Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲೆಜೆಂಡ್ಸ್ ಲೀಗ್ ಕ್ರಿಕೆಟ್: ಇಂಡಿಯಾ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್; ಟಾಸ್ ವರದಿ & ಲೈವ್ ಸ್ಕೋರ್

Legends League Cricket 2022: India Capitals vs Gujarat Giants Match Toss Report & Live Score

ಭಾರೀ ನಿರೀಕ್ಷೆ ಮೂಡಿಸಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಆವೃತ್ತಿ ಇಂದಿನಿಂದ (ಶನಿವಾರ, ಸೆ. 17) ಆರಂಭವಾಗುತ್ತಿದೆ. ಈ ಬಾರಿ ನಾಲ್ಕು ತಂಡಗಳು ಈ ಟೂರ್ನಿಯಲ್ಲಿ ಸೆಣೆಸಾಟವನ್ನು ನಡೆಸಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶನಿವಾರ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ನಾಯಕತ್ವದ ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಹೀಗಾಗಿ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.

ವಿಶ್ವ ಜೈಂಟ್ಸ್ ತಂಡದ ವಿರುದ್ಧ ಇಂಡಿಯಾ ಮಹಾರಾಜಾಸ್ ತಂಡ ಗೆದ್ದ ಅದೇ ಸ್ಥಳದಲ್ಲಿ (ಕೋಲ್ಕತ್ತಾ) ಶುಕ್ರವಾರ ವಿಶೇಷ ಪಂದ್ಯವನ್ನು ಆಡಲಾಯಿತು. ಇಂಡಿಯಾ ಕ್ಯಾಪಿಟಲ್ಸ್ ತಂಡವನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮುನ್ನಡೆಸಲಿದ್ದು, ಗುಜರಾತ್ ಜೈಂಟ್ಸ್ ತಂಡವನ್ನು ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮುನ್ನಡೆಸಲಿದ್ದಾರೆ.

ಇಂಡಿಯಾ ಕ್ಯಾಪಿಟಲ್ಸ್ ತಂಡದಲ್ಲಿ ಜಾಕ್ವೆಸ್ ಕಾಲಿಸ್, ರಾಸ್ ಟೇಲರ್, ರವಿ ಬೋಪಾರಾ ಅವರಿದ್ದು, ಗುಜರಾತ್ ಜೈಂಟ್ಸ್ ತಂಡದಲ್ಲಿ ಡೇನಿಯಲ್ ವೆಟ್ಟೋರಿ, ಪಾರ್ಥಿವ್ ಪಟೇಲ್ ಮತ್ತು ಕ್ರಿಸ್ ಗೇಲ್ ಇದ್ದಾರೆ.

ಗುಜರಾತ್ ಜೈಂಟ್ಸ್ ತಂಡದ ಆಡುವ ಹನ್ನೊಂದರ ಬಳಗ
ವೀರೇಂದ್ರ ಸೆಹ್ವಾಗ್ (ನಾಯಕ), ಕೆವಿನ್ ಓ'ಬ್ರಿಯಾನ್, ಪಾರ್ಥಿವ್ ಪಟೇಲ್, ಮನ್ವಿಂದರ್ ಬಿಸ್ಲಾ, ತಿಸರಾ ಪೆರೆರಾ, ಯಶ್‌ಪಾಲ್ ಸಿಂಗ್, ರ್ಯಾನ್ ರಯಾಡ್ ಎಮ್ರಿಟ್, ಮಿಚೆಲ್ ಮೆಕ್‌ಕ್ಲೆನೆಘನ್, ಗ್ರೇಮ್ ಸ್ವಾನ್, ಅಶೋಕ್ ದಿಂಡಾ, ಕೆ.ಪಿ ಅಪ್ಪಣ್ಣ.

ಇಂಡಿಯಾ ಕ್ಯಾಪಿಟಲ್ಸ್ ತಂಡದ ಆಡುವ ಹನ್ನೊಂದರ ಬಳಗ
ಜಾಕ್ವೆಸ್ ಕಾಲಿಸ್ (ನಾಯಕ), ಎಸ್. ಮೈರ್, ಎಚ್. ಮಸಕಜ, ದಿನೇಶ್ ರಾಮ್‌ದಿನ್, ಎ. ನರ್ಸೆ, ಎಸ್. ಶರ್ಮಾ, ಎಲ್. ಪ್ಲಂಕೆಟ್, ಮಿಚೆಲ್ ಜಾನ್ಸನ್, ಪಿ. ಸಿಂಗ್, ಪಿ. ಸುಯಲ್, ಪಿ. ಗುಪ್ತಾ.

Story first published: Saturday, September 17, 2022, 20:06 [IST]
Other articles published on Sep 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+