For Quick Alerts
ALLOW NOTIFICATIONS  
For Daily Alerts
 

ಚಾಹಲ್ ಗಿಂತ ಕುಲದೀಪ್ ಎದುರಿಸುವುದು ಕಷ್ಟ : ಮ್ಯಾಥ್ಯೂ ಹೇಡನ್

ಮೊಹಾಲಿ, ಮಾರ್ಚ್ 11 : ಶೇನ್ ವಾರ್ನ್ ಅವರ ಬತ್ತಳಕೆಯಲ್ಲಿದ್ದ 'ಡ್ರಿಫ್ಟ್' ಅಸ್ತ್ರ ಭಾರತದ ಎಡಗೈ ಲೆಗ್ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಯುಜವೇಂದ್ರ ಚಾಹಲ್ ಅವರಿಗಿಂತ ಪರಿಣಾಮಕಾರಿ ಬೌಲರ್ ಆಗಬಲ್ಲರು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಪಟು ಮ್ಯಾಥ್ಯೂ ಹೇಡನ್ ಅವರು ಪ್ರಶಂಸಿಸಿದ್ದಾರೆ.

ಕುಲದೀಪ್ ಯಾದವ್ ಮತ್ತು ಚಾಹಲ್ ರಂಥ ಫಿಂಗರ್ ಸ್ಪನ್ನರ್ ಗಳು ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ ಮನ್ ಗಳನ್ನು ಕೂಡ ತಮ್ಮ ವಿಶಿಷ್ಟ ಬಗೆಯ ಬೌಲಿಂಗ್ ಮತ್ತು ವೆರೈಟಿಯಿಂದಾಗಿ ಕಂಗೆಡಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಒಂದಾನೊಂದು ಕಾಲದಲ್ಲಿ ತಮ್ಮ ಅಟ್ಯಾಕಿಂಗ್ ಬ್ಯಾಟಿಂಗ್ ನಿಂದಾಗಿ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿದ್ದ, ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್ ಮನ್ ಮ್ಯಾಥ್ಯೂ ಹೇಡನ್ ಅವರು, ಯಾದವ್ ಮತ್ತು ಚಾಹಲ್ ಸೇರಿದಂತೆ ಭಾರತದ ಬೌಲರ್ ಗಳ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳ ಬಗ್ಗೆ ಮಾತನಾಡಿದ್ದಾರೆ.

ವಾರ್ನ್ ರಂತೆ ಕುಲದೀಪ್ ಸಮರ್ಥ ಬೌಲರ್

ವಾರ್ನ್ ರಂತೆ ಕುಲದೀಪ್ ಸಮರ್ಥ ಬೌಲರ್

ತಂಡದಲ್ಲಿ ಲೆಗ್ ಸ್ಪಿನ್ನರ್ ಗಳಿದ್ದರೆ ಬೌಲಿಂಗ್ ಅಟ್ಯಾಕ್ ನಲ್ಲಿ ಸಾಕಷ್ಟು ಆಯ್ಕೆಗಳಿರುತ್ತವೆ ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ. ಕುಲದೀಪ್ ಅವರನ್ನು ನೋಡಿದರೆ, ಅವರು ಎಷ್ಟರ ಮಟ್ಟಿಗೆ ಚೆಂಡನ್ನು ತಿರುಗಿಸುತ್ತಾರೆ ಎಂಬುದಕ್ಕಿಂತ, ಅದು ಬ್ಯಾಟ್ಸ್ ಮನ್ ಬಳಿ ಹೇಗೆ ಬರುತ್ತದೆ ಎಂಬುದು ಮುಖ್ಯವಾಗುತ್ತದೆ. ಶೇನ್ ವಾರ್ನ್ ರಂತೆ ಕುಲದೀಪ್ ಅವರ ಸಾಮರ್ಥ್ಯವೂ ಇದೇ. ಗಾಳಿಯಲ್ಲಿಯೇ ತಿರುವು ಪಡೆಯುತ್ತ ಲ್ಯಾಂಡ್ ಮಾಡುವುದು ಅವರ ಸಾಮರ್ಥ್ಯ ಎಂದಿದ್ದಾರೆ ಹೇಡನ್.

ಭಾರತ vs ಆಸೀಸ್: ಉತ್ತಮ ಜೊತೆಯಾಟಕ್ಕಾಗಿ ರೋಹಿತ್-ಧವನ್ ದಾಖಲೆ

ಚಾಹಲ್ ಎದುರಿಸಲು ಇಷ್ಟಪಡುತ್ತಿದ್ದೆ

ಚಾಹಲ್ ಎದುರಿಸಲು ಇಷ್ಟಪಡುತ್ತಿದ್ದೆ

ಆದರೆ, ಕುಲದೀಪ್ ಅವರಿಗೆ ಹೋಲಿಸಿದರೆ ಚಾಹಲ್ ಅವರನ್ನು ಸುಲಭವಾಗಿ ಆಡಬಹುದು. ಅವರು ಕೂಡ ವಿಭಿನ್ನ ಬೌಲರ್, ಸ್ಟಂಪ್ ನಿಂದ ಸ್ಟಂಪ್ ಗೆ ಬೌಲ್ ಮಾಡುತ್ತಾರೆ. ಅವರು ಹೆಚ್ಚಾಗಿ ಫ್ಲಾಟ್ ಆಗಿ ಮತ್ತು ನೇರವಾಗಿ ಬೌಲ್ ಮಾಡುತ್ತಾರೆ. ಡ್ರಿಫ್ಟ್ ಅವರ ಬಳಿಯಿಲ್ಲ. ಇಂದು ನಾನು ಆಟವಾಡುತ್ತಿದ್ದರೆ, ಕುಲದೀಪ್ ಬದಲು ಚಾಹಲ್ ಅವರನ್ನು ಎದುರಿಸಲು ಇಷ್ಟಪಡುತ್ತಿದ್ದೆ ಎಂದು ವಿಶ್ಲೇಷಿಸಿದ್ದಾರೆ ಹೇಡನ್. ಕುಲದೀಪ್ ಅವರನ್ನು ತಂಡದಲ್ಲಿ ಪ್ರೀತಿಯಿಂದ 'ಕುಲ್ಚಾ' ಎಂದು ಕರೆಯುತ್ತಾರೆ.

ಆಫ್ ಸ್ಪಿನ್ ಕಲೆ ಮಾಯವಾಗುತ್ತಿದೆ

ಆಫ್ ಸ್ಪಿನ್ ಕಲೆ ಮಾಯವಾಗುತ್ತಿದೆ

ಕೆಲ ವರ್ಷಗಳ ಹಿಂದೆ ಆಫ್ ಸ್ಪಿನ್ನರ್ ಗಳು ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವಲ್ಲಿ ಸಫಲರಾಗುತ್ತಿದ್ದರು. ಈಗಿನ ದಿನಗಳಲ್ಲಿ ಆಫ್ ಸ್ಪಿನ್ನರ್ ಗಳ ಬೌಲಿಂಗ್ ಶೈಲಿಯನ್ನು ಬ್ಯಾಟ್ಸ್ ಮನ್ ಗಳು ಚೆನ್ನಾಗಿ ಅರಿತಿದ್ದಾರೆ. ಅಲ್ಲದೆ, ಆಫ್ ಸ್ಪಿನ್ ಬೌಲರ್ ಗಳು ಚೆಂಡಿನ ವೇಗವನ್ನು ನಿಯಂತ್ರಿಸುವ ಕಲೆಯನ್ನು ಮರೆತುಬಿಟ್ಟಿದ್ದಾರೆ. ನಾಗಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನೇತನ್ ಲಿಯನ್ ಅವರ ಬೌಲಿಂಗ್ ನಲ್ಲಿ ಇದನ್ನು ಗುರುತಿಸಬಹುದಾಗಿತ್ತು. ಎರಡನೇ ಬಾರಿ ದಾಳಿಗೆ ಬಂದಾಗ ಅವರ ಬೌಲಿಂಗ್ ವೇಗ ಗಂಟೆಗೆ 10 ಕಿ.ಮೀ.ನಷ್ಟು ಕುಗ್ಗಿತ್ತು. ಈ ಕಾರಣದಿಂದಾಗಿ ಅವರನ್ನು ಎದುರಿಸುವುದು ಬಲೇ ಕಷ್ಟವಾಗಿತ್ತು. ಕೆಲ ಬೌಲರ್ ಗಳು ವಿಕೆಟ್ ಕಿತ್ತುಕೊಳ್ಳಲು ಯತ್ನಿಸುವ ಬದಲು ರನ್ ನಿಯಂತ್ರಿಸುವುದರಲ್ಲೇ ಸಂತುಷ್ಟರಾಗುತ್ತಾರೆ. ಅವರಲ್ಲಿ ಆ ವಿಕೆಟ್ ತೆಗೆಯಲು ಇರಬೇಕಾದ ಧೈರ್ಯ ಇಲ್ಲವೇ ಇರುವುದಿಲ್ಲ ಎಂದು ಮ್ಯಾಥ್ಯೂ ವಿಶ್ಲೇಷಿಸಿದರು.

ಆಸ್ಟ್ರೇಲಿಯಾ ಫೈಟ್ ಬ್ಯಾಕ್ ಮಾಡಿದ್ದಕ್ಕೆ ಸಂತಸ

ಆಸ್ಟ್ರೇಲಿಯಾ ಫೈಟ್ ಬ್ಯಾಕ್ ಮಾಡಿದ್ದಕ್ಕೆ ಸಂತಸ

ಮೊದಲೆರಡು ಏಕದಿನ ಪಂದ್ಯಗಳಿಗಿಂತ ಮೂರನೇ ಮತ್ತು ನಂತರದ ಏಕದಿನ ಪಂದ್ಯಗಳಲ್ಲಿ ಸ್ಕೋರ್ ಮಾಡಲು ಅವಕಾಶಗಳಿದ್ದವು. ಮೊದಲೆರಡು ಬೌಲರ್ ಗಳಿಗೆ ಅನುಕೂಲಕರವಾಗಿದ್ದವು. ಆಸ್ಟ್ರೇಲಿಯಾದಲ್ಲಿ ಬೌನ್ಸರ್ ಪಿಚ್ ಗಳಿರುವುದರಿಂದ ನಮ್ಮ ಆಸ್ಟ್ರೇಲಿಯನ್ನರ ಕೈಗಳು ಸಹಜವಾಗಿ ಆನ್ ಸೈಡಿಗೆ ಹೋಗುತ್ತವೆ. ಆದರೆ, ಭಾರತದಲ್ಲಿ ಅಷ್ಟು ಬೌನ್ಸ್ ಆಗದಿರುವುದರಿಂದ, ಇಲ್ಲಿ ಆ ರೀತಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಆದರೆ, ವಿರಾಟ್ ಕೊಹ್ಲಿಯವರು ವಿಭಿನ್ನವಾಗಿ ಆಡುತ್ತಾರೆ. ಅವರ ಹೊಡೆತಗಳು ಹೆಚ್ಚಿಗೆ ಆಫ್ ಸೈಡಿನಲ್ಲಿ ಇರುತ್ತವೆ. ನಮಗೆ ಇಲ್ಲಿ ಬ್ಯಾಟಿಂಗ್ ಶೈಲಿ ಬದಲಿಸಿಕೊಳ್ಳುವುದು ಕಷ್ಟ ಎಂದರು. ಆಸ್ಟ್ರೇಲಿಯಾ ಫೈಟ್ ಬ್ಯಾಕ್ ಮಾಡಿದ್ದಕ್ಕೆ ಅವರು ಸಂತೋಷವನ್ನೂ ವ್ಯಕ್ತಪಡಿಸಿದರು.

ಕೇದಾರ್ ಜಾಧವ್ ಬೌಲಿಂಗ್ ಶೈಲಿ

ಕೇದಾರ್ ಜಾಧವ್ ಬೌಲಿಂಗ್ ಶೈಲಿ

ಕೇದಾರ್ ಜಾಧವ್ ಅವರ ಬೌಲಿಂಗ್ ಬಗ್ಗೆ ಪ್ರಸ್ತಾಪಿಸಿದ ಮ್ಯಾಥ್ಯೂ ಹೇಡನ್, ಜಾಧವ್ ರಂಥವರು ನೇರವಾಗಿ ಸ್ಟಂಪ್ ನಿಂದ ಸ್ಪಂಟ್ ಗೆ ಬೌಲಿಂಗ್ ಮಾಡಿದರೆ ಮಾತ್ರ ಪರಿಣಾಮಕಾರಿಯಾಗಿರುತ್ತಾರೆ. ಅವರನ್ನು ಕೊಹ್ಲಿ ಅದೇ ರೀತಿ ಬಳಸಿಕೊಂಡಿದ್ದಾರೆ. ಜಾಧವ್ ಅವರ ಕಡಿಮೆ ಎತ್ತರದ ಬೌನ್ಸ್ ಅನ್ನು ಮಾಂಗೂಸ್ ಬ್ಯಾಟ್ ಇದ್ದರೆ ಅತ್ಯುತ್ತಮವಾಗಿ ಎದುರಿಸಬಹುದಾಗಿತ್ತು ಎಂದು ಮ್ಯಾಥ್ಯೂ ಹೇಡನ್ ವಿಶ್ಲೇಷಿಸಿದರು. ಹಿಂದೆ ಐಪಿಎಲ್ ನಲ್ಲಿ ಮ್ಯಾಥ್ಯೂ ಹೇಡನ್ ಅವರು ಮಾಂಗೂಸ್ ಬ್ಯಾಟ್ ಬಳಸಿದ್ದರು ಮತ್ತು ಯಶಸ್ವಿಯೂ ಆಗಿದ್ದರು.

Story first published: Monday, March 11, 2019, 16:53 [IST]
Other articles published on Mar 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+