For Quick Alerts
ALLOW NOTIFICATIONS  
For Daily Alerts
 

ನಿಮ್ಮನ್ನು ಈ ರೀತಿ ನೋಡಲು ನೋವಾಗುತ್ತದೆ: ಪಾಂಡ್ಯ ಬ್ರದರ್ಸ್ ಕುರಿತು ಪಂಖೂರಿ ಶರ್ಮಾ ಭಾವನಾತ್ಮಕ ಪೋಸ್ಟ್

Krunal’s wife shares emotional post for Pandya brothers ahead of IPL 2022

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈ ಬಾರಿಯ ಚೊಚ್ಚಲ ಪಂದ್ಯ ಮಾರ್ಚ್ 26ರಂದು ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಳೆದ ಆವೃತ್ತಿಯ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ನೂತನ ಫ್ರಾಂಚೈಸಿಗಳಾಗಿ ಕಣಕ್ಕಿಳಿಯುತ್ತಿವೆ. ಹೀಗಾಗಿ ಟೂರ್ನಿಗೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು, ಬಹುತೇಕ ಆಟಗಾರರು ತಾವು ಕಳೆದ ಬಾರಿ ಪ್ರತಿನಿಧಿಸಿದ್ದ ತಂಡವನ್ನು ಬಿಟ್ಟು ಬೇರೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅದರಲ್ಲಿಯೂ ಹಲವು ವರ್ಷಗಳಿಂದ ಒಂದೇ ಫ್ರಾಂಚೈಸಿ ಪರ ಕಣಕ್ಕಿಳಿದಿದ್ದ ಕೆಲ ಆಟಗಾರರು ಈ ಬಾರಿ ಬೇರೆ ಫ್ರಾಂಚೈಸಿಯ ಜೆರ್ಸಿ ತೊಟ್ಟು ಆಟವನ್ನಾಡಲಿದ್ದಾರೆ.

ಇನ್ನು ಪಾಂಡ್ಯ ಬ್ರದರ್ಸ್ ಎಂದೇ ಕರೆಯಲ್ಪಡುವ ಅಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಕೂಡ ತಾವು ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಕಳೆದ ಬಾರಿಯ ಐಪಿಎಲ್ ಆವೃತ್ತಿಯವರೆಗೂ ಕೇವಲ ಒಂದೇ ಫ್ರಾಂಚೈಸಿ ಪರ ಆಡಿದ ಆಟಗಾರರಾಗಿದ್ದಾರೆ. ಹಾರ್ದಿಕ್ ಪಾಂಡ್ಯ 2015ರಿಂದ ಐಪಿಎಲ್ ಆವೃತ್ತಿಯಿಂದ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದರೆ, ಸೋದರ ಕೃನಾಲ್ ಪಾಂಡ್ಯ ಕೂಡ 2016ರಿಂದ ಕಳೆದ ಬಾರಿಯ ಐಪಿಎಲ್ ಆವೃತ್ತಿಯವರೆಗೂ ಇದೇ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದಾರೆ. ಹೀಗೆ ತಾವು ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೂ ಸತತವಾಗಿ ಕೇವಲ ಮುಂಬೈ ಇಂಡಿಯನ್ಸ್ ತಂಡದ ಪರವೇ ಆಡುತ್ತಿದ್ದ ಪಾಂಡ್ಯ ಬ್ರದರ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬೇರೆ ತಂಡಗಳ ಪಾಲಾಗುವುದರ ಜೊತೆಗೆ ಇದೇ ಮೊದಲ ಬಾರಿಗೆ ಇಬ್ಬರೂ ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕುರಿತು ಇದೀಗ ಕೃನಾಲ್ ಪಾಂಡ್ಯ ಪತ್ನಿ ಪಂಖುರಿ ಶರ್ಮಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಒಂದೇ ತಂಡವನ್ನು ಪ್ರತಿನಿಧಿಸುತ್ತಿದ್ದ ಇಬ್ಬರಿಗೂ ತಾನು ಬೆಂಬಲ ಸೂಚಿಸುತ್ತಿದ್ದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಕಳೆದ ಆರು ವರ್ಷಗಳಿಂದ ಒಂದೇ ತಂಡದಲ್ಲಿದ್ದ ಇಬ್ಬರನ್ನೂ ಹುರಿದುಂಬಿಸುತ್ತಿದ್ದ ತನಗೆ ಈ ಬಾರಿ ಇಬ್ಬರನ್ನು ಎದುರು ಬದುರಾಗಿ ನೋಡಲು ಕೊಂಚ ನೋವಾಗುತ್ತದೆ ಎಂದು ಬರೆದುಕೊಂಡಿರುವ ಪಂಖುರಿ ಶರ್ಮಾ ಆದರೂ ಇಬ್ಬರಿಗೂ ಈ ಹಿಂದಿನ ರೀತಿಯೇ ಬೆಂಬಲ ಸೂಚಿಸುವುದಾಗಿ ಉಲ್ಲೇಖಿಸಿದ್ದಾರೆ.

ಹಾರ್ದಿಕ್ ಪಾಂಡ್ಯ 15 ಕೋಟಿಗೆ ನೂತನ ಫ್ರಾಂಚೈಸಿಯಾದ ಗುಜರಾತ್ ಟೈಟನ್ಸ್ ಸೇರಿದ್ದು, ನಾಯಕನಾಗಿ ನೇಮಕಗೊಂಡಿದ್ದಾರೆ. ಹಾಗೂ ಕೃನಾಲ್ ಪಾಂಡ್ಯ 8.25 ಕೋಟಿಗೆ ನೂತನ ಫ್ರಾಂಚೈಸಿಯಾದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಸಂಪೂರ್ಣ ತಂಡ: ಕೆಎಲ್ಗ ರಾಹುಲ್ ( ನಾಯಕ ) , ಮಾರ್ಕಸ್ ಸ್ಟೋನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಮಾರ್ಕ್ ವುಡ್, ಅವೇಶ್ ಖಾನ್, ಅಂಕಿತ್ ರಜಪೂತ್, ಕೆ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಖಾನ್ ಬದೋನಿ, ಕರಣ್ ಶರ್ಮಾ, ಎವಿನ್ ಲೂಯಿಸ್, ಮಯಾಂಕ್ ಯಾದವ್, ಕೈಲ್ ಮೇಯರ್ಸ್

ಗುಜರಾತ್ ಟೈಟನ್ಸ್ ಸಂಪೂರ್ಣ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಶೀದ್ ಖಾನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಜೇಸನ್ ರಾಯ್, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹಮದ್, ಸಾಯಿ ಕಿಶೋರ್, ವಿಜಯ್ ಶಂಕರ್, ಜಯಂತ್ ಯಾದವ್, ಡೊಮಿನಿಕ್ ಡ್ರೇಕ್ಸ್, ದರ್ಶನ್ ನಲ್ಕಂಡೆ, ಯಶ್ ಜೊಸೆಫ್ ದಯಾಳ್, ಪ್ರದೀಪ್ ಶ್ರೀವಾನ್ ದಯಾಳ್, , ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್

Story first published: Friday, March 18, 2022, 20:55 [IST]
Other articles published on Mar 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+