ಪ್ರತಿಷ್ಠಿತ ಲಾ ಲಿಗಾ ಫುಟ್ಬಾಲ್ ಲೀಗ್‌ಗೆ ರೋಹಿತ್ ಶರ್ಮಾ ರಾಯಭಾರಿ!

ಮುಂಬೈ, ಡಿಸೆಂಬರ್ 12: ಕ್ರಿಕೆಟರ್ ರೋಹಿತ್ ಶರ್ಮಾಗೆ ಫುಟ್ಬಾಲ್ ಆಟದೆಡೆಯೂ ಅತೀವ ಪ್ರೀತಿಯಿರುವ ವಿಚಾರ ನಿಮಗೆ ಗೊತ್ತಿರಬಹುದು. ಭಾರತದ ಸ್ಟಾರ್ ಕ್ರಿಕೆಟರ್ ಶರ್ಮಾ ಅವರನ್ನು ಸ್ಪ್ಯಾನಿಶ್ ಫುಟ್ಬಾಲ್ ಲೀಗ್, 'ಲಾ ಲಿಗಾ' ಭಾರತದಲ್ಲಿನ ತನ್ನ ಪ್ರಚಾರ ರಾಯಭಾರಿಯಾಗಿ ಗುರುವಾರ (ಡಿಸೆಂಬರ್ 12) ಹೆಸರಿಸಿದೆ.
ಫುಟ್ಬಾಲರ್ ಅಲ್ಲದ ಭಾರತದ ಕ್ರಿಕೆಟರ್ ಒಬ್ಬರನ್ನು 'ಲಾ ಲಿಗಾ'ವು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದ್ದು ಇದೇ ಮೊದಲಬಾರಿ. ರೋಹಿತ್ ಶರ್ಮಾ, ಭಾರತದಲ್ಲಿ 'ಲಾ ಲಿಗಾ' ಮತ್ತು ಫುಟ್ಬಾಲ್ ಪ್ರಚಾರದಲ್ಲಿ, ಫುಟ್ಬಾಲ್‌ನ ಬೆಳವಣಿಗೆಯಲ್ಲಿ ಪಾತ್ರ ವಹಿಸಲಿದ್ದಾರೆ.
'ಭಾರತದಲ್ಲಿ ಫುಟ್ಬಾಲ್ ಜಾಗತಿಕವಾಗಿ ಬೆಳವಣಿಗೆಯ ಪಥದಲ್ಲಿದೆ. ಫುಟ್ಬಾಲ್ ಅನ್ನು ನಿದ್ರಾವಸ್ಥೆಯಲ್ಲಿರುವ ದೈತ್ಯ ಕ್ರೀಡೆಯಾಗಿ ಇಲ್ಲಿ ಕಾಣಲಾಗುತ್ತಿಲ್ಲ ಎನ್ನಲು ಖುಷಿಯಾಗುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಭಾರತದ ಫುಟ್ಬಾಲ್ ರಂಗದಲ್ಲಿ ಆಸಕ್ತಿ ಹೆಚ್ಚುತ್ತಿರುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಇದರ ಶ್ರೇಯಸ್ಸು ಅಸೋಸಿಯೇಷನ್‌ನಲ್ಲಿರುವ ಎಲ್ಲರಿಗೂ ಮತ್ತು ಅಭಿಮಾನಿಗಳಿಗೆ ಸಲ್ಲಬೇಕು,' ಎಂದು ಶರ್ಮಾ ಹೇಳಿದ್ದಾರೆ.
'ಲಾ ಲಿಗಾದೊಂದಿಗೆ ಸೇರಿಕೊಂಡಿರುವುದಕ್ಕೆ ನನಗೆ ನಿಜಕ್ಕೂ ಸಂತೋಷವಾಗಿದೆ. ಇದು ಸ್ಪ್ಯಾನಿಶ್ ದೈತ್ಯ, ಭಾರತದ ಫುಟ್ಬಾಲ್ ಅನ್ನು ಮೂಲದಿಂದಲೇ ಬೆಳೆಯಲು ಸಹಾಯವಾಗಲಿದೆ. ವೈಯಕ್ತಿಕವಾಗಿ ನನಗೆ ಲಾ ಲಿಗಾದೊಂದಿಗಿನ ಈ ಪ್ರಯಾಣ ಆಸಕ್ತಿದಾಯಕವೆನಿಸಲಿದೆ,' ಎಂದು ಹಿಟ್‌ಮ್ಯಾನ್ ರೋಹಿತ್ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications