ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾದಾರ್ಪಣೆ ಪಂದ್ಯದಲ್ಲೇ ಧೋನಿ ಸ್ಟೈಲ್‌ನಲ್ಲಿ ಫಿನಿಶ್ ಮಾಡಿದ ಕೌರ್

ksl harmanpreet kaur finished in dhoni style with sixer

ಲಂಡನ್, ಆಗಸ್ಟ್ 1: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಸೂಪರ್ ಲೀಗ್ ಕ್ರಿಕೆಟ್‌ ಟೂರ್ನಿಯ ತಮ್ಮ ಪಾದಾರ್ಪಣೆಯ ಪಂದ್ಯದಲ್ಲಿಯೇ ಭಾರತದ ಹರ್ಮನ್ ಪ್ರೀತ್ ಕೌರ್ ಮಿಂಚಿದ್ದಾರೆ.

ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಮೂಲಕ 'ಗ್ರೇಟ್ ಫಿನಿಶರ್' ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಅವರಂತೆ ತಮ್ಮ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ.

ಟಿ20 : ತ್ವರಿತಗತಿ 50 ಗಳಿಸಿದ ಸ್ಮೃತಿ ಕೊಂಡಾಡಿದ ಟ್ವೀಟ್ ಲೋಕ! ಟಿ20 : ತ್ವರಿತಗತಿ 50 ಗಳಿಸಿದ ಸ್ಮೃತಿ ಕೊಂಡಾಡಿದ ಟ್ವೀಟ್ ಲೋಕ!

ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 21 ಎಸೆತಗಳಲ್ಲಿ 34 ರನ್ ಬಾರಿಸಿದ ಕೌರ್, ಲಂಕಾಶೈರ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ಇಂಗ್ಲೆಂಡ್ ಕೌಂಟಿಯಲ್ಲಿ ಕೌರ್ ಅವರ ಮೊದಲ ಪಂದ್ಯವಾಗಿದೆ.

ಕೆನ್ನಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸರ್ರೆ ಸ್ಟಾರ್ಸ್ ತಂಡದ ವನಿತೆಯರು 20 ಓವರ್‌ಗಳಲ್ಲಿ 148 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನತ್ತಿದ ಲಂಕಾಶೈರ್ ನಿಕೋಲ್ ಬೋಲ್ಟನ್ ಅವರ 87 (61) ಅವರ ಬ್ಯಾಟಿಂಗ್ ನೆರವಿನಿಂದ ಗೆಲುವಿನ ಸನಿಹ ಬಂದರೂ ಕೊನೆಯಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಕ್ರಿಕೆಟ್ : ಜ. 23ರಿಂದ ಭಾರತದಿಂದ ನ್ಯೂಜಿಲೆಂಡ್ ಪ್ರವಾಸ ಆರಂಭ ಕ್ರಿಕೆಟ್ : ಜ. 23ರಿಂದ ಭಾರತದಿಂದ ನ್ಯೂಜಿಲೆಂಡ್ ಪ್ರವಾಸ ಆರಂಭ

ಕೊನೆಯ ಓವರ್‌ನಲ್ಲಿ ಗೆಲುವಿಗೆ 11 ರನ್ ಅವಶ್ಯಕತೆಯಿತ್ತು. ನಾಲ್ಕು ಎಸೆತಗಳಲ್ಲಿ 10 ರನ್ ಬೇಕಿದ್ದಾಗ ಸ್ಟ್ರೇಕ್‌ಗೆ ಬಂದ ಕೌರ್, 2, 4, 6 ರನ್ ಬಾರಿಸಿ ಇನ್ನೂ ಒಂದು ಎಸೆತ ಇರುವಾಗಲೇ ಗೆಲುವಿನ ದಡವನ್ನು ಮುಟ್ಟಿಸಿದರು.

ksl harmanpreet kaur finished in dhoni style with sixer

ಮತ್ತೆ ಅಬ್ಬರಿಸಿದ ಸ್ಮೃತಿ
ಮಹಿಳಾ ಟಿ20ಯಲ್ಲಿ ಅತಿವೇಗದ ಅರ್ಧಶತಕದ ದಾಖಲೆಯನ್ನು ಮೊದಲ ಪಂದ್ಯದಲ್ಲಿ ಸರಿಗಟ್ಟಿದ್ದ ಸ್ಮೃತಿ ಮಂದಾನ, ಸೌಥರ್ನ್ ವೈಪರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಮತ್ತೆ ಅಬ್ಬರಿಸಿದರು.

ಅಜೇಯ 43 (27) ರನ್ ಗಳಿಸಿದ ಸ್ಮೃತಿ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಇದ್ದವು.

ಮೊದಲು ಬ್ಯಾಟಿಂಗ್ ಮಾಡಿದ ಸೌಥರ್ನ್ ವೈಫರ್ಸ್ 18.1 ಓವರ್‌ಗಳಲ್ಲಿ ಕೇವಲ 91 ರನ್‌ಗೆ ಆಲೌಟ್ ಆಯಿತು. ಸಣ್ಣ ಗುರಿಯನ್ನು ಬೆನ್ನತ್ತಿದ ವೆಸ್ಟರ್ನ್ ಸ್ಟಾರ್ಮ್ 9.3 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Story first published: Wednesday, August 1, 2018, 17:20 [IST]
Other articles published on Aug 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X