For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಕಂಡ ಕಿಂಗ್ಸ್‌ ಇಲೆವೆನ್ ಪಂಜಾಬ್: ಗೇಲ್ ಆರ್ಭಟ

KXIP vs KKR Match: Kings XI Punjab Won By 8 Wickets

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಕ್ರಿಸ್‌ಗೇಲ್ ಆರ್ಭಟ ಹಾಗೂ ಮಂದೀಪ್ ಸಿಂಗ್ ಜಭರ್ದಸ್ತ್‌ ಸಾಥ್ ನೀಡಿದ್ದರ ಪರಿಣಾಮ ಕಿಂಗ್ಸ್‌ ಇಲೆವೆನ್ ಪಂಜಾಬ್ ಕೆಕೆಆರ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಗೆಲುವಿನ ಜೊತೆಗೆ ಸತತ ಐದನೇ ಗೆಲುವು ದಾಖಲಿಸಿದೆ.

ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಕೆ.ಎಲ್ ರಾಹುಲ್ ಟೀಮ್ ಕೆಕೆಆರ್ ತಂಡವನ್ನು 149ರನ್‌ಗಳಿಗೆ ಕಟ್ಟಿಹಾಕಿತು. ಕೇವಲ 10ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ಕೆಕೆಆರ್ ಶುಭ್ಮನ್ ಗಿಲ್ 57 ರನ್, ಇಯಾನ್ ಮಾರ್ಗನ್ 40, ಲ್ಯೂಕಿ ಫರ್ಗ್ಯುಸನ್ 24 ರನ್‌ಗಳ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.

150ರನ್ ಟಾರ್ಗೆಟ್ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ಎರಡು ವಿಕೆಟ್ ಕಳೆದುಕೊಂಡು ಇನ್ನೂ ಐದು ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಮುಟ್ಟಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕೆ.ಎಲ್ ರಾಹುಲ್ 28, ಕ್ರಿಸ್‌ಗೇಲ್ 51 ಹಾಗೂ ಮಂದೀಪ್ ಸಿಂಗ್ ಅಜೇಯ 65 ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಈ ಗೆಲುವಿನ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ 2020ಯಲ್ಲಿ ಸತತ ಐದನೇ ಪಂದ್ಯ ಗೆದ್ದು ಬೀಗಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ 12 ಪಾಯಿಂಟ್ಸ್‌ಗಳೊಂದಿಗೆ ನಾಲ್ಕನೇ ಸ್ಥಾನಕ್ಕೇರಿದೆ.

Story first published: Tuesday, October 27, 2020, 9:42 [IST]
Other articles published on Oct 27, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+