For Quick Alerts
ALLOW NOTIFICATIONS  
For Daily Alerts
 

Sreesanth vs Gautam Gambhir: ಶ್ರೀಶಾಂತ್ vs ಗೌತಮ್ ಗಂಭೀರ್ ಆನ್‌ಫೀಲ್ಡ್ ಜಗಳ ವೈರಲ್!

ಬುಧವಾರ, ಡಿಸೆಂಬರ್ 6ರಂದು ಸೂರತ್‌ನಲ್ಲಿ ನಡೆದ 2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ (ಎಲ್‌ಎಲ್‌ಸಿ) ಇಂಡಿಯಾ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಭಾರತದ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರ ಜಗಳ ತಾರಕಕ್ಕೇರಿತು.

ಇಂಡಿಯಾ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಹಾಗೂ ಮಾಜಿ ವೇಗಿ ಎಸ್ ಶ್ರೀಶಾಂತ್ ಒಳಗೊಂಡಿರುವ ಮತ್ತೊಂದು ಆನ್‌ಫೀಲ್ಡ್ ಜಗಳ ನಡೆದಿದೆ.

Legends League Cricket 2023: S Sreesanth vs Gautam Gambhir On-field Clash Video Goes Viral


ಎಸ್ ಶ್ರೀಶಾಂತ್ ಇಂಡಿಯಾ ಗುಜರಾತ್ ಜೈಂಟ್ಸ್ ತಂಡದ ಪರ ಆಡಿದ್ದರೆ, ಗೌತಮ್ ಗಂಭೀರ್ ಇಂಡಿಯಾ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಗಂಭೀರ್ ಅವರ ಕೆಟ್ಟ ನಡವಳಿಕೆಯಿಂದ ಶ್ರೀಶಾಂತ್ ತುಂಬಾ ಕೋಪಗೊಂಡಿದ್ದರು ಮತ್ತು ಅವರು ಅವರನ್ನು ಟೀಕಿಸಲು ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಜಗಳ ಆರಂಭವಾಗಿದ್ದೇಗೆ?
ಎರಡನೇ ಇನ್ನಿಂಗ್ಸ್‌ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ನಾಯಕ ಗೌತಮ್ ಗಂಭೀರ್ ಅವರು ಎಸ್ ಶ್ರೀಶಾಂತ್ ಬೌಲಿಂಗ್‌ನಲ್ಲಿ ಕೆಲವು ಬೌಂಡರಿಗಳಿಗೆ ಬಾರಿಸಿದರು. ಇದರಿಂದ ಎಸ್ ಶ್ರೀಶಾಂತ್ ಹತಾಶೆಯಿಂದ ಗಂಭೀರ್‌ಗೆ ಕೆಲವು ಮಾತುಗಳನ್ನು ರವಾನಿಸಿದರು.

ಇದಕ್ಕೆ ಪ್ರತಿಯಾಗಿ ಗೌತಮ್ ಗಂಭೀರ್, ಗುಜರಾತ್ ಜೈಂಟ್ಸ್ ವೇಗಿಗಳ ವಿರುದ್ಧ ದೊಡ್ಡ ಶಾಟ್ ಮೂಲಕ ಚೆಂಡನ್ನು ಬೌಂಡರಿಗಟ್ಟಿದರು. ಇದು ಅಲ್ಲಿಗೇ ನಿಲ್ಲದೆ, ಇಂಡಿಯಾ ಕ್ಯಾಪಿಟಲ್ಸ್ ಬ್ಯಾಟರ್ ಒಬ್ಬ ಔಟಾದ ನಂತರ ಅಭಿಮಾನಿಯೊಬ್ಬರು ಸ್ಟ್ಯಾಂಡ್‌ನಿಂದ ವಿಡಿಯೋ ರೆಕಾರ್ಡ್ ಮಾಡಿದರು. ಈ ವಿರಾಮದಲ್ಲಿ ಗೌತಮ್ ಗಂಭೀರ್ ಮತ್ತು ಎಸ್ ಶ್ರೀಶಾಂತ್ ಮತ್ತೆ ಅತಿರೇಕದ ಮಾತುಗಳನ್ನು ವಿನಿಮಯ ಮಾಡಿಕೊಂಡರು.

ಕ್ವಾಲಿಫೈಯರ್ 2ನಲ್ಲಿ ಸ್ಥಾನವನ್ನು ಕಾಯ್ದಿರಿಸಲು ಇಂಡಿಯಾ ಕ್ಯಾಪಿಟಲ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸುವುದರೊಂದಿಗೆ ಪಂದ್ಯ ಮುಗಿಸಿತು. ಆ ಬಳಿಕ ಎಸ್ ಶ್ರೀಶಾಂತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಬಿಡುಗಡೆ ಮಾಡಿ, ಗೌತಮ್ ಗಂಭೀರ್ ಕೆಲವು ಅವಹೇಳನಕಾರಿ ಮಾತುಗಳನ್ನು ಹೇಳಿದ್ದಾರೆ ಎಂದು ಆರೋಪಿಸಿದರು.

"ಯಾವುದೇ ಕಾರಣವಿಲ್ಲದೆ ತನ್ನ ಎಲ್ಲಾ ಸಹ ಆಟಗಾರರೊಂದಿಗೆ ಜಗಳವಾಡುವ ಮಿಸ್ಟರ್ ಗೌತಮ್ ಗಂಭಿರ್, ಜಗಳದ ವೇಳೆ ಏನಾಯಿತು ಎಂಬುದರ ಕುರಿತು ನಾನು ಸ್ವಲ್ಪ ಸ್ಪಷ್ಟಪಡಿಸಲು ಬಯಸುತ್ತೇನೆ. ಗಂಭಿರ್ ಅವರು ವೀರೂ ಭಾಯಿ (ವೀರೇಂದ್ರ ಸೆಹ್ವಾಗ್) ಮತ್ತು ಬಹಳಷ್ಟು ಆಟಗಾರರನ್ನು ಮತ್ತು ತಮ್ಮದೇ ಆದ ಹಿರಿಯ ಆಟಗಾರರನ್ನು ಸಹ ಗೌರವಿಸುವುದಿಲ್ಲ. ಯಾವುದೇ ಪ್ರಚೋದನೆ ಇಲ್ಲದೆ, ಅವರು ನನ್ನನ್ನು ತುಂಬಾ ಅಸಭ್ಯವಾಗಿ ಕರೆಯುತ್ತಲೇ ಇದ್ದರು. ಗೌತಮ್ ಗಂಭೀರ್ ಇದನ್ನು ಎಂದಿಗೂ ಹೇಳಬಾರದಿತ್ತು," ಎಂದು ಎಸ್ ಶ್ರೀಶಾಂತ್ ವಿಡಿಯೋದಲ್ಲಿ ಹೇಳಿದರು.

ಭಾರತದ ಮಾಜಿ ವೇಗಿ ಎಸ್ ಶ್ರೀಶಾಂತ್ ಈ ಹಿಂದೆ ಐಪಿಎಲ್ ಪಂದ್ಯದ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದ್ದರು ಮತ್ತು ನಂತರ ಯಾವುದೇ ರೀತಿಯ ಕ್ರಿಕೆಟ್ ಆಡದಂತೆ ನಿಷೇಧಿಸಲಾಯಿತು. ಆದಾಗ್ಯೂ, ಕೆಲವು ವರ್ಷಗಳ ಹಿಂದೆ ಕೋರ್ಟ್ ಅವರ ಮೇಲಿನ ನಿಷೇಧವನ್ನು ತೆಗೆದುಹಾಕಿತು ಮತ್ತು ಎಸ್ ಶ್ರೀಶಾಂತ್ ನಂತರ ವಿವಿಧ ಲೀಗ್‌ಗಳನ್ನು ಆಡುತ್ತಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯದ ವೇಳೆ ಗೌತಮ್ ಗಂಭೀರ್ ತನಗೆ ನಿಖರವಾಗಿ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸುವುದಾಗಿ ಹೇಳಿದ ಎಸ್ ಶ್ರೀಶಾಂತ್, ಈ ಮಾತುಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ನೋವುಂಟು ಮಾಡಿದೆ ಎಂದಿದ್ದಾರೆ.

"ನನ್ನ ತಪ್ಪೇನೂ ಇಲ್ಲ, ಅವರು ಬಳಸಿದ ಪದಗಳು ಮತ್ತು ಕ್ರಿಕೆಟ್ ಮೈದಾನದಲ್ಲಿ ಅವರು ಹೇಳಿದ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಶೀಘ್ರದಲ್ಲೇ ನಿಮಗೆ ತಿಳಿಯುತ್ತದೆ".

ತಮ್ಮ ಹಿರಿಯ ಮತ್ತು ಸಹ ಆಟಗಾರರನ್ನು ಗೌರವಿಸುವುದಿಲ್ಲ ಎಂದು ಹೇಳುವ ಮೂಲಕ ವೇಗದ ಬೌಲರ್ ಶ್ರೀಶಾಂತ್ ಅವರು ಗೌತಮ್ ಗಂಭೀರ್ ಮೇಲಿನ ದಾಳಿಯನ್ನು ಮುಂದುವರೆಸಿದರು. ನಿಮ್ಮ ಸಹ ಆಟಗಾರರನ್ನು ಗೌರವಿಸದಿದ್ದರೆ ತಂಡವನ್ನು ಪ್ರತಿನಿಧಿಸುವುದರಲ್ಲಿ ಅರ್ಥವಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

"ನಿಮ್ಮ ಸ್ವಂತ ಸಹ ಆಟಗಾರರನ್ನು ಗೌರವಿಸದಿದ್ದರೆ ಜನರನ್ನು ಪ್ರತಿನಿಧಿಸುವುದರಲ್ಲಿ ಏನು ಪ್ರಯೋಜನ, ಕಾಮೆಂಟರಿ ಸಮಯದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಕೇಳಿದಾಗ, ಅವರು ಎಂದಿಗೂ ಮಾತನಾಡುವುದಿಲ್ಲ, ಅವರು ಬೇರೆ ಯಾವುದನ್ನಾದರೂ ಮಾತನಾಡುತ್ತಾರೆ. ನಾನು ಹೆಚ್ಚು ವಿವರವಾಗಿ ಹೋಗಲು ಬಯಸುವುದಿಲ್ಲ. ನನಗೆ ತುಂಬಾ ನೋವಾಗಿದೆ ಎಂದು ಹೇಳಲು ಬಯಸುತ್ತೇನೆ. ನನ್ನ ಕುಟುಂಬಕ್ಕೆ ನೋವಾಗಿದೆ. ನಾನು ಯಾವುದೇ ಕೆಟ್ಟ ಪದ ಬಳಸಿಲ್ಲ," ಎಂದು ಶ್ರೀಶಾಂತ್ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.

ಎಸ್ ಶ್ರೀಶಾಂತ್ ಮಾಡಿದ ಆರೋಪಗಳಿಗೆ ಗೌತಮ್ ಗಂಭೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಅನುಭವಿ ಕ್ರಿಕೆಟಿಗರು 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಸಹ ಆಟಗಾರರಾಗಿದ್ದರು.

Story first published: Thursday, December 7, 2023, 10:12 [IST]
Other articles published on Dec 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+