ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟ್ ಪ್ಲೇಯರ್‌ಗೆ ಇಂದು ಜನ್ಮದಿನದ ಸಂಭ್ರಮ. ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಪ್ಲೇಯರ್, ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್‌ನ ನಂಬಿಕಸ್ಥ ಬೌಲರ್. ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದ ಚೈನಾ ಮೆನ್ ಬೌಲರ್ ಕುಲ್ದೀಪ್ ಯಾದವ್..
ಕುಲ್ದೀಪ್ ಯಾದವ್ ಇಂದು ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕುಲದೀಪ್ ಪ್ರಸ್ತುತ ಭಾರತದ ಪ್ರಮುಖ ಸ್ಪಿನ್ನರ್. ಇತ್ತೀಚೆಗೆ ಏಕದಿನ ವಿಶ್ವಕಪ್ 2023 ರಲ್ಲಿ, ಭಾರತೀಯ ತಂಡದ ಮ್ಯಾನೇಜ್ಮೆಂಟ್ ಕುಲ್ದೀಪ್ ಮೇಲೆ ವಿಶ್ವಾಸವನ್ನು ವ್ಯಕ್ತಪಡಿಸಿತು ಮತ್ತು ಅವರನ್ನು ಮುಖ್ಯ ಸ್ಪಿನ್ನರ್ ಆಗಿ ತಂಡದಲ್ಲಿ ಆಯ್ಕೆ ಮಾಡಿತು. ಕುಲ್ದೀಪ್ ಕೂಡ ಟೂರ್ನಿಯಲ್ಲಿ ಟೀಂ ಇಂಡಿಯಾದ ನಿರೀಕ್ಷೆಗೆ ತಕ್ಕ ಹಾಗೆ ಬೌಲಿಂಗ್ ಮಾಡಿ, 11 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಯು ಕ್ರಿಕೆಟಿಗರ ವೃತ್ತಿಜೀವನವನ್ನು ಹಾಳುಮಾಡುತ್ತದೆ. ಆದರೆ ಅದು ಕುಲ್ದೀಪ್ ಅವರ ವೃತ್ತಿಜೀವನಕ್ಕೆ ಹೊಳಪು ನೀಡಿತು.

ಕುಲ್ದೀಪ್ ಅವರ ವೃತ್ತಿಜೀವನವನ್ನು ರೂಪಿಸುವಲ್ಲಿ ಶಸ್ತ್ರಚಿಕಿತ್ಸೆ ಪ್ರಮುಖ ಪಾತ್ರ ವಹಿಸಿದೆ. 2021 ರಲ್ಲಿ, ಕುಲ್ದೀಪ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ನಂತರ ಅವರು ತಮ್ಮ ಬೌಲಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು. ಶಸ್ತ್ರಚಿಕಿತ್ಸೆಯ ನಂತರ ಪುನರ್ವಸತಿ ಸಮಯದಲ್ಲಿ, ಮಾಜಿ ಫಿಸಿಯೋ ಆಶಿಶ್ ಕೌಶಿಕ್ ಕುಲ್ದೀಪ್ ಅವರ ಬಲಗಾಲಿನ ಮೇಲೆ ಕಡಿಮೆ ತೂಕವನ್ನು ಹಾಕಲು ಸಲಹೆ ನೀಡಿದರು. ಆಶಿಶ್ ಕೌಶಿಕ್ ಅವರ ಈ ಸಲಹೆಯು ಕುಲ್ದೀಪ್ ವರವಾಗಿ ಪರಿಣಮಿಸಿತು.
ನಾನು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾಗ ಫಿಸಿಯೋ ಆಶಿಶ್ ಕೌಶಿಕ್ ನನ್ನ ಬಲಗಾಲಿನ ತೂಕ ಕಡಿಮೆ ಇರಬೇಕು ಎಂದು ಸಲಹೆ ನೀಡಿದ್ದರು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ಪುನರ್ವಸತಿ ನಂತರ ತರಬೇತಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ನಾನು ವ್ಯತ್ಯಾಸವನ್ನು ಕಂಡಿದ್ದೇನೆ. ಈ ಸಣ್ಣ ಮಾರ್ಪಾಡು ಮಾಡಿದ್ದರಿಂದ ಲಯ ಪಡೆಯಲು ನನಗೆ 6 ತಿಂಗಳು ಬೇಕಾಯಿತು ಎಂದು ಕುಲ್ದೀಪ್ ಹೇಳಿದ್ದರು.

ಕುಲ್ದೀಪ್ ಯಾದವ್ ಟೆಸ್ಟ್, ಏಕದಿನ ಮತ್ತು ಟಿ20 ಅಂತಾರಾಷ್ಟ್ರೀಯ ಎಲ್ಲಾ ಮೂರು ಸ್ವರೂಪಗಳಲ್ಲಿ 5 ವಿಕೆಟ್ ಪಡೆದ ಬೌಲರ್. ಕುಲ್ದೀಪ್ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 8 ಟೆಸ್ಟ್, 101 ಏಕದಿನ ಮತ್ತು 33 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಅವರು 21.55 ಸರಾಸರಿಯಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೇ ಏಕದಿನದಲ್ಲಿ 25.86ರ ಸರಾಸರಿಯಲ್ಲಿ 167 ವಿಕೆಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ 14.79ರ ಸರಾಸರಿಯಲ್ಲಿ 53 ವಿಕೆಟ್‌ಗಳನ್ನು ಪಡೆದಿದ್ದಾರೆ.
ಈಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದಿರುವ ಇವರು, ಅಬ್ಬರಿಸಲಿ ಎಂಬುದೇ ಅಭಿಮಾನಿಗಳ ಆಶಯ.