ಭಾರತ, ಪಾಕಿಸ್ತಾನ ಇವೆರಡೂ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳು ಅಲ್ಲ: ಸಂಗಕ್ಕರ ನೀಡಿದ ಸುಳಿವೇನು?

ಈ ವರ್ಷದ ಅಕ್ಟೋಬರ್- ನವೆಂಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗಲಿದೆ. ಇದಕ್ಕೆ ಪೂರಕವಾದ ಸಿದ್ದತೆಗಳನ್ನು ಎಲ್ಲಾ ತಂಡಗಳು ಕೂಡ ಈಗಾಗಲೇ ಆರಂಭಿಸಿದೆ. ಈ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕರ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಏಷ್ಯಾದ ಯಾವ ತಂಡ ಕೂಡ ಈ ಬಾರಿಯ ವಿಶ್ವಕಪ್‌ನ ನೆಚ್ಚಿನ ತಂಡಗಳು ಅಲ್ಲ ಎಂದಿದ್ದಾರೆ ಕುಮಾರ್ ಸಂಗಕ್ಕರ.
ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿರುವ ಕುಮಾರ್ ಸಂಗಕ್ಕರ ಭಾರತದಲ್ಲಿ ಮುಂದಿನ ವಿಶ್ವಕಪ್ ಟೂರ್ನಿ ನಡೆದರೂ ಉಪಖಂಡದ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರಿಕೆಟ್ ಸಾಕಷ್ಟು ಬದಲಾವಣೆಯಾಗಿದ್ದು ಕ್ರಿಕೆಟ್ ಆಡುವ ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ಸ್ಪಿನ್ ಬೌಲಿಂಗನ್ನು ಅದ್ಭುತವಾಗಿ ಎದುರಿಸುತ್ತಿವೆ. ಕೇವಲ 10 ವರ್ಷಗಳ ಹಿಂದೆ ಅದು ಹೀಗಿರಲಿಲ್ಲ ಎಂದಿದ್ದಾರೆ ಕುಮಾರ್ ಸಂಗಕ್ಕರ.

ನೆಚ್ಚಿನ ತಂಡಗಳ ಸುಳಿವು ನೀಡಿದ ಸಂಗಕ್ಕರ
ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ್ ಸಂಗಕ್ಕರ ಮಾತನಾಡುತ್ತಾ "2011ರ ಬಳಿಕ ಕ್ರಿಕೆಟ್ ಸಾಕಷ್ಟು ಬದಲಾಗಿದೆ. ಅಂದು ಏಷ್ಯಾದ ವಾತಾವರಣ ಉಪಖಂಡದ ಆಟಗಾರರಿಗೆ ಹೆಚ್ಚಿನ ಅನುಕೂಲತೆ ಒದಗಿಸುತ್ತಿತ್ತು. ಆದರೆ ವರ್ಷಗಳು ಕಳೆದಂತೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳ ಆಟಗಾರರು ಏಷ್ಯಾದ ಆಟಗಾರರಿಗಿಂತಲೂ ಉತ್ತಮವಾಗಿ ಸ್ಪಿನ್ ದಾಳಿಯನ್ನು ಎದುರಿಸಲು ಕಲಿತಿದ್ದಾರೆ" ಎಂದಿದ್ದಾರೆ ಕುಮಾರ್ ಸಂಗಕ್ಕರ.

ಐಪಿಎಲ್ ವಿದೇಶಿ ಆಟಗಾರರಿಗೆ ನೆರವು ನೀಡಿದೆ ಎಂದ ಸಂಗ
ಮುಂದುವರಿದು ಮಾತನಾಡಿದ ಸಂಗಕ್ಕರ ಗ್ಲೆನ್ ಮ್ಯಾಕ್ಸ್‌ವೆಲ್, ಜಾನಿ ಬೈರ್‌ಸ್ಟೋವ್ ರೀತಿಯ ಆಟಗಾರರು ಎಷ್ಯಾದ ಆಟಗಾರರಿಗಿಂತಲೂ ಅದ್ಭುತವಾಗಿ ಸ್ಪಿನ್ ಬೌಲಿಂಗ್ ದಾಳಿಯನ್ನು ಎದುರಿಸುತ್ತಿದ್ದಾರೆ ಎಂದಿದ್ದು ಇವರಲ್ಲಿ ಸ್ಪಿನ್ನರ್‌ಗಳ ವಿರುದ್ಧ ಸಾಕಷ್ಟು ಆಯ್ಕೆಗಳು ಇವೆ ಎಂದಿದ್ದಾರೆ. "ನೀವು ಸಾಕಷ್ಟು ರಿವರ್ಸ್‌ಸ್ವೀಪ್, ಪ್ಯಾಡಲ್‌ಶಾಟ್, ಹಾಗೂ ಸ್ವೀಪ್ ಶಾಟ್‌ಗಳನ್ನು ಕಾಣಬಹುದಾಗಿದೆ. ಇದೆಲ್ಲವೂ ಪಾದವನ್ನು ಬಳಸಿಕೊಂಡು ಆಡುವ ಶಾಟ್‌ಗಳು. ಉಪಖಂಡದಲ್ಲಿ ಕ್ರಿಕೆಟ್ ಅನ್ನು ನೋಡುವ ರೀತಿಯಲ್ಲಿ ಕ್ರಾಂತಿಯೇ ಉಂಟಾಗಿದೆ. ವಿದೇಶಿಗರಿಗೆ ಭಾರತೀಯ ಪಿಚ್‌ಗಳ ಪರಿಚಯಕ್ಕೆ ಐಪಿಎಲ್ ಸಾಕಷ್ಟು ಸಹಾಯ ಮಾಡಿದೆ" ಎಂದಿದ್ದಾರೆ ಸಂಗಕ್ಕರ.

ಆಟಗಾರರಿಗೆ ಸಂಗಕ್ಕರ ಸಲಹೆ
ಇನ್ನು ಈ ವರ್ಷ ಎಕದಿನ ವಿಶ್ವಕಪ್ ಇರುವ ಕಾರಣ ಆಟಗಾರರು ಹೆಚ್ಚು ಏಕದಿನ ಕ್ರಿಕೆಟ್‌ನಲ್ಲಿ ಆಡಬೇಕು ಎಂಬ ಸಲಹೆ ನೀಡಿದ್ದಾರೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ. ಇದು ಏಕದಿನ ವಿಶ್ವಕಪ್‌ನ ವರ್ಷ, ಆಟಗಾರರು ಹೆಚ್ಚು ಏಕಾಗ್ರಥವಾಗಿದ್ದು ಹೆಚ್ಚು ಏಕದಿನ ಪಂದ್ಯಗಳನ್ನು ಆಡಬೇಕು. ತಂಡದೊಳಗೇ ಆಟಗಾರರಿಗೆ ವಿಶ್ರಾಂತಿಯನ್ನು ಕೂಡ ನೀಡಬೇಕು" ಎಂದಿದ್ದಾರೆ ಕುಮಾರ್ ಸಂಗಕ್ಕರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications