For Quick Alerts
ALLOW NOTIFICATIONS  
For Daily Alerts
 

ಹ್ಯಾಟ್ರಿಕ್ ಪಡೆದು ದಾಖಲೆ ಬರೆದ ಚೈನಾಮನ್ ಕುಲದೀಪ್

By Mahesh

ಕೋಲ್ಕತಾ, ಸೆ. 21: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್ ಗಳು ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿಗೆ ತಮ್ಮದೇ ಆದ ಕೊಡುಗೆ ನೀಡಿದರು. ಅದರಲ್ಲೂ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಹ್ಯಾಟ್ರಿಕ್ ಪಡೆದು ದಾಖಲೆ ಬರೆದರು.

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತೀಯ ಬೌಲರ್ ಗಳ ಪೈಕಿ ಕುಲದೀಪ್ ಅವರು ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು.

Kuldeep becomes first indian spinner to take ODI hat-trick

ವೇಗಿಗಳಾದ ಚೇತನ್ ಶರ್ಮ, ಕಪಿಲ್ ದೇವ್ ಅವರ ನಂತರ ಕುಲದೀಪ್ ಅವರು ಈ ಸಾಧನೆ ಮಾಡಿದ್ದಾರೆ. ಒಟ್ಟಾರೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹ್ಯಾಟ್ರಿಕ್ ಪಡೆದ ಐದನೇ ಭಾರತೀಯ ಬೌಲರ್ ಎನಿಸಿಕೊಂಡರು.

26 ವರ್ಷಗಳ ನಂತರ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್ ಮತ್ತೊಮ್ಮೆ ಹ್ಯಾಟ್ರಿಕ್ ಗಳಿಸಿದ ಕ್ಷಣಕ್ಕೆ ಅಭಿಮಾನಿಗಳು ಸಾಕ್ಷಿಯಾದರು.

ಈಡನ್ ಗಾರ್ಡನ್ ನಲ್ಲಿ ಗುರುವಾರ(ಸೆ. 21) ನಡೆದ ಪಂದ್ಯದಲ್ಲಿ 253ರನ್ ಚೇಸ್ ಮಾಡುತ್ತಿದ್ದ ಆಸ್ಟ್ರೇಲಿಯಾ ತಂಡ ಸಂಕಷ್ಟದಲ್ಲಿತ್ತು. 148/5 ಆಗಿದ್ದಾಗ ಬೌಲ್ ಮಾಡಲು ಬಂದ ಕುಲದೀಪ್ ಅವರು ಮ್ಯಾಥ್ಯೂ ವೇಡ್, ಆಸ್ಟನ್ ಅಗರ್ ಹಾಗೂ ಪ್ಯಾಟ್ ಕುಮಿನ್ಸ್ ಅವರ ವಿಕೆಟ್ ಕಿತ್ತರು. ಇದು ಕುಲದೀಪ್ ಅವರ 8ನೇ ಓವರ್ ಆಗಿತ್ತು. ಇದಾದ ಬಳಿಕ ಪಂದ್ಯ ಭಾರತದ ಪಾಲಾಯಿತು. 253ರನ್ ಚೇಸ್ ಮಾಡಿದ ಆಸ್ಟ್ರೇಲಿಯಾ ತಂಡವು 43.1 ಓವರ್ ಗಳಲ್ಲಿ 202 ಸ್ಕೋರಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+