'ನನ್ನ SMSಗೆ ಉತ್ತರಿಸಿ': ಸುಶ್ಮಿತಾ ಸೇನ್ ಲಲಿತ್ ಮೋದಿಯ 9 ವರ್ಷದ ಹಳೆಯ ಟ್ವೀಟ್ ಈಗ ವೈರಲ್

ಐಪಿಎಲ್ ಸೃಷ್ಟಿಕರ್ತ, ಬಿಸಿಸಿಐ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ನಡುವಿನ ಡೇಟಿಂಗ್ ವಿಚಾರ ಖಚಿತಗೊಂಡ ಬೆನ್ನಲ್ಲೇ, ಇದೀಗ ಅವರಿಬ್ಬರ 9 ವರ್ಷದ ಹಿಂದಿನ ಟ್ವೀಟ್ ವೈರಲ್ ಆಗುತ್ತಿದೆ.
ಸುಶ್ಮಿತಾ ಹಾಗೂ ಲಲಿತ್ ಮೋದಿ ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವದಂತಿಗಳು ಹರಿದಾಟಿದ ಬೆನ್ನಲ್ಲಿ ಟ್ವೀಟ್ ಮಾಡಿದ ಲಲಿತ್ ಮೋದಿ ನಾವಿಬ್ಬರೂ ಡೇಟಿಂಗ್ ನಡೆಸುತ್ತಿದ್ದೇವೆ, ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಲಲಿತ್ ಅವರ 9 ವರ್ಷದ ಹಿಂದಿನ ಟ್ವೀಟ್ ವೈರಲ್ ಆಗುತ್ತಿದೆ, ಇದರಿಂದಾಗಿ ಅವರ ಸಂಬಂಧವು ಸುಮಾರು 9 ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದು ಜನರು ಊಹಿಸಲಾರಂಭಿಸಿದ್ದಾರೆ.
ನಾವೀನ್ನೂ ಡೇಟಿಂಗ್‌ನಲ್ಲಿದ್ದೇವೆ, ಮದುವೆಯಾಗುತ್ತೇವೆ!
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಗೂ ನಟಿ ಸುಶ್ಮಿತಾ ಸೇನ್ ವಿಚಾರ ಯಾವಾಗ ಹೆಚ್ಚು ಸುದ್ದಿಯಾಗತೊಡಗಿತೋ, ತಡಮಾಡದೇ ಬಿಸಿಸಿಐ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸುಶ್ಮಿತಾ ಸೇನ್ ಜೊತೆಗಿನ ಫೋಟೋಗಳನ್ನ ಶೇರ್ ಮಾಡುವ ಮೂಲಕ, ನಾವಿನ್ನೂ ಡೇಟಿಂಗ್ ಮಾಡುತ್ತಿದ್ದೇವೆ. ಮದುವೆಯೂ ಕೂಡ ಒಂದು ದಿನ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದರು. ಈ ಟ್ವೀಟ್ ಅನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಷ್ಟೇ ಅಲ್ಲದೆ ಸಾಕಷ್ಟು ಟ್ವೀಟ್ ಮಾಡಿದ್ದರು.
ಲಲಿತ್ ಮೋದಿ ಜೊತೆಗೆ ಸುಶ್ಮಿತಾ ಡೇಟಿಂಗ್ ವಿಚಾರ ಸಹೋದರಿಗೆ ತಿಳಿದಿರಲಿಲ್ಲ!
ಸುಶ್ಮಿತಾ ಸೇನ್, ಐಪಿಎಲ್ ಮಾಜಿ ಅಧ್ಯಕ್ಷನ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ನನಗೆ ತಿಳಿದಿರಲ್ಲ ಎಂದು ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್, ಇಂಡಿಯಾ ಟುಡೇ ಜೊತೆಗಿನ ಸಂವಾದದಲ್ಲಿ, "ನನಗೂ ಆಶ್ಚರ್ಯವಾಗಿದೆ, ನಾನು ಈ ಬಗ್ಗೆ ನನ್ನ ಸಹೋದರಿಯೊಂದಿಗೆ ಮಾತನಾಡುತ್ತೇನೆ" ಎಂದು ಹೇಳಿದರು.
ಲಲಿತ್ ಮೋದಿಯ 9 ವರ್ಷದ ಟ್ವೀಟ್ ವೈರಲ್
ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ನಡುವೆ 9 ವರ್ಷಗಳಿಂದ ಸಂಪರ್ಕ ಇತ್ತು ಎಂಬ ಸಾಕ್ಷ್ಯಕ್ಕೆ ಟ್ವೀಟ್ ಒಂದು ಸಾಕ್ಷಿಯಾಗಿದೆ. 2013ರಲ್ಲಿ ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಟ್ವೀಟ್‌ನಲ್ಲಿ ಲಲಿತ್ ಅವರು ಸುಶ್ಮಿತಾ ಅವರನ್ನು ಟ್ಯಾಗ್ ಮಾಡಿ 'ನನ್ನ SMS ಗೆ ಉತ್ತರಿಸಿ' ಎಂದು ಬರೆದಿದ್ದಾರೆ.
ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ನೆಟ್ಟಿಗರು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ, ಇಬ್ಬರ ಸಂಬಂಧ ಇಲ್ಲಿಂದ ಪ್ರಾರಂಭವಾಗಿದೆ ಎಂದು ಹೇಳುತ್ತಿದ್ದಾರೆ.
ಕಳೆದ ವರ್ಷವಷ್ಟೇ ಕಾಶ್ಮೀರಿ ಬಾಯ್‌ಫ್ರೆಂಡ್‌ಗೆ ಗುಡ್‌ಬೈ
ಕಳೆದ ವರ್ಷವಷ್ಟೇ ಭುವನಸುಂದರಿ ಸುಶ್ಮಿತಾ ಸೇನ್ ತನ್ನ ಮತ್ತು ಮಾಡೆಲ್-ಬಾಯ್ ಫ್ರೆಂಡ್ ರೋಹ್ಮನ್ ಅವರ ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿದ್ದರು. ಈ ಕುರಿತಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಘೋಷಿಸಿದ್ದರು.
"ನಾವು ಸ್ನೇಹಿತರಾಗಿ ಪ್ರಾರಂಭಿಸಿದ್ದೇವೆ, ನಾವು ಸ್ನೇಹಿತರಾಗಿದ್ದೇವೆ! ಸಂಬಂಧವು ಬಹಳ ಕಾಲ ಮುಗಿದಿದೆ ... ಪ್ರೀತಿ ಉಳಿದಿದೆ" ಎಂದು ಅವರು ಬರೆದಿದ್ದಾರೆ. ಅವರು #nomorespeculations ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪೋಸ್ಟ್ ಕೂಡ ಮಾಡಿದ್ದರು.
1994ರಲ್ಲಿ ಮಿಸ್ ಯೂನಿವರ್ಸ್ ಕಿರೀಟ ತೊಟ್ಟ ಸುಶ್ಮಿತಾ ಸೇನ್ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದ್ರೆ ಇವರ ಖಾಸಗಿ ಜೀವನ ಮಾತ್ರ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಸುಶ್ಮಿತಾ ಸೇನ್ ಇಬ್ಬರು ಪುತ್ರಿಯರನ್ನ ದತ್ತು ತೆಗೆದುಕೊಂಡಿದ್ದು, ಅಲಿಸಾ ಮತ್ತು ರೆನೀಯನ್ನ ಪೋಷಿಸುತ್ತಿದ್ದಾರೆ. 2000 ರಲ್ಲಿ ರೆನೀಯನ್ನು ದತ್ತು ಪಡೆದರು, ನಂತರ ಅಲಿಸಾ 2010 ರಲ್ಲಿ ಕುಟುಂಬವನ್ನು ಸೇರಿಕೊಂಡರು. ರೆನೀ ಅವರು ಕಿರುಚಿತ್ರದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications