ಮತ್ತೆ ಟೆನಿಸ್ ಕೋರ್ಟ್‌ನಲ್ಲಿ ಕಾಣಿಸಿಕೊಂಡ ಫೆಡರರ್: ವೈರಲ್ ಆಯ್ತು ವಿಡಿಯೋ!

ವಿಶ್ವ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರೆನಿಸಿದ ದಿಗ್ಗಜ ಟೆನಿಸ್ ಆಟಗಾರ ರೋಜರ್ ಫೆಡರರ್ ಕಳೆದ ವರ್ಷ ವಿಂಬಲ್ಡನ್‌ನಲ್ಲಿ ಸೋತು ನಿರ್ಗಮಿಸಿದ ಬಳಿಕ ಟೆನಿಸ್ ಅಂಗಳದಲ್ಲಿ ಮತ್ತೆ ಕಾಣಿಸಿಕೊಂಡಿಲ್ಲ. ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಈ ದಿಗ್ಗಜ ಆಟಗಾರ ಅನಿವಾರ್ಯವಾಗಿ ವರ್ಷಗಳ ಕಾಲ ಸ್ಪರ್ಧಾತ್ಮಕ ಟೂರ್ನಿಯಿಂದ ಹೊರಗುಳಿಯಬೇಕಾಯಿತು. 20 ಗ್ರ್ಯಾಂಡ್‌ಸ್ಲಾಮ್‌ಗಳನ್ನು ಗೆದ್ದಿರುವ ಈ ಶ್ರೇಷ್ಠ ಟೆನಿಸ್ ಪಟು ಮತ್ತೆ ಅಂಗಳಕ್ಕಿಳಿದು ಮನರಂಜಿಸಲಿದ್ದಾರೆ ಎಂದು ಕೋಟ್ಯಂತರ ಟೆನಿಸ್ ಪ್ರೇಮಿಗಳು ನಿರೀಕ್ಷೆಯಲ್ಲಿದ್ದಾರೆ.
ಈ ಮಧ್ಯೆ 41ರ ಹರೆಯದ ಹಿರಿಯ ಟೆನಿಸ್ ಆಟಗಾರ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಈ ವಿಡಿಯೋ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಟೆನಿಸ್ ಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಇದಾಗಿದ್ದು ಪೆಡರರ್ ಕೆಲ ಶಾಟ್‌ಗಳನ್ನು ಬಾರಿಸುತ್ತಿರುವ ದೃಶ್ಯಗಳಿದೆ.
ಈ ವಿಡಿಯೋಗಳನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಕಾಮೆಂಟ್ಸ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ದಿಗ್ಗಜ ಆಟಗಾರನ ಮೇಲಿರುವ ತಮ್ಮ ಅಭಿಮಾನ, ಪ್ರೀತಿಯನ್ನು ಟೆನಿಸ್ ಪ್ರೇಮಿಗಳು ವ್ಯಕ್ತಪಡಿಸುತ್ತಿದ್ದಾರೆ.
ಓರ್ವ ಅಭಿಮಾನಿ "ಕಿಂಗ್ ಈಸ್ ಬ್ಯಾಕ್" ಎಂದು ಕಾಮೆಂಟ್ ಮಾಡಿದರೆ ಮತ್ತೋರ್ವ "ತಮ್ಮನ್ನು ಮಿಸ್ ಮಾಡಿಕೊಳ್ಳುತ್ತಿರುವೆ" ಎಂದು ಬರೆದುಕೊಂಡಿದ್ದಾರೆ. "ನಿಮ್ಮನ್ನು ಮತ್ತೆ ಅಂಗಳದಲ್ಲಿ ಸೋಲಲು ಹರ್ಷವಾಗುತ್ತಿದೆ" ಎಂದು ಕೆಲ ಅಭಿಮಾನಿಗಳು ತಮ್ಮ ಕಾಮೆಂಟ್ ಹಾಕಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ಅಭಿಮಾನಿಗಳು ದಿಗ್ಗಜ ಟೆನಿಸ್ ಆಟಗಾರ ರೋಜರ್ ಫೆಡರರ್‌ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications