Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC finalನಲ್ಲಿ ಭಾರತದ ಸೋಲಿಗೆ ಪ್ರಮುಖ ಕಾರಣ ಕೊಟ್ಟ ವೆಂಗ್‌ಸರ್ಕಾರ್

Lack of match practice may hurt India in WTC final, says Dilip Vengsarkar

ನವದೆಹಲಿ: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಥ ಸಂಕಷ್ಟದ ಪರಿಸ್ಥಿತಿ ಎದುರಾದರೂ ಭಾರತ ಗೆದ್ದೇ ಗೆಲ್ಲಲಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಭಾರತದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕಾರ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತದ ಹಿನ್ನಡೆಗೆ ಪ್ರಮುಖ ಕಾರಣ ಹೇಳಿದ್ದಾರೆ.

ಜೂನ್ 18-22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ರೋಸ್‌ಬೌಲ್‌ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ಮಧ್ಯೆ ಕುತೂಹಲಕಾರಿ ವರ್ಲ್ಡ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ತಂಡದಲ್ಲಿನ ಅಭ್ಯಾಸದ ಕೊರತೆ ತೊಂದರೆ ನೀಡಲಿದೆ ಎಂದು ದಿಲೀಪ್‌ ವೇಂಗ್‌ಸರ್ಕಾರ್ ಹೇಳಿದ್ದಾರೆ.

ಭಾರತ ಕೊನೇ ಸರಣಿ ಆಡಿದ್ದು

ಭಾರತ ಕೊನೇ ಸರಣಿ ಆಡಿದ್ದು

ವಿರಾಟ್ ಕೊಹ್ಲಿ ಪಡೆ ಕಡೇಯ ಸಾರಿ ಅಂತಾರಾಷ್ಟ್ರೀಯ ಸರಣಿ ಆಡಿದ್ದು ಇಂಗ್ಲೆಂಡ್ ವಿರುದ್ಧ. ಭಾರತಕ್ಕೆ ಪ್ರವಾಸ ಬಂದಿದ್ದ ಆಂಗ್ಲರೆದುರು ಭಾರತೀಯರು 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-1ರಿಂದ ಜಯ, 5 ಪಂದ್ಯಗಳ ಟಿ20 ಸರಣಿಯಲ್ಲಿ 3-2ರಿಂದ ಗೆಲುವು ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ವಿಜಯ ದಾಖಲಿಸಿದ್ದರು.

ನ್ಯೂಜಿಲೆಂಡ್‌ಗೆ ಪ್ಲಸ್ ಪಾಯಿಂಟ್

ನ್ಯೂಜಿಲೆಂಡ್‌ಗೆ ಪ್ಲಸ್ ಪಾಯಿಂಟ್

ಇಂಗ್ಲೆಂಡ್‌ ವಿರುದ್ಧದ ಸರಣಿಯ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿ ನಡೆದಿತ್ತು. ಈ ಟೂರ್ನಿ ಕೂಡ ಕೋವಿಡ್-19 ಕಾರಣದಿಂದಾಗಿ ಪೂರ್ಣಗೊಳ್ಳಲಿದೆ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಹೀಗಾಗಿ ಟೀಮ್ ಇಂಡಿಯಾ ಕ್ರಿಕೆಟ್ ಪಂದ್ಯ ಆಡದೆ ಬಹಳ ಸಮಯವಾಗಿದೆ. ಅತ್ತ ನ್ಯೂಜಿಲೆಂಡ್‌ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿ ನಡೆಯುತ್ತಿದೆ. ಹೀಗಾಗಿ ಟೆಸ್ಟ್‌ ಚಾಂಪಿಯನ್‌ಶಿಪ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಒಳ್ಳೆಯ ಅಭ್ಯಾಸ ಸಿಗಲಿದೆ. ಇದು ಕಿವೀಸ್‌ಗೆ ಪ್ಲಸ್ ಪಾಯಿಂಟ್‌ ಎಂದು ವೆಂಗ್‌ಸರ್ಕಾರ್ ಹೇಳಿದ್ದಾರೆ.

ಉಳಿದ ದಿಗ್ಗಜರೂ ಹೇಳಿದ್ದು ಇದನ್ನೇ

ಉಳಿದ ದಿಗ್ಗಜರೂ ಹೇಳಿದ್ದು ಇದನ್ನೇ

ವರ್ಲ್ಡ್‌ ಟೆಸ್ಟ್‌ನಂತ ದೊಡ್ಡ ಪಂದ್ಯಗಳಿರುವಾಗ ಅಭ್ಯಾಸ ಪಂದ್ಯದ ಹೊರತಾಗಿ ಬೇರಾವ ಸಂಗತಿಯೂ ಇಲ್ಲ ಎಂದು ದಿಲೀಪ್‌ ತಿಳಿಸಿದ್ದಾರೆ. 'ಅಭ್ಯಾಸ ಪಂದ್ಯದ ಕೊರತೆ ಟೀಮ್ ಇಂಡಿಯಾಕ್ಕೆ ಐಸಿಸಿ ವರ್ಲ್ಡ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನೋವು ನೀಡಲಿದೆ ಎಂದು ನನಗನ್ನಿಸುತ್ತಿದೆ,' ಎಂದು ಇಂಡಿಯಾ ಟುಡೇ ಜೊತೆ ಮಾತನಾಡಿದ ವೆಂಗ್‌ಸರ್ಕಾರ್ ಹೇಳಿದ್ದಾರೆ. ಅಚ್ಚರಿಯೆಂದರೆ ಅನೇಕ ಕ್ರಿಕೆಟ್ ದಿಗ್ಗಜರು ಕೂಡ ನ್ಯೂಜಿಲೆಂಡ್ ಗೆಲ್ಲಲಿದೆ ಎಂದು ಹೇಳಿದ್ದಾರೆ.

Story first published: Wednesday, June 9, 2021, 16:20 [IST]
Other articles published on Jun 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+