For Quick Alerts
ALLOW NOTIFICATIONS  
For Daily Alerts
 

Champions Trophy 2025: ಪಾಕಿಸ್ತಾನ ಸ್ಟೇಡಿಯಂಗಳಲ್ಲಿ ಮೂಲ ಸೌಕರ್ಯಗಳ ಕೊರತೆ; ಪಿಸಿಬಿ ಹೇಳಿದ್ದೇನು?

ಆಗಸ್ಟ್‌ 19 ಸೋಮವಾರ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಈ ಟೂರ್ನಿಯನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿದೆ.

ಇದಕ್ಕೂ ಮುನ್ನ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸೋಮವಾರ ದೇಶದ ಕ್ರಿಕೆಟ್ ಸ್ಟೇಡಿಯಂಗಳನ್ನು ನವೀಕರಿಸುತ್ತಿರುವ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಪಾಕಿಸ್ತಾನದ ಮಾಧ್ಯಮ ವಾಹಿನಿಯೊಂದರ ಜೊತೆ ಮಾತನಾಡಿರುವ ಅವರು, ನಮ್ಮ ಸ್ಟೇಡಿಯಂಗಳು ಮತ್ತು ಅಂತರಾಷ್ಟ್ರೀಯ ಮಾನದಂಡಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ.

Lack of basic facilities in Pakistan stadiums before Champions Trophy 2025

ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ಮಿಯನ್ನು ಯಶಸ್ವಿಯಾಗಿ ಆಯೋಜಿಸಲು ಇರುವ ಲೋಪದೋಷಗಳನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಆಸನ-ಸ್ನಾನಗೃಹಗಳಿಲ್ಲ

ಪಾಕಿಸ್ತಾನದಲ್ಲಿರುವ ಯಾವುದೇ ಸ್ಟೇಡಿಯಂಗಳು ಅಂತರರಾಷ್ಟ್ರೀಯ ಅವಶ್ಯಕತೆಗಳನ್ನು ಪೂರೈಸುವುದಿಲ್ಲ. ನಮ್ಮ ಸ್ಟೇಡಿಯಂಗಳು ಯಾವುದೇ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಗಳಾಗಿರಲಿಲ್ಲ. ಇಷ್ಟೇ ಅಲ್ಲ, ನಮ್ಮ ಸ್ಟೇಡಿಯಂನಲ್ಲಿ ಆಸನಗಳಾಗಲಿ ಅಥವಾ ಸ್ನಾನಗೃಹಗಳಾಗಲಿ ಇರಲಿಲ್ಲ ಎಂದು ಪಿಸಿಬಿ ಮುಖ್ಯಸ್ಥ ತಮ್ಮ ದೇಶದಲ್ಲಿನ ಕ್ರೀಡಾಂಗಣದಲ್ಲಿ ಇರುವ ಮೂಲ ಸೌಕರ್ಯಗಳ ಕೊರೆತ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ ಹಣವನ್ನು ಉಳಿಸಲು ಪಿಸಿಬಿ ಕರಾಚಿ ಮತ್ತು ಲಾಹೋರ್ ಸ್ಟೇಡಿಯಂನಲ್ಲಿರುವ ಹಳೆಯ ಫ್ಲಡ್‌ಲೈಟ್‌ಗಳನ್ನು ಅಳವಡಿಸುವ ಬದಲು ಒಂದು ವರ್ಷದ ಬಾಡಿಗೆಗೆ ಫ್ಲಡ್‌ಲೈಟ್‌ಗಳನ್ನು ಹಾಕಲು ಟೆಂಡರ್‌ಗಳನ್ನು ನೀಡಿತ್ತು. ಅಷ್ಟೇ ಅಲ್ಲ, ಜನರೇಟರ್ ಅನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿತ್ತು.

ಇದಲ್ಲದೆ, ಕರಾಚಿ ಮತ್ತು ಲಾಹೋರ್ ಮೈದಾನದಲ್ಲಿ ಈಗಾಗಲೇ ಅಳವಡಿಸಲಾಗಿರುವ ಹಳೆಯ ಫ್ಲಡ್ ಲೈಟ್‌ಗಳನ್ನು ತೆಗೆದು ಕ್ವೆಟ್ಟಾ ಮತ್ತು ರಾವಲ್ಪಿಂಡಿಯ ಕ್ರೀಡಾಂಗಣಗಳಲ್ಲಿ ಅಳವಡಿಸುವ ಬಗ್ಗೆ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಷ್ಟೆಲ್ಲ ಸಮಸ್ಯೆಗಳಿದ್ದರೂ ಪಾಕಿಸ್ತಾನ ಮಾತ್ರ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಚಾಂಪಿಯನ್ಸ್ ಟ್ರೋಫಿಗೂ ಮೊದಲು ಪಿಸಿಬಿ ತನ್ನ ಸ್ಟೇಡಿಯಂಗಳನ್ನು ಹೇಗೆ ನವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Story first published: Monday, August 19, 2024, 22:34 [IST]
Other articles published on Aug 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+