Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Kuldeep Yadav: ಇಂಗ್ಲೆಂಡ್‌ನಲ್ಲಿ ಸಿಗದ ಅವಕಾಶ ಯುಎಇನಲ್ಲಿ ಸ್ಪಿನ್ನರ್ ಇತಿಹಾಸ

ಟೀಮ್ ಇಂಡಿಯಾ ಇತ್ತೀಚಿಗೆ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿತ್ತು. ಈ ವೇಳೆ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿ ಆಡಿತು. ಈ ಸರಣಿಗೆ ಪ್ರಕಟಿತ ತಂಡದಲ್ಲಿ ಸ್ಟಾರ್ ಸ್ಪಿನ್ ಬೌಲರ್‌ ಒಬ್ಬರಿಗೂ ಅವಕಾಶ ನೀಡಲಾಗಿತ್ತು. ಆದರೆ ಆ ಬೌಲರ್‌ ಐದು ಟೆಸ್ಟ್‌ ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದೆ ಆಯಿತು. ಬಿಟ್ಟರೆ, ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಆ ಪ್ಲೇಯರ್‌ಗೆ ಸಿಗಲಿಲ್ಲ. ಈ ಬಗ್ಗೆ ಟೀಕೆಗಳು ಸಹ ಕೇಳಿ ಬಂದವು. ಆದರೆ ಈಗ ಈ ಪ್ಲೇಯರ್ ಟೀಮ್ ಇಂಡಿಯಾ ಏಷ್ಯಾ ಕಪ್‌ ಟಿ20 ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಟೀಮ್ ಇಂಡಿಯಾ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ ಏಷ್ಯಾ ಕಪ್‌ ಗೆದ್ದಿದೆ. ಈ ವೇಳೆ ಟೀಮ್ ಇಂಡಿಯಾದ ಭರವಸೆಯ ಬೌಲರ್‌ ಕುಲ್‌ದೀಪ್‌ ಯಾದವ್ ಮಿಂಚು ಹರಿಸಿದ್ದಾರೆ. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ್ದಾರೆ. ದುಬೈನ ಪಿಚ್‌ಗಳ ಮರ್ಮವನ್ನು ಅರಿತು ಬೌಲ್ ಮಾಡಿದ ಕುಲ್‌ದೀಪ್‌ ಎದುರಾಳಿ ಬ್ಯಾಟರ್‌ಗಳಿಗೆ ಬಹುವಾಗಿ ಕಾಡಿದರು. ಇನ್ನು ತಮ್ಮ ಪಿರ್ಕಿ ಮೂಲಕ ಪಾಕ್‌ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ ಕುಲ್‌ದೀಪ್‌ ಹೊಸ ಇತಿಹಾಸ ನಿರ್ಮಿಸಿದರು.

Kuldeep Yadav Shines in Asia Cup T20 Win After Warming Bench in England Test Series

ಫೈನಲ್‌ ಪಂದ್ಯದಲ್ಲಿ ಕುಲ್‌ದೀಪ್‌ ಯಾದವ್ ಆರಂಭದಲ್ಲಿ ಕೊಂಚ ದುಬಾರಿ ಆದರು. ಇವರ ಎಸೆತಗಳಲ್ಲೂ ಪಾಕ್ ಬೌಲರ್ಸ್‌ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿ ಆರ್ಭಟಿಸಿದರು. 13ನೇ ಓವರ್‌ನಲ್ಲಿ ಸೈಮ್‌ ಅಯೂಬ್‌ ವಿಕೆಟ್‌ ಪಡೆದಿದ್ದ ಕುಲ್‌ದೀಪ್‌, ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಮ್ಯಾಜಿಕ್ ಮಾಡಿದರು. ಮೊದಲ ಎಸೆತದಲ್ಲಿ ಸಲ್ಮಾನ್‌ ಅಘಾ, ನಾಲ್ಕನೇ ಎಸೆತದಲ್ಲಿ ಶಾಹಿನ್ ಶಾ ಆಫ್ರಿದಿ, ಕೊನೆಯ ಎಸೆತದಲ್ಲಿ ಫಹೀನ್ ಅಶ್ರಫ್‌ ಅವರಿಗೆ ಖೆಡ್ಡಾ ತೋಡಿದ ಕುಲ್‌ದೀಪ್‌ ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ ಕಬಳಿಸಿದರು. ಪಾಕ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಇವರು 30 ರನ್‌ ನೀಡಿ 4 ಪ್ರಮುಖ ವಿಕೆಟ್‌ ಪಡೆದರು. ಈ ಮೂಲಕ ಕುಲ್‌ದೀಪ್‌ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

ಕುಲ್‌ದೀಪ್‌ ಸಾಧನೆ

ಒಂದೇ ಆವೃತ್ತಿಯ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ಅಲ್-ಅಮೀನ್ ಹುಸೇನ್ ಅವರ ಹೆಸರಿನಲ್ಲಿತ್ತು. ಇವರು ಒಂದೇ ಟಿ20 ಏಷ್ಯಾ ಕಪ್‌ನಲ್ಲಿ 11 ವಿಕೆಟ್‌ ಪಡೆದಿದ್ದರು. ಇನ್ನು ಟಿ20 ಏಷ್ಯಾ ಕಪ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲೂ ಕುಲ್‌ದೀಪ್‌ ನಂಬರ್ 1 ಸ್ಥಾನ ತಲುಪಿದ್ದಾರೆ.

ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್ಸ್‌

ಕುಲ್‌ದೀಪ್ ಯಾದವ್, ಭಾರತ, 7 ಪಂದ್ಯ, 17 ವಿಕೆಟ್‌
ವನಿಂದು ಹಸರಂಗ, ಶ್ರೀಲಂಕಾ, 12 ಪಂದ್ಯ, 17 ವಿಕೆಟ್‌
ಹ್ಯಾರಿಸ್‌ ರೌಫ್‌, ಪಾಕಿಸ್ತಾನ, 11 ಪಂದ್ಯ, 17 ವಿಕೆಟ್‌
ಹಾರ್ದಿಕ್ ಪಾಂಡ್ಯ, ಭಾರತ, 14 ಪಂದ್ಯ, 15 ವಿಕೆಟ್‌
ರಶೀದ್ ಖಾನ್‌, ಅಫ್ಘಾನಿಸ್ತಾನ, 11 ಪಂದ್ಯ, 14 ವಿಕೆಟ್‌

Story first published: Monday, September 29, 2025, 18:39 [IST]
Other articles published on Sep 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+