
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ವೈಯಕ್ತಿಕ ಜೀವನದಲ್ಲಿ ಸಂಕಷ್ಟಗಳು ಮುಂದುವರಿಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಕಿರುಕುಳದ ಆರೋಪವನ್ನು ಹೊತ್ತಿರುವ ಬಾಬರ್ ಅಜಂ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ತಮಾನ ವರದಿ(FIR) ದಾಖಲಿಸಿಕೊಳ್ಳುವಂತೆ ತನಿಖಾ ಸಂಸ್ಥೆ ಪೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಗೆ ಆದೇಶಿಸಿದೆ.
ಹಮ್ಜಾ ಮುಖ್ತಾರ್ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ನಂತರ ಗುರುವಾರ ನ್ಯಾಯಾಧೀಶ ಹಮೀದ್ ಹುಸೇನ್ ಅವರ ಆದೇಶವು ಬಂದಿದೆ. ಪಾಕಿಸ್ತಾನದ ನಾಯಕನ ವಿರುದ್ಧ ದೂರು ದಾಖಲಿಸಿದ ನಂತರ ತನಗೆ ವಾಟ್ಸ್‌ಆಪ್‌ನಲ್ಲಿ ಭೀಕರ ಪರಿಣಾಮ ಬೀಳುವ ಬೆದರಿಗೆ ಸಂದೇಶಗಳು ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ವಿಚಾರಣೆಯಲ್ಲಿ ಎಫ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಹಮೀಜಾ ಸೈಬರ್ ಕ್ರೈಮ್ ಸೆಲ್‌ಗೆ ದೂರು ಸಲ್ಲಿಸಿದ ನಂತರ ಮತ್ತು ಅವರು ವಿಚಾರಣೆಯನ್ನು ಪ್ರಾರಂಭಿಸಲಾಗಿದೆ, ಬೆದರಿಕೆ ಸಂದೇಶಗಳನ್ನು ಕಳುಹಿಸಲು ಬಳಸಿದ ಸಂಖ್ಯೆಗಳಲ್ಲಿ ಒಂದು ಬಾಬರ್ ಅಜಮ್‌ಗೆ ಸೇರಿದವರು ಎಂಬುದನ್ನು ಪತ್ತೆಹಚ್ಚಲಾಗಿದೆ.
ಮದುವೆಯಾಗುವ ಬಗ್ಗೆ ಭರವಸೆ ನೀಡಿ ಬಾಬರ್ ಆಝಮ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಮದುವೆಯಾಗುವ ಭರವಸೆಯನ್ನು ನೀಡಿ ಕಳೆದ 10 ವರ್ಷಗಳಿಂದ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ತಮ್ಮನ್ನು ಗರ್ಭಿಣಿ ಮಾಡಿದ್ದಾಗಿ ಆರೋಪಿಸಿ ಸಂತ್ರಸ್ತೆ ಮುಖ್ತಾರ್ ತನ್ನ ಅರ್ಜಿಯಲ್ಲಿ ವಿವರಿಸಿದ್ದರು. ಆ ದೂರು ಸಲ್ಲಿಸಿದ ನಂತರ ಬೇರೆ ಬೇರೆ ನಂಬರ್‌ಗಳಿಂದ ತನಗೆ ಬೆದರಿಕೆ ಸಂದೇಶಗಳು ಬರತೊಡಗಿದೆ ಎಂದು ನ್ಯಾಯಾಲಯದ ಮೊರೆಹೋಗಿದ್ದರು.