಂಡು ಬರಲಿಲ್ಲ. ಆಗ ಅಭಿಮಾನಿಗಳ ಮನದಲ್ಲಿ ಮೂಡಿದ್ದ ಪ್ರಶ್ನೆ ಹೆಮ್ಮರವಾಗಿ ಬೆಳೆಯಲು ಆರಂಭಿಸಿತು. ಈಗ ಈ ಎಲ್ಲ ಪ್ರಶ್ನೆಗಳಿಗೆ ಕೃನಾಲ್ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ಆರ್‌ಸಿಬಿ ಇನ್ಸೈಡರ್ ಕಾರ್ಯಕ್ರಮದಲ್ಲಿ ನಿರೂಪಕ ಈ ಬಗ್ಗೆ ಪ್ರಶ್ನೆಯನ್ನು ಕೇಳಿದರು.
ಹಾರ್ದಿಕ್ ಬಗ್ಗೆ ಹೇಳಿದಿಷ್ಟು..
ಕೃನಾಲ್ ಮಿಸ್ಟರ್ ನಾಗ್ಸ್ ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡಿ ಹಾರ್ದಿಕ್ ಜೊತೆಗಿನ ಜಗಳದ ವದಂತಿಗಳನ್ನು ನಗುನಗುತ್ತಲೇ ತಳ್ಳಿಹಾಕಿದರು. ನಮ್ಮ ನಡುವೆ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದರು. ನನ್ನ ಹೇರ ಸ್ಟೈಲ್ ಹಾಗೂ ನನ್ನ ನೋಟವನ್ನು ನೋಡಿ ಜನ ಈ ರೀತಿ ಅಭಿಪ್ರಾಯಕ್ಕೆ ಬಂದಿರಬಹುದು ಎಂದು ಕೃನಾಲ್ ಹೇಳಿದ್ದಾರೆ.
ಇನ್ನು ಕೃನಾಲ್ ಪಾಂಡ್ಯ ಕ್ರಿಕ್ ಬಜ್‌ಗೆ ಸಂದರ್ಶನವನ್ನು ಸಹ ನೀಡಿದ್ದಾರೆ. ಈ ಸಂದರ್ಶನದಲ್ಲಿ ಕೃನಾಲ್‌ಗೆ ವಿಶ್ವದ ಶ್ರೇಷ್ಠ ಫಿನಿಶರ್‌ಗಳನ್ನು ಸೂಚಿಸುವಂತೆ ಕೇಳಲಾಯಿತು. ತಕ್ಷಣವೇ ಅವರು ಕೀರನ್ ಪೊಲಾರ್ಡ್, ಸಹೋದರ ಹಾರ್ದಿಕ್ ಪಾಂಡ್ಯ ಅವರ ಹೆಸರುಗಳನ್ನು ತಿಳಿಸಿದರು. ಇದು ಅವರ ನಡುವೆ ಯಾವುದೇ ದ್ವೇಷವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಕೃನಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭದಲ್ಲಿ ಆಡಿದ್ದರು. ಬಳಿಕ ಇಬ್ಬರೂ ತಂಡಗಳನ್ನು ಬಿಟ್ಟು ಬೇರೆ ತಂಡಗಳಿಗೆ ಹೋದರು. ಆದರೆ ಈಗ ಹಾರ್ದಿಕ್ ಅದೇ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ, ಕೃನಾಲ್ ಪಾಂಡ್ಯ ಚಾಂಪಿಯನ್ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಇವರು ಆರ್‌ಸಿಬಿ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications