ಬೆಂಗಳೂರು, ಸೆ. 08: ಮುಂಬರುವ ರಣಜಿ ಋತುವಿನಲ್ಲಿ ಆಡುವ ಕರ್ನಾಟಕ ತಂಡಕ್ಕೆ ಸಂಭಾವ್ಯ ಆಟಗಾರರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ ಸಿಎ) ಪ್ರಕಟಿಸಿದೆ.
ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಮತ್ತೊಮ್ಮೆ ರಣಜಿಯಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಸಿದ್ದವಾಗುತ್ತಿದೆ. ಕೆಎಸ್ಸಿಎ ಆಯ್ಕೆ ಸಮಿತಿ ಸೋಮವಾರ ಪ್ರಕಟಿಸಿದ ಸಂಭಾವ್ಯ 31 ಆಟಗಾರರ ತಂಡದಿಂದ ಕುನಾಲ್ ಕಪೂರ್ ಹಾಗೂ ಕೆಪಿ ಅಪ್ಪಣ್ಣ ತಂಡದಿಂದ ಹೊರಹಾಕಲಾಗಿದೆ.ವೇಗಿ ರೋನಿತ್ ಮೋರೆ ಹಿಮಾಚಲ ಪ್ರದೇಶ ತಂಡಕ್ಕೆ ವಲಸೆ ಹೋಗಿದ್ದಾರೆ.
