ಲೆಜೆಂಡ್ಸ್ ಲೀಗ್ ಕ್ರಿಕೆಟ್: ವಿಶೇಷ ಪಂದ್ಯದಲ್ಲಿ ಆಡಲಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಮಾಜಿ ಕ್ರಿಕೆಟಿಗರಿಗಾಗಿ ಇರುವ ಕ್ರಿಕೆಟ್ ಲೀಗ್ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಅನೇಕ ಮಾಜಿ ಕ್ರಿಕೆಟಿಗರು ಈ ಮಹತ್ವದ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಹಾಗೂ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಈ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ವಿಶೇಷ ಪಂದ್ಯವೊಂದರಲ್ಲಿ ತಾನು ಆಡುತ್ತಿರುವುದಾಗಿ ಸೌರವ್ ಗಂಗೂಲಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಭಾರತದಲ್ಲಿಯೇ ಆಯೋಜನೆ ಮಾಡುತ್ತಿರುವುದಾಗಿ ಆಯೋಜಕರು ಸ್ಪಷ್ಟಪಡಿಸಿದ್ದರು. ಹೀಗಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಆಟವನ್ನು ಅಭಿಮಾಣಿಗಳು ಮತ್ತೆ ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಮನ್ ರಹೇಜಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇತರ ದಿಗ್ಗಜರೊಂದಿಗೆ ಪಂದ್ಯವನ್ನು ಆಡುತ್ತಿರುವ ದಿಗ್ಗಜ ಸೌರವ್ ಗಂಗೂಲಿ ಅವರಿಗೆ ಧನ್ಯವಾದಗಳು. ಒಮ್ಮೆ ಲೆಜೆಂಡ್ ಎನಿಸಿದರೆ ಆತ ಯಾವಾಗಲೂ ಲೆಜೆಂಡ್. ದಾದಾ ಯಾವಾಗಲೂ ಕ್ರಿಕೆಟ್‌ಗಾಗಿ ಇರುವ ವ್ಯಕ್ತಿ. ಅವರು ವಿಶೇಷ ಸಾಮಾಜಿಕ ಕಳಕಳಿಗಾಗಿ ಪಂದ್ಯವನ್ನು ಆಡಲಿದ್ದಾರೆ. ಇದು ನಮ್ಮ ಪ್ರೇಕ್ಷಕರಿಗೆ ಅದ್ಭುತವಾದ ಸಂದರ್ಭವಾಗಿರಲಿದೆ. ಈ ಸಂದರ್ಭದಲ್ಲಿ ದಾದಾ ಅವರ ಸಾಂಪ್ರದಾಯಿಕ ಹೊಡೆತಗಳನ್ನು ನಿರೀಕ್ಷಿಸಬಹುದು" ಎಂದಿದ್ದಾರೆ.
ಹರ್ಷ ವ್ಯಕ್ತಪಡಿಸಿದ್ದ ಸೆಹ್ವಾಗ್: ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಣಕ್ಕಿಳಿಯುವುದಾಗಿ ಖಚಿತ ಪಡಿಸಿದ್ದರು. ಈ ಸಂದರ್ಭದಲ್ಲಿ ಅವರು "ನಾನು ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯುವುದಕ್ಕೆ ಸಂತೋಷಗೊಂಡಿದ್ದೇನೆ. ನಾನು ಮೊದಲ ಆವೃತ್ತಿಯಲ್ಲಿ ಕಣಕ್ಕಿಲಿಯುವ ಅವಕಾಶವನ್ನು ಕಳೆದುಕೊಂಡಿದ್ದೆ. ಈ ಬಾರಿ ಇದು ಮತ್ತಷ್ಟು ಹೊಸತನದೊಂದಿಗೆ ಆಯೋಜನೆಯಾಗುವ ನಿರೀಕ್ಷೆಯಿದೆ. ಹಾಗಾಗಿ ನಾನು ಈ ಟೂರ್ನಿಯಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ" ಎಂದಿದ್ದರು ಸೆಹ್ವಾಗ್
ಕುತೂಹಲ ಮೂಡಿಸಿದೆ ಎರಡನೇ ಆವೃತ್ತಿ: ಇನ್ನು ಕಳೆದ ಆವೃತ್ತಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಆಟಗಾರರು, ಭಾರತ, ಏಷ್ಯಾ ಹಾಗೂ ವಿಶ್ವ ತಂಡ ಎಂದು ಮೂರು ತಂಡಗಳಾಗಿ ಹಣಾಹಣಿ ನಡೆಸಿದ್ದರು. ಆದರೆ ಈ ಬಾರಿ ಯಾವ ಮಾದರಿಯಲ್ಲಿ ಈ ಟೂರ್ನಿ ಆಯೋಜನೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ
ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ, ಭಾರತದ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ, ದಕ್ಷಿಣ ಆಫ್ರಿಕಾದ ದಿಗ್ಗಜರಾದ ಜಾಂಟಿ ರೋಡ್ಸ್ ಹಾಗೂ ಅಲ್ಬೀ ಮಾರ್ಕೆಲ್, ಇಂಗ್ಲೆಂಡ್‌ನ ಲಿಯಾಮ್ ಪ್ಲಂಕೆಟ್ ಶ್ರೀಲಂಕಾದ ಅಜಂತಾ ಮೆಂಡಿಸ್ ಹಾಗೂ ದಿಲ್ಹರ ಫೆರ್ನಾಂಡೋ ಲೆಜೆಂಡ್ಸ್ ಲೀಗ್‌ನಲ್ಲಿ ಭಾಗಿಯಾಗುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಈ ಪಟ್ಟಿ ಮತ್ತಷ್ಟು ಬೆಳೆಯುತ್ತಿದೆ. ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರಾದ ಮಾರ್ನೆ ಮಾರ್ಕೆಲ್ ಹಾಗೂ ಲ್ಯಾನ್ಸ್ ಕ್ಲೂಸ್ನರ್ ಕೂಡ ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications