ಸಚಿನ್ ಹಂಚಿಕೊಂಡ ವಿಶೇಷ ವಿಡಿಯೋಗೆ ಅಂಪೈರ್ ಧರ್ಮಸೇನಾ ಟ್ರೋಲ್!

ನವದೆಹಲಿ, ಜುಲೈ 25: ಕ್ರಿಕೆಟ್ ಪಂದ್ಯವೊಂದರ ವೇಳೆ ಅಂಪೈರ್‌ಗೆ ಗೊಂದಲ ಮೂಡಿಸುವಂತ ಸಂದರ್ಭದ ವಿಡಿಯೋವೊಂದನ್ನು ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಸಚಿನ್ ಹಾಕಿರುವ ಈ ವಿಡಿಯೋಗೆ ಶ್ರೀಲಂಕಾ ಅಂಪೈರ್ ಕುಮಾರ್ ಧರ್ಮಸೇನಾ ಅವರು ತಮಾಷೆಗೀಡಾಗಿದ್ದಾರೆ.
ಸಚಿನ್ ಹಾಕಿರುವ ವಿಡಿಯೋ, ಇಂಗ್ಲೆಂಡ್‌ನಲ್ಲಿ ನಡೆದ ಸೆಕೆಂಡ್ ಡಿವಿಷನ್ ಪಂದ್ಯವೊಂದರದ್ದು. ಪಂದ್ಯದಲ್ಲಿ ಚೆಂಡು ಸ್ಟಂಪ್‌ಗೆ ಬಡಿಯಿತಾದರೂ ಬೇಲ್ಸ್ ಉರುಳದೆ ಅಲ್ಲೇ ನಿಂತಿತ್ತು. ಈ ವೇಳೆ ಅರೆ ಕ್ಷಣ ಅಂಪೈರ್ ಆವಕ್ಕಾದರೂ ಕೂಡ ಮತ್ತೆ ಬ್ಯಾಟ್ಸ್ಮನ್‌ನನ್ನು ನಾಟೌಟ್ ಎಂದು ಘೋಷಿಸಲಾಗಿತ್ತು.
ಟ್ವಿಟರ್‌ನಲ್ಲಿ ಸಚಿನ್ ಹಂಚಿಕೊಂಡಿರುವ ವಿಡಿಯೋಗೆ ಬಂದ ಪ್ರತಿಕ್ರಿಯೆಗಳು ಮತ್ತು ಧರ್ಮಸೇನಾ ಅವರು ತಮಾಷೆಗೀಡಾಗಿರುವ ಟ್ವೀಟ್‌ಗಳು ಕೆಳಗಿವೆ.
ಅಸಾಮಾನ್ಯ ಅನ್ನಿಸಿತು
ವಿಡಿಯೋವನ್ನು ಶೇರ್ ಮಾಡಿರುವ ಸಚಿನ್, 'ನನ್ನ ಫ್ರೆಂಡ್ ಒಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ತುಂಬಾ ಅಸಾಮಾನ್ಯ ಅನ್ನಿಸಿತು. ಇಲ್ಲಿ ಅಂಪೈರ್ ಜಾಗದಲ್ಲಿ ನೀವಿದ್ದರೆ, ಯಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದಿರಿ?' ಎಂದು ಬರೆದುಕೊಂಡು ಕ್ರಿಕೆಟ್ ಅಭಿಮಾನಿಗಳತ್ತ ಪ್ರಶ್ನೆ ಎಸೆದಿದ್ದರು.
ಬಹಳಷ್ಟು ಪ್ರತಿಕ್ರಿಯೆಗಳು
ಸಚಿನ್ ಅವರ ಈ ವಿಡಿಯೋಗೆ ಬಹಳಷ್ಟು ಪ್ರತಿಕ್ರಿಯೆಗಳು ಬಂದವು. ಕೊನೆ ಕೊನೆಗೆ ಕ್ರಿಕೆಟ್ ಅಭಿಮಾನಿಗಳು ಲಂಕಾ ಅಂಪೈರ್ ಧರ್ಮಸೇನಾ ಅವರನ್ನು ಬಗೆ ಬಗೆ ರೀತಿಯಲ್ಲಿ ಟ್ರೋಲ್ ಮಾಡಿದ್ದಾರೆ. ಐಸಿಸಿ ವಿಶ್ವಕಪ್ 2019ರ ಫೈನಲ್‌ನಲ್ಲಿ ಧರ್ಮಸೇನಾ ಅವರು ತಪ್ಪುಗಳನ್ನೆಸಗಿದ್ದು ಇದಕ್ಕೆ ಕಾರಣ.
ಧರ್ಮಸೇನ ನಿಭಾಯಿಸುತ್ತಾರೆ
ಇಂಥ ಇಕ್ಕಟ್ಟಿನ ಸಂದರ್ಭಗಳನ್ನೆಲ್ಲಾ ಕುಮಾರ್ ಧರ್ಮಸೇನಾ ಅವರು ನಿಭಾಯಿಸುತ್ತಾರೆ. ಇದನ್ನೆಲ್ಲಾ ಹೇಗೆ ಹ್ಯಾಂಡಲ್ ಮಾಡ್ಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ವಿನೀತ್ ಮೆನನ್ ಎಂಬವರು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಇದೇ ಚಿತ್ರ ಹಾಕಿ, ಧರ್ಮಸೇನಾ ಪ್ರಕಾರ ಇದು ಔಟ್-ನಾಟೌಟ್ ಎರಡೂ ಎಲ್ಲ ಇದು 'ಸಿಕ್ಸ್' ಎಂದು ಬರೆದುಕೊಂಡಿದ್ದರು.
ಖಂಡಿತಾ ಔಟ್
ಅಂಪೈರ್ ಜಾಗದಲ್ಲಿ ಕುಮಾರ್ ಧರ್ಮಸೇನಾ ಇದ್ದಿದ್ದರೆ ಇದು ಖಂಡಿತಾ ಔಟ್. ಅದೇ ಸಿಮನ್ ಟೌಫೆಲ್ ಈ ಜಾಗದಲ್ಲಿ ಇದ್ದಿದ್ದರೆ ಇದು ಖಂಡಿತಾ ನಾಟ್ ಔಟ್ ಎಂದು ರಾಜನ್ ಎಂಬವರು ಟ್ವೀಟ್ ಮಾಡಿದ್ದಾರೆ. 2019ರ ವಿಶ್ವಕಪ್ ಫೈನಲ್‌ನಲ್ಲಿ ಕುಮಾರ್ ಧರ್ಮಸೇನಾ ಅವರ ಎಡವಟ್ಟಿನಿಂದ ನ್ಯೂಜಿಲೆಂಡ್‌ಗೆ ಚೊಚ್ಚಲ ವಿಶ್ವಕಪ್ ಟ್ರೋಫಿಯ ಅವಕಾಶ ಕೈ ತಪ್ಪಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications