6 ವರ್ಷಗಳ ಬಳಿಕ ಟೆಸ್ಟ್ ರ್‍ಯಾಂಕಿಂಗ್‌ನ ಟಾಪ್ 10 ಪಟ್ಟಿಯಿಂದ ಹೊರಬಿದ್ದ ಕೊಹ್ಲಿ! ದೊಡ್ಡ ಏರಿಕೆ ಕಂಡ ಪಂತ್

ನಿನ್ನೆಯಷ್ಟೇ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯ ಮುಕ್ತಾಯಗೊಂಡಿದ್ದು, ಇಂಗ್ಲೆಂಡ್ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಇತ್ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ರಿಷಬ್ ಪಂತ್ ಭರ್ಜರಿ ಶತಕ ಬಾರಿಸಿ ಅಬ್ಬರಿಸಿದರೆ, ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿಯೂ ಶತಕ ಬಾರಿಸಿದ ಇಂಗ್ಲೆಂಡ್‌ನ ಜಾನಿ ಬೈರ್ ಸ್ಟೋವ್ ಎಲ್ಲರ ಗಮನ ಸೆಳೆದರು. ಹೀಗೆ ಇತ್ತಂಡಗಳ ಈ ಇಬ್ಬರು ಆಟಗಾರರು ಪಂದ್ಯದಲ್ಲಿ ಮಿಂಚುವುದು ಮಾತ್ರವಲ್ಲದೇ ಸದ್ಯ ಬಿಡುಗಡೆಯಾಗಿರುವ ನೂತನ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್ ಶ್ರೇಯಾಂಕ ಪಟ್ಟಿಯಲ್ಲಿ ಭಾರಿ ಏರಿಕೆ ಕಂಡಿದ್ದಾರೆ.
ಒಂದೆಡೆ ರಿಷಭ್ ಪಂತ್ ಹಾಗೂ ಜಾನಿ ಬೈರ್ ಸ್ಟೋವ್ ಏರಿಕೆಯನ್ನು ಕಂಡಿದ್ದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್ ಶ್ರೇಯಾಂಕ ಪಟ್ಟಿಯ ಟಾಪ್ 10ರಿಂದ ಹೊರಬಿದ್ದಿದ್ದಾರೆ. ನೂತನ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್ ಶ್ರೇಯಾಂಕ ಪಟ್ಟಿ ಕೆಳಕಂಡಂತಿದೆ.

ನೂತನ ಟೆಸ್ಟ್ ಬ್ಯಾಟ್ಸ್‌ಮನ್ ಟಾಪ್ 10 ಶ್ರೇಯಾಂಕ ಪಟ್ಟಿ
ನೂತನವಾಗಿ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್ ಶ್ರೇಯಾಂಕ ಪಟ್ಟಿಯ ಟಾಪ್ 10 ಆಟಗಾರರ ಪಟ್ಟಿ ಕೆಳಕಂಡಂತಿದೆ
1. ಜೋ ರೂಟ್ - ಇಂಗ್ಲೆಂಡ್ - 923 ಅಂಕಗಳು
2. ಮಾರ್ನಸ್ ಲ್ಯಾಬಸ್ಚಾಗ್ನೇ - ಆಸ್ಟ್ರೇಲಿಯಾ - 879 ಅಂಕಿಗಳು
3. ಸ್ಟೀವ್ ಸ್ಮಿತ್ - ಆಸ್ಟ್ರೇಲಿಯಾ - 826 ಅಂಕಿಗಳು
4. ಬಾಬರ್ ಅಜಂ - ಪಾಕಿಸ್ತಾನ - 815 ಅಂಕಗಳು
5. ರಿಷಭ್ ಪಂತ್ - ಭಾರತ - 801 ಅಂಕಗಳು
6. ಕೇನ್ ವಿಲಿಯಮ್ಸನ್ - ನ್ಯೂಜಿಲೆಂಡ್ - 786 ಅಂಕಗಳು
7. ಉಸ್ಮಾನ್ ಖವಾಜ - ಆಸ್ಪ್ರೇಲಿಯಾ - 779 ಅಂಕಗಳು
8. ದಿಮುತ್ ಕರುಣರತ್ನೆ - ಶ್ರೀಲಂಕಾ - 760 ಅಂಕಗಳು
9. ರೋಹಿತ್ ಶರ್ಮಾ - ಭಾರತ - 746 ಅಂಕಗಳು
10. ಜಾನಿ ಬೈರ್ ಸ್ಟೋವ್ - ಇಂಗ್ಲೆಂಡ್ - 742 ಅಂಕಗಳು

ಬೃಹತ್ ಏರಿಕೆ ಕಂಡ ಪಂತ್ ಮತ್ತು ಬೈರ್ ಸ್ಟೋವ್
ಹತ್ತನೇ ಸ್ಥಾನದಲ್ಲಿದ್ದ ರಿಷಭ್ ಪಂತ್ 5 ಸ್ಥಾನಗಳ ಏರಿಕೆಯನ್ನು ಕಂಡಿದ್ದು ನೂತನವಾಗಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಕಳೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ಜಾನಿ ಬೈರ್ ಸ್ಟೋವ್ ಬರೋಬ್ಬರಿ 11 ಸ್ಥಾನಗಳ ಬೃಹತ್ ಏರಿಕೆಯನ್ನು ಕಂಡಿದ್ದು, ಹತ್ತನೇ ಸ್ಥಾನದಲ್ಲಿದ್ದಾರೆ.

ಕುಸಿತ ಕಂಡ ವಿರಾಟ್ ಕೊಹ್ಲಿ
ಕಳೆದ ಬಾರಿಯ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ನೂತನವಾಗಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ 4 ಸ್ಥಾನಗಳ ಕುಸಿತವನ್ನು ಅನುಭವಿಸಿದ್ದಾರೆ. ಸದ್ಯ 13ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 6 ವರ್ಷಗಳ ಕಾಲ ಸತತವಾಗಿ ಟೆಸ್ಟ್ ಶ್ರೇಯಾಂಕ ಪಟ್ಟಿಯ ಟಾಪ್ 10ರಲ್ಲಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications