2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಣಸಾಟವನ್ನು ಅಧಿಕೃತ ಪ್ರಸಾರಕರು "ಶ್ರೇಷ್ಠ ಪೈಪೋಟಿ' ಎಂದು ಬಿಂಬಿಸಿದೆ.
ಸೋಮವಾರ, ಸೆಪ್ಟೆಂಬರ್ 11ರಂದು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಎಲ್ಲ ವಿಭಾಗದಲ್ಲಿಯೂ ಮೇಲುಗೈ ಸಾಧಿಸಿ ಗೆಲುವು ಸಾಧಿಸಿತು. ಇದು ಏಕದಿನ ಪಂದ್ಯವಾಗಿದ್ದರೂ, ಮಳೆಯಿಂದಾಗಿ ಪಂದ್ಯವನ್ನು ಮೀಸಲು ದಿನದಂದು ಆಡಲಾಯಿತು.

ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತವು ದಾಖಲೆಯ ರನ್‌ಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್‌ಗೆ 356 ರನ್ ಕಲೆಹಾಕಿತ್ತು.
ನಂತರ, ಕುಲದೀಪ್ ಯಾದವ್ ಐದು ವಿಕೆಟ್‌ಗಳ ಗೊಂಚಲು ಪಡೆದರು. ಇದರಿಂದಾಗಿ ಪಾಕಿಸ್ತಾನ ತಂಡ ಕೇವಲ 128 ರನ್‌ಗಳಿಗೆ ನಿಯಂತ್ರಣಗೊಂಡಿತು ಮತ್ತು ಬರೋಬ್ಬರಿ 228 ರನ್‌ಗಳ ಗೆಲುವು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರನ್‌ಗಳ ವಿಷಯದಲ್ಲಿ ಭಾರತಕ್ಕೆ ಬೃಹತ್ ಜಯವಾಗಿತ್ತು.
ಏಕದಿನ ಕ್ರಿಕೆಟ್‌ನಲ್ಲಿ ಕುಲದೀಪ್ ಯಾದವ್ ತನ್ನ ಎರಡನೇ 5 ವಿಕೆಟ್ ಗೊಂಚಲು ಸಾಧನೆ ಮಾಡಿದರು ಮತ್ತು ಬೌಲಿಂಗ್‌ನಲ್ಲಿ ಭಾರತದ ಸ್ಟಾರ್ ಪ್ರದರ್ಶನಕಾರರಾದರು. 228 ರನ್‌ಗಳ ಈ ಬೃಹತ್ ಗೆಲುವಿನೊಂದಿಗೆ 2023ರ ಏಷ್ಯಾ ಕಪ್ ಸೂಪರ್ 4ರ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನಕ್ಕೇರಿತು.

ಇನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಪಂದ್ಯದ ನಂತರ ಕುಲದೀಪ್ ಯಾದವ್ ಅವರ ವೈಯಕ್ತಿಕ ಪ್ರದರ್ಶನಗಳನ್ನು ವಿಶ್ಲೇಷಿಸುವಾಗ ಶ್ಲಾಘಿಸಿದರು.
"ಕುಲದೀಪ್ ಯಾದವ್‌ರನ್ನು ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಶತಕ ಗಳಿಸಿರಬಹುದು, ಕೆಎಲ್ ರಾಹುಲ್ ಶತಕ ಹೊಡೆದಿರುಬಹುದು, ರೋಹಿತ್ ಶರ್ಮಾ 50, ಶುಭ್ಮನ್ ಗಿಲ್ 50 ರನ್ ಬಾರಿಸಿರಬಹುದು. ಸ್ವಿಂಗ್, ಸೀಮಿಂಗ್ ಆಗುವ ಈ ರೀತಿಯ ಪಿಚ್‌ನಲ್ಲಿ ಸ್ಪಿನ್ನರ್ ಏಳು ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದರೆ ಅದು ಅದ್ಭುತವಾಗಿದೆ," ಎಂದು ಗೌತಮ್ ಗಂಭೀರ್ ತಿಳಿಸಿದರು.
"ಎಲ್ಲದಕ್ಕಿಂತ ಮುಖ್ಯವಾಗಿ, ಸಾಂಪ್ರದಾಯಿಕವಾಗಿ ಸ್ಪಿನ್ ಬೌಲಿಂಗ್ ಅನ್ನು ಚೆನ್ನಾಗಿ ಆಡುವ ಪಾಕಿಸ್ತಾನದ ಬ್ಯಾಟರ್‌ಗಳು ಕುಲದೀಪ್ ಯಾದವ್ ವಿರುದ್ಧ ಅಟ್ಯಾಕ್ ಮಾಡಲು ಸಾಧ್ಯವಾಗಲಿಲ್ಲ ಎಂದು ನನಗೆ ಆಶ್ಚರ್ಯವಾಯಿತು," ಎಂದರು.
"ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಅಥವಾ ನ್ಯೂಜಿಲೆಂಡ್ ಆಗಿದ್ದರೆ ನನಗೆ ಅರ್ಥವಾಗುತ್ತದೆ. ಅವರು ಮಣಿಕಟ್ಟಿನ ಸ್ಪಿನ್ ಬೌಲಿಂಗ್ ಅನ್ನು ಚೆನ್ನಾಗಿ ಆಡುವುದಿಲ್ಲ. ಇದು ಬೌಲರ್‌ನ ಗುಣಮಟ್ಟವನ್ನು ತೋರಿಸುತ್ತದೆ. ಅವರು ಗಾಳಿಯಲ್ಲಿ ಎದುರಾಳಿಗಳನ್ನು ಕಟ್ಟಿ ಹಾಕಿದ್ದಾರೆ ಮತ್ತು ವಿಕೆಟ್ ಪಡೆಯುವ ವೇಗಿಗಳನ್ನು ಹಿಂದಿಕ್ಕಿಂದ್ದಾರೆ. ಇದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದು," ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭಿರ್ ಅಭಿಪ್ರಾಯಪಟ್ಟರು.
ಇನ್ನು ಪಂದ್ಯದ ಕುರಿತು ಮಾತನಾಡುವುದಾದರೆ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ತನ್ನ ನೆಚ್ಚಿನ ಮೈದಾನದಲ್ಲಿ ಅಜೇಯ ಶತಕವನ್ನು ಬಾರಿಸಿದ್ದಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಸಿಡಿಸಿದರು. ಇನ್ನು ಕರ್ನಾಟಕದ ಕೆಎಲ್ ರಾಹುಲ್ ಅವರ 6ನೇ ಶತಕವಾಗಿತ್ತು.
ಇದಕ್ಕೂ ಮುನ್ನ ಭಾರತದ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 121 ರನ್‌ಗಳ ಜೊತೆಯಾಟ ನೀಡುವ ಮೂಲಕ ಭದ್ರ ಬುನಾದಿ ಹಾಕಿದ್ದರು.
ರೋಹಿತ್ ಶರ್ಮಾ ಅವರು ಶಾದಾಬ್ ಖಾನ್‌ಗೆ ವಿಕೆಟ್ ಒಪ್ಪಿಸಿದ ನಂತರ, ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೊಹ್ಲಿ ಅವರು 55 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಆ ಬಳಿಕ ಕೊಹ್ಲಿ 84 ಎಸೆತಗಳಲ್ಲಿ ತಮ್ಮ 47ನೇ ಏಕದಿನ ಶತಕ ಪೂರೈಸಿದರು. ಅಂತಿಮವಾಗಿ 94 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 122 ರನ್ ಗಳಿಸಿದರು.
ಕರ್ನಾಟಕದ ಮಂಗಳೂರು ಮೂಲದ ಕೆಎಲ್ ರಾಹುಲ್ 106 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 111 ರನ್ ಗಳಿಸಿ ವಿರಾಟ್ ಕೊಹ್ಲಿ ಸಮರ್ಥ ಜೊತೆಗಾರನಾದರು.