ಲಂಕಾ ಕ್ರಿಕೆಟ್‌ನಲ್ಲಿ ಪ್ರಜ್ವಲಿಸಲು ಆರಂಭಿಸಿದ ಜಯಸೂರ್ಯ: ಗಾಲೆ ಟೆಸ್ಟ್‌ನಲ್ಲಿ ವಿಶೇಷ ಸಾಧನೆ

ಶ್ರೀಲಂಕಾ ಕ್ರಿಕೆಟ್ ತಂಡ ಇತ್ತೀಚೆಗೆ ಅದ್ಭುತ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಗಮನಸೆಳೆಯುತ್ತಿದೆ. ಕಳೆದ ಕೆಲ ವರ್ಷಗಳಿಂದೀಚೆಗೆ ಸಂಪೂರ್ಣವಾಗಿ ಕಳಗುಂದಿದಂತಿದ್ದ ಲಂಕಾ ತಂಡದಲ್ಲಿ ಯುವ ಪ್ರತಿಭಾವಂತ ಆಟಗಾರರ ಅದ್ಭುತ ಪ್ರದರ್ಶನ ನಿಡುವ ಮೂಲಕ ಮಿಂಚುತ್ತಿದ್ದಾರೆ. ಈ ಸಾಲಿಗೆ ಶ್ರೀಲಂಕಾದ ಯುವ ಆಟಗಾರ ಪ್ರಬಾತ್ ಜಯಸೂರ್ಯ ಕೂಡ ಸೇರಿಕೊಂಡಿದ್ದು ಆಡಿರುವ ಎರಡು ಪಂದ್ಯಗಳಲ್ಲಿಯೇ ಅಮೋಘ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸಿದ್ದಾರೆ. ಶ್ರೀಲಂಕಾದ ಈ ಯುವ ಆಟಗಾರ ಈಗ ವಿಶೇಷ ಸಾಧನೆಯೊಂದನ್ನು ಮಾಡಿದ್ದು ವಿಶೇಷ ಆಟಗಾರರ ಪಟ್ಟಿಗೆ ಸೇರಿಕೊಂಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಗಳಿಸಿದ ಅಲ್ಪ ಮೊತ್ತಕ್ಕೆ ಪ್ರತೊಯಾಗಿ ಬ್ಯಾಟಿಂಗ್ ಮಾಡಿರುವ ಪಾಕಿಸ್ತಾನ ಕೂಡ ಆರಂಭದಿಂದಲೇ ಕುಸಿಯುತ್ತಾ ಸಾಗಿತ್ತು. ಆದರೆ ನಾಯಕ ಬಾಬರ್ ಅಜಂ ಅವರ ಅಮೋಘ ಶತಕದ ನೆರವಿನಿಂದಾಗಿ ಪಾಕಿಸ್ತಾನ ಕೂಡ ಶ್ರೀಲಂಕಾ ಗಳಿಸಿದ ಸ್ಕೋರ್‌ನ ಸನಿಹಕ್ಕೆ ಬಂದು ತಲುಪಿದೆ. ಈ ಸಂದರ್ಭದಲ್ಲಿ ಲಂಕಾ ಸ್ಪಿನ್ನರ್ ಪ್ರಬಾತ್ ಜಯಸೂರ್ಯ ಐದು ವಿಕೆಟ್‌ಗಳ ಗೊಂದಲು ಪಡೆದು ಮಿಂಚಿದ್ದಾರೆ.
ಸತತ ಮೂರನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು
ಶ್ರೀಲಂಕಾದ ಪರವಾಗಿ ಪ್ರಬಾತ್ ಜಯಸೂರ್ಯ ಸತತ 3ನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದಾರೆ. ದಿಗ್ಗಜ ಆಟಗಾರ ಮುತ್ತಯ್ಯ ಮುರಳೀಧರನ್, ರಂಗನಾ ಹೆರಾತ್ ಬಳಿಕ ಶ್ರೀಲಂಕಾ ಪರವಾಗಿ ಈ ಸಾಧನೆ ಮಾಡಿದ ಕೇವಲ ಮೂರನೇ ಆಟಗಾರ ಎನಿಸಿದ್ದಾರೆ.

ಯಾರೂ ಮಾಡದ ಸಾಧನೆ ಮಾಡಲು ಜಯಸೂರ್ಯಗೆ ಅವಕಾಶ
ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕ ಮೂರು ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಕೂಡ ಆಗಿದ್ದಾರೆ ಪ್ರಬಾತ್ ಜಯಸೂರ್ಯ. ಟಾಮ್ ರಿಚರ್ಡ್ಸನ್ ಹಾಗೂ ಕ್ಲೆರಿ ಗ್ರಿಮ್ಮೆಟ್ ಅವರ ಬಳಿಕ ಆರಂಭಿಕ ಮೂರು ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಆಟಗಾರ ಎನಿಸಿದ್ದಾರೆ. ಇನ್ನು ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಈ ಸಾಧನೆ ಮಾಡಲು ಪ್ರಬಾತ್‌ಗೆ ಸಾಧ್ಯವಾದರೆ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಈವರೆಗೆ ಮಾಡಲು ಸಾಧ್ಯವಾದ ಐತಿಹಾಸಿಕ ದಾಖಲೆಯನ್ನು ಬರೆಯುವ ಅವಕಾಶ ಪ್ರಬಾತ್ ಜಯಸೂರ್ಯಾಗೆ ಇದೆ.

ಬಾಬರ್ ಅಜಂ ಭರ್ಜರಿ ಶತಕ
ಇನ್ನು ಪಾಕಿಸ್ತಾನ ತಂಡದ ಯಾವ ಬ್ಯಾಟರ್ ಕೂಡ ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾಗುತ್ತಿದ್ದರೂ ಪಾಕ್ ತಮಡದ ನಾಯಕ ಬಾಬರ್ ಅಜಂ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಏಕಾಂಗಿ ಹೋರಾಟ ನಡೆಸಿದ ಬಾಬರ್ ಈ ಪಂದ್ಯದಲ್ಲಿ ಅಮೋಘ ಶತಕ ಗಳಿಸುವ ಮೂಲಕ ಪಾಕ್ ತಂಡವನ್ನು ಕುಸಿತದಿಂದ ಪಾರು ಮಾಡಿದ್ದಾರೆ. ಹೀಗಾಗಿ ಶ್ರೀಲಂಕಾ ತಂಡ ಕೇವಲ ನಾಲ್ಕು ರನ್‌ಗಳ ಅತ್ಯಲ್ಪ ಮುನ್ನಡೆ ಸಾಧಿಸಿದೆ. ಬಾಬರ್ ಅಜಂ ಈ ಪಂದ್ಯದಲ್ಲಿ 119 ರನ್‌ಗಳಿಸಿ ಔಟಾದರು.

ಇತ್ತಂಡಗಳ ಆಡುವ ಬಳಗ
ಶ್ರೀಲಂಕಾ: ಓಶಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಾಲ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೇಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ
ಬೆಂಚ್: ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ದುನಿತ್ ವೆಲ್ಲಲಾಗೆ, ದಿಲ್ಶಾನ್ ಮಧುಶಂಕ
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಅಘಾ ಸಲ್ಮಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಯಾಸಿರ್ ಶಾ, ಹಸನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ
ಬೆಂಚ್: ಫವಾದ್ ಆಲಂ, ನೌಮನ್ ಅಲಿ, ಹಾರಿಸ್ ರೌಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಫಹೀಮ್ ಅಶ್ರಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications