ಕುಲ್ದೀಪ್ ಯಾದವ್ ಹೆಸರಿನಲ್ಲಿದೆ ಭಾರತದ ಯಾವ ಸ್ಪಿನ್ನರ್‌ನಿಂದಲೂ ಈವರೆಗೆ ಮುರಿಯಲು ಸಾಧ್ಯವಾಗದ 4 ವಿಶೇಷ ದಾಖಲೆಗಳು!

ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪರದಾಡುತ್ತಿರುವ ಆಟಗಾರ. ಕೆಲ ವರ್ಷಗಳ ಹಿಂದೆ ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದ ಕುಲ್ದೀಪ್ ಸಾಕಷ್ಟು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ನಂತರ ಬೌಲಿಂಗ್‌ನಲ್ಲಿ ಮೊನಚು ಕಳೆದುಕೊಂಡಿದ್ದ ಕುಲ್‌ದೀಪ್ ಸ್ಥಿರವಾಗಿ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಈ ಸಂದರ್ಭದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡು ಅದ್ಭುತ ಪ್ರದರ್ಶನ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿರುವ ಕುಲ್ದೀಪ್ ಯಾದವ್ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದು ಆತಿಥೇಯ ಬಾಂಗ್ಲಾದೇಶ ತಂಡಕ್ಕೆ ಆಘಾತ ನೀಡಿದ್ದಾರೆ. ಈ ಮೂಲಕ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿದೆ.
ಆದರೆ ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಸಾಕಷ್ಟು ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಸದ್ಯ ಕುಲ್ದೀಪ್ ಟೀಮ್ ಇಂಡಿಯಾದಲ್ಲಿ ಮೊದಲ ಆಯ್ಕೆಯ ಸ್ಪಿನ್ನರ್ ಆಗಿಲ್ಲದಿದ್ದರೂ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಮಾಡಿರುವ ಸಾಧನೆಗಳನ್ನು ಈವರೆಗೂ ಭಾರತದ ಬೇರೆ ಯಾವ ಸ್ಪಿನ್ನರ್‌ಗಳಿಂದಲೂ ಮಾಡಲು ಸಾಧ್ಯವಾಗಿಲ್ಲ. ಅಂಥಾ ನಾಲ್ಕು ವಿಶೇಷ ಸಾಧನೆಗಳು ಇಲ್ಲಿದೆ. ಮುಂದೆ ಓದಿ..

ಭಾರತದ ಪರ ಅತೀ ಹೆಚ್ಚು ಹ್ಯಾಟ್ರಿಕ್ ಸಾಧನೆ
ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಹೆಸರಿನಲ್ಲಿ ಪ್ರತಿಷ್ಠಿತ ದಾಖಳೆಯೊಂದಿದೆ. ಭಾರತೀಯ ಆಟಗಾರರ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಹ್ಯಾಟ್ರಿಕ್ ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ ಕುಲ್ದೀಪ್ ಯಾದವ್. ಎರಡು ಬಾರಿ ಕುಲ್ದೀಪ್ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ ಅದಾದ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ 2019ರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ನ್ಯೂಜಿಲೆಂಡ್ ಎ ತಮಡದ ವಿರುದ್ಧ ಭಾರತ ಎ ತಂಡದ ಪರವಾಗಿ ಅನಧಿಕೃತ ಟೆಸ್ಟ್ ಪಂದ್ಯದಲ್ಲಿಯೂ ಕುಲ್ದೀಪ್ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

3 ಮಾದರಿಯಲ್ಲೂ 5 ವಿಕೆಟ್ ಗೊಂಚಲು
ಕುಲ್ದೀಪ್ ಯಾದವ್ ಭಾರತ ತಂಡದ ಪರವಾಗಿ ಮತ್ತೊಂದು ಪ್ರಮುಖ ಸಾಧನೆ ಮಾಡಿದ್ದಾರೆ. ಟೆಸ್ಟ್ ಏಕದಿನ ಹಾಗೂ ಟಿ20 ಈ ಮೂರು ಮಾದರಿಯಲ್ಲಿಯೂ ಕುಲ್ದೀಪ್ ಯಾದವ್ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ, ಭಾರತದ ಬೇರೆ ಯಾವ ಸ್ಪಿನ್ನರ್ ಕೂಡ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಕಡಿಮೆ ಪಂದ್ಯದಲ್ಲಿ 100 ಏಕದಿನ ವಿಕೆಟ್
2017ರ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಮ್ ಇಂಡಿಯಾದ ಏಕದಿನ ಮಾದರಿಯಲ್ಲಿ ವಿಕೆಟ್ ಟೇಕಿಂಗ್ ಬೌಲರ್ ಎನಿಸಿಕೊಂಡಿದ್ದರು ಕುಲ್ದೀಪ್ ಯಾದವ್. ಏಕದಿನ ಮಾದರಿಯಲ್ಲಿ ಕೇವಲ 58 ಪಂದ್ಯಗಳಲ್ಲಿ 100 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಈ ಮೂಲಕ ಹರ್ಭಜನ್ ಸಿಂಗ್ ಹೆಸರಿನಲ್ಲಿದ್ದ ದಾಖಲೆ ಮುರಿದು ತಮ್ಮ ಹೆಸರಿಗೆ ಬರೆದುಕೊಂಡರು.

ಇಂಗ್ಲೆಂಡ್‌ನಲ್ಲಿ ODIನಲ್ಲಿ 6 ವಿಕೆಟ್ ಗೊಂಚಲು
ಇಂಗ್ಲೆಂಡ್ ಪಿಚ್ ಪರಿಸ್ಥಿತಿ ವೇಗಿಗಳಿಗೆ ಹಾಗೂ ಸ್ವಿಂಗ್ ಬೌಲಿಂಗ್‌ಗೆ ಹೆಚ್ಚು ಅನುಕೂಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ಸ್ಪಿನ್ನರ್‌ಗಳು ಯಶಸ್ಸು ಸಾಧಿಸುವುದು ಬಹಳ ಕಠಿಣ. ಆದರೆ ಇಂಥಾ ಪರಿಸ್ಥಿತಿಯಲ್ಲಿಯೂ ಕುಲ್ದೀಪ್ ಯಾದವ್ ಆರು ವಿಕೆಟ್‌ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಅದು ಕೂಡ ಏಕದಿನ ಮಾದರಿಯಲ್ಲಿ. 2018ರ ಪ್ರವಾಸದಲ್ಲಿ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು ಯಾದವ್. ಈ ಪಂದ್ಯದಲ್ಲಿ ಕೇವಲ 25 ರನ್‌ಗಳನ್ನು ನೀಡಿ 6 ವಿಕೆಟ್ ಸಂಪಾದಿಸಿದ್ದಾದ್ದರು. ಈ ಸಾಧನೆಯನ್ನು ಬೇರೆ ಯಾವ ಭಾರತೀಯ ಸ್ಪಿನ್ನರ್‌ನಿಂದಲೂ ಸಾಧ್ಯವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications