Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲೆಜೆಂಡ್ಸ್ ಲೀಗ್ ಸೀಸನ್ 2: ಕಣಕ್ಕಿಳಿಯುವುದನ್ನು ಖಚಿತಪಡಿಸಿದ ಕಿವಿಸ್, ದ. ಆಫ್ರಿಕಾ ದಿಗ್ಗಜರು!

Legends League Cricket-2: Ross Taylor, Morne Morkel, Lance Klusener confirm to participate in LLC 2

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಮೊದಲ ಆವೃತ್ತಿ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಮನರಂಜನೆ ನೀಡಿತ್ತು. ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ದಿಗ್ಗಜರ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಈ ಟೂರ್ನಿ ನೀಡಿತ್ತು. ಇದೀಗ ಮತ್ತೊಮ್ಮೆ ಎರಡನೇ ಆವೃತ್ತಿಯ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ನೀಡಲು ಈ ಟೂರ್ನಿ ಸಿದ್ಧವಾಗುತ್ತಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಮಾಜಿ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದಾಗಿ ಘೋಷಿಸುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಕಾತುರತೆ ಹೆಚ್ಚಿಸಿದೆ.

ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಸೆಪ್ಟೆಂಬರ್ 20ರಿಂದ ಪ್ರಾರಂಭಗೊಳ್ಳಲಿದ್ದು ಅಕ್ಟೋಬರ್ 10ರಂದು ಫೈನಲ್ ಪಂದ್ಯ ಆಯೋಜನೆಯಾಗಲಿದೆ. ಮೊದಲ ಆವೃತ್ತಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಇಂಗ್ಲೆಂಡ್ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರು ಈ ಟೂರ್ನಿಯಲ್ಲಿ ಆಡಿದ್ದರು. ಮೂರು ತಂಡಗಳು ಮೊದಲ ಆವೃತ್ತಿಯಲ್ಲಿ ಸ್ಪರ್ಧಿಸುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿತ್ತು.

ನಾವೂ ಭಾಗಿಯಾಗುತ್ತೇವೆ ಎಂದ ಟೇಲರ್, ಮಾರ್ಕೆಲ್, ಕ್ಲೂಸ್ನರ್

ನಾವೂ ಭಾಗಿಯಾಗುತ್ತೇವೆ ಎಂದ ಟೇಲರ್, ಮಾರ್ಕೆಲ್, ಕ್ಲೂಸ್ನರ್

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ, ಭಾರತದ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ, ದಕ್ಷಿಣ ಆಫ್ರಿಕಾದ ದಿಗ್ಗಜರಾದ ಜಾಂಟಿ ರೋಡ್ಸ್ ಹಾಗೂ ಅಲ್ಬೀ ಮಾರ್ಕೆಲ್, ಇಂಗ್ಲೆಂಡ್‌ನ ಲಿಯಾಮ್ ಪ್ಲಂಕೆಟ್ ಶ್ರೀಲಂಕಾದ ಅಜಂತಾ ಮೆಂಡಿಸ್ ಹಾಗೂ ದಿಲ್ಹರ ಫೆರ್ನಾಂಡೋ ಲೆಜೆಂಡ್ಸ್ ಲೀಗ್‌ನಲ್ಲಿ ಭಾಗಿಯಾಗುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಈ ಪಟ್ಟಿ ಮತ್ತಷ್ಟು ಬೆಳೆಯುತ್ತಿದೆ. ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರಾದ ಮಾರ್ನೆ ಮಾರ್ಕೆಲ್ ಹಾಗೂ ಲ್ಯಾನ್ಸ್ ಕ್ಲೂಸ್ನರ್ ಕೂಡ ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ

ಮತ್ತೆ ಕಣಕ್ಕಿಳಿಯಲಿದ್ದಾರೆ ವೀರೇಂದ್ರ ಸೆಹ್ವಾಗ್

ಮತ್ತೆ ಕಣಕ್ಕಿಳಿಯಲಿದ್ದಾರೆ ವೀರೇಂದ್ರ ಸೆಹ್ವಾಗ್

ಇನ್ನು ಇದಕ್ಕೂ ಮುನ್ನ ಈ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಸೇರಿದಂತೆ ಮುರಳೀಧರನ್, ಮಾಂಟಿ ಪೆನೆಸರ್, ಪ್ರವೀಣ್ ತಾಂಬೆ, ನಮನ್ ಓಜಾ, ಎಸ್ ಬದ್ರೀನಾಥ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಮಿಸ್ಬಾ ಉಲ್ ಹಕ್, ಕೆವಿನ್ ಓಬ್ರಿಯಾನ್ ಹಾಗೂ ಅಸ್ಘರ್ ಅಫ್ಘಾನ್ ಆಡಲಿರುವುದಾಗಿ ಖಚಿತಪಡಿಸಿದ್ದರು.

ಹರ್ಷ ವ್ಯಕ್ತಪಡಿಸಿದ್ದ ಸೆಹ್ವಾಗ್

ಹರ್ಷ ವ್ಯಕ್ತಪಡಿಸಿದ್ದ ಸೆಹ್ವಾಗ್

ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಣಕ್ಕಿಳಿಯುವುದಾಗಿ ಖಚಿತ ಪಡಿಸಿದ್ದರು. ಈ ಸಂದರ್ಭದಲ್ಲಿ ಅವರು "ನಾನು ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯುವುದಕ್ಕೆ ಸಂತೋಷಗೊಂಡಿದ್ದೇನೆ. ನಾನು ಮೊದಲ ಆವೃತ್ತಿಯಲ್ಲಿ ಕಣಕ್ಕಿಲಿಯುವ ಅವಕಾಶವನ್ನು ಕಳೆದುಕೊಂಡಿದ್ದೆ. ಈ ಬಾರಿ ಇದು ಮತ್ತಷ್ಟು ಹೊಸತನದೊಂದಿಗೆ ಆಯೋಜನೆಯಾಗುವ ನಿರೀಕ್ಷೆಯಿದೆ. ಹಾಗಾಗಿ ನಾನು ಒಮಾನ್‌ನಲ್ಲಿ ಈ ಟೂರ್ನಿಯಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ" ಎಂದಿದ್ದರು ಸೆಹ್ವಾಗ್.

ಕುತೂಹಕ ಮೂಡಿಸಿದೆ ಎರಡನೇ ಆವೃತ್ತಿ

ಕುತೂಹಕ ಮೂಡಿಸಿದೆ ಎರಡನೇ ಆವೃತ್ತಿ

ಇನ್ನು ಕಳೆದ ಆವೃತ್ತಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಆಟಗಾರರು, ಭಾರತ, ಏಷ್ಯಾ ಹಾಗೂ ವಿಶ್ವ ತಂಡ ಎಂದು ಮೂರು ತಂಡಗಳಾಗಿ ಹಣಾಹಣಿ ನಡೆಸಿದ್ದರು. ಆದರೆ ಈ ಬಾರಿ ಯಾವ ಮಾದರಿಯಲ್ಲಿ ಈ ಟೂರ್ನಿ ಆಯೋಜನೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ

Story first published: Wednesday, July 27, 2022, 22:25 [IST]
Other articles published on Jul 27, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+