ಕಾಶ್ಮೀರ ಬಿಟ್ಟುಬಿಡಿ, ಸೋತ ಪಾಕ್ ಕಡೆ ನೋಡಿ: ಅಫ್ರಿದಿಗೆ ರೈನಾ ಟಾಂಗ್

ನವದೆಹಲಿ, ಮೇ 18: ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಗುಡುಗಿದ ಬಳಿಕ ಪಾಕಿಸ್ತಾನ ಮಾಜಿ ಆಲ್ ರೌಂಡರ್ ಶಾಹೀದ್ ಅಫ್ರಿದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಭಾರತೀಯ ಕ್ರಿಕೆಟಿಗರ ಸಾಲಿನಲ್ಲಿ ಸುರೇಶ್ ರೈನಾ, ಶಿಖರ್ ಧವನ್ ಸೇರಿಕೊಂಡಿದ್ದಾರೆ.
ಶಾಹಿದ್ ಅಫ್ರಿದಿ ಇತ್ತೀಚೆಗೆ ಭಾರತವನ್ನು ದೂರಿ ಮಾತನಾಡಿದ್ದರು. ಇದೇ ಕಾರಣಕ್ಕೆ ಗಂಭೀರ್, ಹರ್ಭಜನ್, ಯುವರಾಜ್ ಅಫ್ರಿದಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ರೈನಾ ಕೂಡ, ಕಾಶ್ಮೀರದ ವಿಚಾರವನ್ನು ಭಾರತ ಸರ್ಕಾರಕ್ಕೆ ಬಿಡಿ, ನೀವು ನಿಮ್ಮ ಸೋತ ದೇಶಕ್ಕೇನಾದರೂ ಮಾಡಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.
'ದೇಶವೊಂದು ಭಿಕ್ಷೆಯಿಂದ ಬದುಕುವ ಸ್ಥಿತಿಗೆ ಬಂದಿರುವಾಗ ಎಲ್ಲಾ ವ್ಯಕ್ತಿಗಳು ಬೇರೇನು ಮಾಡಲು ಸಾಧ್ಯ? ಕಾಶ್ಮೀರದ ವಿಚಾರವನ್ನು ಅದರ ಪಾಡಿಗೆ ಬಿಟ್ಟು ಸೋತ ರಾಷ್ಟ್ರಕ್ಕೆ ಏನಾದರೂ ಮಾಡೋದು ಒಳ್ಳೇದು' ಎಂಬರ್ಥದಲ್ಲಿ ಟ್ವೀಟ್ ಮಾಡಿರುವ ರೈನಾ, ಅಫ್ರಿದಿಗೆ ಕುಟುಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಧಾರ್ಮಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಫ್ರಿದಿ ಇತ್ತೀಚೆಗೆ ಆರೋಪಿಸಿದ್ದರು. ಅಫ್ರಿದಿಯ ಈ ಹೇಳಿಕೆಗೆ ಭಾರತದ ಕ್ರಿಕೆಟಿಗರಾದ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಮತ್ತು ಶಿಖರ್ ಧವನ್ ಆಕ್ರೋಶ ವ್ಯಕ್ತಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications